Advertisement
ಪಡುಬಿದ್ರಿಯಲ್ಲಿ ಹೊಸ ಚತುಃಷ್ಪಥ ಹೆದ್ದಾರಿಯ ಸಮತೋಲಿತ ಸ್ಥಿತಿ ಹೇಗಿರುತ್ತದೆ. ದ್ವಿಪಥಗಳು ಈಗಿನ ಕಟ್ಟಡಗಳ ಎದುರು ಎಷ್ಟು ಎತ್ತರದಲ್ಲಿ ಹಾದು ಹೋಗುತ್ತವೆ ಎಂಬುದನ್ನು ಆಧರಿಸಿ ನೂತನ ಪ್ರಯೋಗಗಳನ್ನು ಮಾಡೋಣವೆಂದು ಕೆಲ ಕಟ್ಟಡದ ಮಾಲಕರು ಬಯಸಿದ್ದಾರೆ. ಹಾಗಾಗಿ ಹಿಂದಿನ ಪಡುಬಿದ್ರಿಯನ್ನು ನೋಡಿದ ಮಂದಿಗೆ ಹೊಸ ರೂಪದತ್ತ ಬದಲಾಗುತ್ತಿರುವ ಪಡುಬಿದ್ರಿಯ ಪರಿಚಯವೂ ಅಷ್ಟು ಸುಲಭವಾಗಿ ಆಗಲಿಕ್ಕಿಲ್ಲ. ಎಲ್ಲವೂ ಕಾಲಗರ್ಭದಲ್ಲಿ ಅಡಗಿದಾಗ ಮತ್ತೆ ಹಳ್ಳಿಯ ರೂಪಕ್ಕಿಳಿದು ಪುಟಿದೆದ್ದು ಬರಬೇಕಿದೆ ನಮ್ಮ ಪಡುಬಿದ್ರಿ.
ಸ್ಥಳೀಯ ಗ್ರಾ. ಪಂ. ಗೆ ಇಲ್ಲಿನ ಒಳ ಚರಂಡಿ ಯೋಜನೆಯು ಸವಾಲೆನಿಸಲಿದೆ. ಮುಂದೆ ಚತುಃಷ್ಪಥ ಹೆದ್ದಾರಿ ಕಾಮಗಾರಿಯ ಬಳಿಕವೇ ಇದನ್ನು ನಿರ್ವಹಿಸಬೇಕಾಗಿರುವುದಾಗಿ ಗ್ರಾ. ಪಂ. ಹೇಳಿಕೊಳ್ಳುತ್ತಿದೆ. ಈ ಮಳೆಗಾಲದಲ್ಲೂ ಹೆದ್ದಾರಿ ಬದಿ ಶೌಚದ ನೀರೂ ಸೇರಿದಂತೆ ಮಲಿನ ನೀರು ಪಡುಬಿದ್ರಿಯ ಗಣಪತಿ ದೇಗುಲದತ್ತ ಹೋಗುತ್ತಿದ್ದು ಅನೇಕ ಬಾರಿ ಸ್ಥಳೀಯಾಡಳಿತದ ಗಮನಕ್ಕೂ ಸ್ಥಳೀಯರು ತಂದಿದ್ದಾರೆ. ಇಂದಿನ ಯೋಜಿತ ನಗರೀಕರಣದ ಮಧ್ಯೆಯೂ ರಾಷ್ಟ್ರೀಯ, ರಾಜ್ಯ ಹೆದ್ದಾರಿ ಪಕ್ಕದಲ್ಲಿನ ಕ್ಯಾಂಟೀನ್ ಒಂದರಿಂದ ಕಾರ್ಕಳ ಹಳೇ ರಸ್ತೆಯತ್ತ ಕೊಳಚೆ ನೀರು ಬರುತ್ತಿರುವುದು ಯಾರ ಗಮನಕ್ಕೂ ಬಂದಿಲ್ಲ. ಮೊದಲಾಗಿ ಹೊಸತು ನಗರೀಕರಣವು ಮುಂದೆ ನರಕೀಕರಣವಾಗದಿರಲಿ ಎಂಬ ಹಾರೈಕೆ ಪಡುಬಿದ್ರಿಯ ಜನತೆಯದ್ದಾಗಿದೆ.
Related Articles
ಆದರೂ ಬಲು ಮುಖ್ಯವಾಗಿ ಕಾರ್ಕಳ ರಾಜ್ಯ ಹೆದ್ದಾರಿಯನ್ನು ಪಡುಬಿದ್ರಿಗೆ ಹೇಗೆ ಹೊಂದಿಸಿಕೊಳ್ಳಲಾಗುತ್ತದೆ. ಇಲ್ಲಿನ ವಾಹನ ದಟ್ಟಣೆಯನ್ನು ಹೇಗೆ ನಿಭಾಯಿಸಲಾಗುತ್ತದೆ ಎನ್ನುವುದನ್ನು ಇದುವರೆಗೂ ನವಯುಗ ನಿರ್ಮಾಣ ಕಂಪೆನಿಯಾಗಲೀ, ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರವಾಗಲೀ ತುಟಿ ಬಿಚ್ಚದಿರುವುದು ಜನತೆಯ ಆತಂಕಕ್ಕೂ ಎಡೆ ಮಾಡಿಕೊಟ್ಟಿದೆ. ಹೆದ್ದಾರಿ ಪ್ರಾಧಿಕಾರದ ಕಠಿನ ಕಾನೂನುಗಳೂ ಹೆದ್ದಾರಿ ಸನಿಹದಲ್ಲಿ ಹೊಸ ವಾಣಿಜ್ಯ ಸಂಕೀರ್ಣಗಳು ತಲೆ ಎತ್ತಲು ನಿರ್ಬಂಧಿಸಿವೆ.
Advertisement
ಹೊರ ಚಾಚಿಕೊಳ್ಳಲಿರುವ ಪಡುಬಿದ್ರಿ ನಗರ ಸ್ವರೂಪಹಾಗಿದ್ದರೂ ನಗರ ಪಂಚಾಯತ್ ಸ್ಥಾನಮಾನಕ್ಕೆ ನಿಕಟವೆನಿಸಿರುವ ಪಡುಬಿದ್ರಿಯು ಹೆದ್ದಾರಿಯ ಒಂದು ಭಾಗದಲ್ಲಷ್ಟೇ ಅಲ್ಲದೆ ಹೃದಯಭಾಗದಿಂದ ಮೂಲ್ಕಿಯತ್ತ ಹೋಗುವ ಸುಮಾರು ಮೂರು ಕಿ.ಮೀ. ದೂರದಲ್ಲೂ ವಾಣಿಜ್ಯ ಸಂಕೀರ್ಣ, ಸಭಾ ಭವನಗಳನ್ನು ಸದ್ಯೋಭವಿಷ್ಯದಲ್ಲೇ ಹೊಂದಲಿದೆ. ಪಡುಬಿದ್ರಿಯ ಬಸ್ ನಿಲ್ದಾಣಗಳೂ ಬದಲಾವಣೆಗೊಂಡು ಹೊರ ಚಾಚಿಕೊಳ್ಳಲಿವೆ. ಈಗಾಗಲೇ ಪಡುಬಿದ್ರಿ ಗ್ರಾಮ ಪಂಚಾಯತ್ ಕಟ್ಟಡವನ್ನು ನವೀಕರಿಸಲು ಮುಹೂರ್ತವನ್ನು ನಿಗದಿಪಡಿಸಲಾಗಿದೆ. – ಆರಾಮ