ಬೆಂಗಳೂರು: ಭತ್ತದ ಬೆಳೆಯಲ್ಲಿ ಕಾಣಿಸಿಕೊಳ್ಳುವ ಬೆಂಕಿ ರೋಗ, ಕೀಟಬಾಧೆ ಮತ್ತು ಕಾಂಡ ಕೊರೆತಕ್ಕೆ ಆಯಾ ಬೆಳೆಗಳಲ್ಲಿ ಸಿಲಿಕಾನ್ ಪೋಷಕಾಂಶ ಇಲ್ಲದೆ ಇರುವುದೇ ಮುಖ್ಯ ಕಾರಣ ಎನ್ನುವುದು ಇದೀಗ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ತಜ್ಞರ ತಂಡ ನಡೆಸಿರುವ ಸಂಶೋಧನೆಯಲ್ಲಿ ಬೆಳಕಿಗೆ ಬಂದಿದೆ.
ಅಲ್ಲದೆ ಭತ್ತ, ಕಬ್ಬು ಸೇರಿ ಇನ್ನಿತರ ಆಹಾರ ಧಾನ್ಯಗಳ ಕಡಿಮೆ ಇಳುವರಿಗೂ ಇದೇ ಮೂಲ ಕಾರಣ ಎಂಬ
ಅಂಶ ದೃಢಪಟ್ಟಿದೆ.
ಅನ್ನದಾತರ ಭತ್ತದ ಬೆಳೆಗಳಲ್ಲಿ ಆಗಾಗ ಕಾಣಿಸಿಕೊಳ್ಳುವ ಬೆಂಕಿ ರೋಗ, ಕಾಂಡ ಕೊರೆತ ಮತ್ತು ಕೀಟ ಬಾಧೆ ರೋಗಗಳ ಸಂಬಂಧ ಕಳೆದ ನಾಲ್ಕೈದು ವರ್ಷಗಳಿಂದ ರೋಗಶಾಸಉಜ್ಞ ಗೋವಿಂದ ರಾಜು, ಕೀಟ ತಜ್ಞ ಎಸ್.ವಿ.ಪಾಟೀಲ್ ಮತ್ತು ಬೇಸಾಯ ತಜ್ಞ ಹನುಮಂತಪ್ಪ ಸಂಶೋಧನೆಯಲ್ಲಿ ತೊಡಗಿದ್ದರು. ಈ ತಜ್ಞರ ತಂಡ ನಡೆಸಿದ ಸಂಶೋಧನೆಯಲ್ಲಿ ಭತ್ತದ ಬೆಳೆಗಳಲ್ಲಿ ಕಾಣಿಸಿಕೊಳ್ಳುವ ಬೆಂಕಿ ರೋಗ ಸೇರಿ ಇನ್ನಿತರ ಕೀಟಬಾಧೆಯ ಸಂಬಂಧಿತ ರೋಗಕ್ಕೆ ಆಯಾ ಬೆಳೆಗಳಲ್ಲಿ ಸಿಲಿಕಾನ್ ಪೋಷಕಾಂಶ ಇಲ್ಲದಿರುವುದೇ ಮೂಲ ಕಾರಣ ಎಂಬುದು ದೃಢಪಟ್ಟಿದೆ. ಪ್ರತಿ ಹೆಕ್ಟೇರ್ ಜಮೀನಿನಲ್ಲಿ 50 ಕ್ವಿಂಟಾಲ್ ಭತ್ತವನ್ನು ಬೆಳೆದಲ್ಲಿ ಸುಮಾರು 230 ರಿಂದ 470 ಕೆ.ಜಿ.ಸಿಲಿಕಾನ್ ಪೋಷಕಾಂಶವನ್ನು ಮಣ್ಣಿನಿಂದಲೇ ಭತ್ತದ ಬೆಳೆ ಉಪಯೋಗಿಸಿಕೊಳ್ಳುತ್ತದೆ.
ಸಿಲಿಕಾನ್ ಪೋಷಕಾಂಶವು ಭತ್ತ ಮತ್ತು ಕಬ್ಬು ಸೇರಿ ಇನ್ನಿತರ ಬೆಳೆಗಳಲ್ಲಿ ದ್ಯುತಿ ಸಂಶ್ಲೇಷಣೆ ಕ್ರಿಯೆ ಹೆಚ್ಚಳಕ್ಕೆ ಸಹಾಯ ಮಾಡುತ್ತದೆ. ಬಿರುಸಾದ ಮಳೆ-ಗಾಳಿಗೆ ಗಿಡಗಳು ಬಾಗುವುದನ್ನು ತಡೆಯುವಲ್ಲಿ ಸಿಲಿಕಾನ್ ಮಹತ್ವದ ಪಾತ್ರ
ನಿರ್ವಹಿಸಲಿದೆ. ಜಪಾನಿನಲ್ಲಿ ಬೆಳೆ ಇಳುವರಿ ಸಾಧಿಸಲು ಇದೇ ಕಾರಣವಾಗಿದೆ.
