ಕೇರಳ: ಕೇರಳದ ಬಾರ್ ಕೌನ್ಸಿಲ್‌ನ ಮೊದಲ ತೃತೀಯಲಿಂಗಿ ವಕೀಲರಾಗಿ ಪದ್ಮಲಕ್ಷ್ಮಿ ಅವರು ಆಯ್ಕೆಯಾಗಿದ್ದಾರೆ.
ಕೊಚ್ಚಿಯ ಎಡಪಲ್ಲಿ ಮೂಲದ ಪದ್ಮಾ ಲಕ್ಷ್ಮಿ ಅವರು ಕೇರಳ ರಾಜ್ಯದ ತೃತೀಯಲಿಂಗಿ ಸಮುದಾಯದಿಂದ ಮೊದಲ ವಕೀಲರಾಗಿ ದಾಖಲಾಗುವ ಮೂಲಕ ಇತಿಹಾಸವನ್ನು ಬರೆದಿದ್ದಾರೆ.
ಈ ಕುರಿತು ಕೈಗಾರಿಕಾ ಸಚಿವ ಪಿ. ರಾಜೀವ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪದ್ಮಲಕ್ಷ್ಮಿ ವಕೀಲರಾಗಿ ಆಯ್ಕೆಯಾಗಿರುವ ವಿಚಾರವನ್ನು ಹಂಚಿಕೊಂಡಿದ್ದು ‘ಜೀವನದಲ್ಲಿ ಬಂದ ಕಷ್ಟಗಳನ್ನೆಲ್ಲ ಮೆಟ್ಟಿನಿಂತು ಕೇರಳದ ಮೊದಲ ತೃತೀಯಲಿಂಗಿ ವಕೀಲೆಯಾಗಿ ದಾಖಲಾದ ಪದ್ಮಲಕ್ಷ್ಮಿ ಅವರಿಗೆ ಅಭಿನಂದನೆಗಳು. ವಿದ್ಯಾಭ್ಯಾಸದ ಸಮಯದಲ್ಲಿ ತನಗೆ ಬಂದ ಅಡೆ ತಡೆಗಳನ್ನು ಮೆಟ್ಟಿ ಕಾನೂನು ಇತಿಹಾಸದಲ್ಲಿ ತನ್ನದೇ ಹೆಸರನ್ನು ಬರೆದುಕೊಂಡಿರುವ ಪದ್ಮಲಕ್ಷ್ಮಿ ಅವರಿಗೆ ಅಭಿನಂದನೆಗಳು ಎಂದು ಟ್ವೀಟ್ ಮಾಡಿದ್ದಾರೆ.
ಬಳಿಕ ಮಾತನಾಡಿದ ಪದ್ಮಾ ಲಕ್ಷ್ಮಿ, ವಕೀಲೆಯಾಗಿ ಆಯ್ಕೆಯಾಗಿರುವುದು ತುಂಬಾ ಸಂತೋಷದ ವಿಚಾರ ಇದರ ಹಿಂದೆ ನನ್ನ ಹೆತ್ತವರ ಪಾಲು ತುಂಬಾ ಇದೆ, ಅದರೊಂದಿಗೆ ನನ್ನ ಶಿಕ್ಷಕಿ ಡಾ. ಮರಿಯಮ್ಮ ಎಂಕೆ ಮತ್ತು ನನ್ನ ಹಿರಿಯ ವೈದ್ಯರಾದ ಭದ್ರಕುಮಾರಿ ಈ ಇಬ್ಬರೂ ನನ್ನ ಓದಿಗೆ ಬೆನ್ನೆಲುಬಾಗಿ ನಿಂತಿರುವುದು ನನ್ನ ಅದೃಷ್ಟ ಹಾಗೂ ನನ್ನ ಎಲ್ಲಾ ಪ್ರಯತ್ನಗಳಿಗೆ ಪ್ರೋತ್ಸಾಹವನ್ನು ನೀಡಿದ್ದಾರೆ ಎಂದು ಹೇಳಿಕೊಂಡಿದ್ದಾರೆ.
ಬಾರ್ ಕೌನ್ಸಿಲ್ ಆಫ್ ಇಂಡಿಯಾಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಬಾರ್ ಎನ್‌ರೋಲ್‌ಮೆಂಟ್ ಪ್ರಮಾಣಪತ್ರವನ್ನು ಹಸ್ತಾಂತರಿಸಿದ 1,500 ಕ್ಕೂ ಹೆಚ್ಚು ಕಾನೂನು ಪದವೀಧರರಲ್ಲಿ ಪದ್ಮ ಲಕ್ಷ್ಮಿ ಅವರು ಒಬ್ಬರಾಗಿದ್ದಾರೆ.
ಪದ್ಮಾ ಲಕ್ಷ್ಮಿ ಎರ್ನಾಕುಲಂ ಸರ್ಕಾರಿ ಕಾನೂನು ಕಾಲೇಜಿನಲ್ಲಿ ಪದವಿ ಪಡೆದರು.
ಇದನ್ನೂ ಓದಿ: ಭಾರತ ನಮ್ಮ ಅನಿವಾರ್ಯ ಪಾಲುದಾರ: ದೆಹಲಿಯಲ್ಲಿ ಜಪಾನ್ ಪ್ರಧಾನಿ ಫ್ಯೂಮಿಯೊ