ಪಡುಬಿದ್ರಿ: ಮಧ್ವನಗರದ ತರಂಗಿಣಿ ಮಿತ್ರ ಮಂಡಳಿಯ ಮಾಸಿಕ ಸಭೆಯಲ್ಲಿ ಉಡುಪಿ ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ಬಂಟಕಲ್ಲು ರಾಮಕೃಷ್ಣ ಶರ್ಮ ಅವರಿಂದ ಉಪಯುಕ್ತ ಕೃಷಿ ಮಾಹಿತಿ ವಿನಿಮಯ ಶಿಬಿರವು ಇತ್ತೀಚೆಗೆ ನಡೆಯಿತು.
ಇಂದಿನ ಕೃಷಿ ಕಾಯಕದಲ್ಲಿ ಕೃಷಿ ಕಾರ್ಮಿಕರನ್ನೂ ತೊಡಗಿಸಿ ಕೊಂಡು ಕೃಷಿಯನ್ನು ಅತ್ಯಂತ ಲಾಭದಾಯಕವಾಗಿ ಮಾಡಬಹು ದಾಗಿದೆ. ಕೃಷಿಕರಲ್ಲಿ ಜೀವನಾನುಭವ ಸಾಕಷ್ಟು ಇದೆಯಾದರೂ ಮಾತು ಮಾತಿಗೆ ಕೃಷಿಯಿಂದ ಲಾಭವಿಲ್ಲ ಎನ್ನುವ ಪರಿಸ್ಥಿತಿ ಉದ್ಭವಿಸಿದೆ. ಕೃಷಿಕರಿಗೆ ಎಂದೂ ದುರ್ಭಿಕ್ಷೆ ಇರದು ಎಂದು ರಾಮಕೃಷ್ಣ ಶರ್ಮ ಅವರು ಹೇಳಿದರು.
ಕೃಷಿ ವಿಚಾರ ವಿನಿಮಯದಲ್ಲಿ ತರಂಗಿಣಿ ಸದಸ್ಯರ ಸಮಸ್ಯೆಗಳಿಗೆ ರಾಮಕೃಷ್ಣ ಶರ್ಮ ಉತ್ತರಿಸಿದರು. ಸ್ಥಳೀಯ ಪ್ರಗತಿಪರ ಕೃಷಿಕರಾದ ಸದಾಶಿವ ಆಚಾರ್ಯ, ಚಂದ್ರಶೇಖರ ರಾವ್, ರಾಘವೇಂದ್ರ ರಾವ್ ಪಿ. ಕೆ., ಅಮರೇಂದ್ರ ಆಚಾರ್ಯ ಮತ್ತಿತರರು ವಿಚಾರ ವಿನಿಮಯದಲ್ಲಿ ಸಕ್ರಿಯವಾಗಿ ಭಾಗಗವಹಿಸಿದ್ದರು. ಸಭಾಧ್ಯಕ್ಷತೆಯನ್ನು ಹಿರಿಯ ಕೃಷಿಕ ಸದಾಶಿವ ಆಚಾರ್ ವಹಿಸಿದ್ದು ಮಾತನಾಡಿದರು. ಸಂಘದ ಕಾರ್ಯದರ್ಶಿ ಮುರುಡಿ ಹರಿಕೃಷ್ಣ ರಾವ್ ಸ್ವಾಗತಿಸಿದರು. ಶ್ರೀಧರ ಆಚಾರ್ಯ ಪ್ರಸ್ತಾವಿಸಿದರು. ಖಜಾಂಚಿ ರಘುಪತಿ ರಾವ್ ವಂದಿಸಿದರು.
ಸಮ್ಮಾನ
ಉಡುಪಿ ಜಿಲ್ಲಾ ಕೃಷಿಕ ಸಂಘದ ಅಭ್ಯುದಯಕ್ಕಾಗಿ ಶ್ರಮಿಸುತ್ತಿರುವ ಅಧ್ಯಕ್ಷ ಬಂಟಕಲ್ಲು ರಾಮಕೃಷ್ಣ ಶರ್ಮ ಅವರನ್ನು ತರಂಗಿಣಿ ಮಿತ್ರ ಮಂಡಳಿಯ ಪರವಾಗಿ ಸಮ್ಮಾನಿಸಲಾಯಿತು.