ಭತ್ತದ ಹೊಟ್ಟಿನ ಬೂದಿ ಮದ್ದು: ಭತ್ತದ ಮಿಲ್‌ಗಳು ಹೊರಹಾಕುವ ಹೊಟ್ಟಿನಲ್ಲಿ ಸಿಲಿಕಾನ್ ಅಂಶ ಇದ್ದು ಇದನ್ನು ಬೂದಿ ಮಾಡಿ, ಬೆಳೆಗಳಿಗೆ ಬಳಕೆ ಮಾಡಿದರೆ ಬೆಂಕಿ ರೋಗವನ್ನು ಹತೋಟಿಗೆ ತರಬಹುದು. ಹೀಗಾಗಿ ಬೆಂಕಿ ರೋಗಕ್ಕೆ ಭತ್ತದ ಬೂದಿಯೆ ಮದ್ದು. ಶಿವಮೊಗ್ಗದ ಕೃಷಿವಿದ್ಯಾಲಯ ಮತ್ತು ಕೃಷಿ ಸಂಶೋಧನಾ ಕೇಂದ್ರ, ಮಂಗಳೂರಿನ ಕಂಕನಾಡಿಯಲ್ಲಿ 2001-2002ರಲ್ಲಿ ಇದರ ಪ್ರಯೋಗ ಮಾಡಲಾಗಿದ್ದು, ಪ್ರಯೋಗ ಯಶಸ್ವಿಯಾಗಿದೆ ಎಂಬುದು ತಜ್ಞರ ಮಾತು.
ಸಿಲಿಕಾನ್ ಧಾತುವನ್ನು ಭತ್ತದ ಬೆಳೆಗೆ ಉಪಯೋಗಿಸುವ ಪದಟಛಿತಿ ಜಪಾನ್, ಥೈವಾನ್, ಚೀನಾ,
ಬ್ರೆಜಿಲ್, ಕೊರಿಯಾ, ಅಮೆರಿಕ ಮತ್ತು ಕೊಲಂಬಿಯಾದಲ್ಲಿ ಪ್ರಚಲಿತದಲ್ಲಿದೆ. ಹೀಗಾಗಿ ಈ ರಾಷ್ಟ್ರಗಳಲ್ಲಿ ರೈತರು ಹೆಚ್ಚಿನ ಇಳುವರಿ ಪಡೆಯುತ್ತಾರೆ. ನಮ್ಮ ದೇಶದ ರೈತರಿಗೆ ಸಿಲಿಕಾನ್ ಬಳಕೆ ಮಾಡುವ ಸಂಬಂಧ ಸೂಕ್ತ ಮಾಹಿತಿಯ ಕೊರತೆ ಇದೆ.
– ಡಾ.ಎನ್.ಬಿ. ಪ್ರಕಾಶ್, ಬೆಂಗಳೂರು ಕೃಷಿ ವಿವಿ ಮಣ್ಣು ವಿಜ್ಞಾನ ಸಂಸ್ಥೆಯ ಪ್ರಾಧ್ಯಾಪಕ
ಪ್ರಯೋಗ ಯಶಸ್ವಿ
2007, 2008 ಮತ್ತು 2009ರಲ್ಲಿ ಶಿವಮೊಗ್ಗ, ಭದ್ರಾವತಿ, ಮಂಗಳೂರು ಮತ್ತು ಬ್ರಹ್ಮಾವರದಲ್ಲಿ ತಜ್ಞರ ತಂಡ
ಪ್ರಯೋಗ ಮಾಡಿ ಇದರಲ್ಲಿ ಯಶಸ್ವಿಯಾಗಿತ್ತು. ಸಂಶೋಧನಾ ವರದಿ ಪ್ರಕಾರ ಕರಾವಳಿ ಮತ್ತು ಮಲೆನಾಡಿನ ಪ್ರದೇಶಗಳಲ್ಲಿ 2 ರಿಂದ 4 ಟನ್‌ಗಳಷ್ಟು ಬೂದಿಯನ್ನು ಪ್ರತಿ ಹೆಕ್ಟೇರ್ ಗದ್ದೆಗೆ ಬಳಸಿ ಶೇ.20 ರಿಂದ 30ರಷ್ಟು ಹೆಚ್ಚು ಇಳುವರಿ ಪಡೆದಿರುವುದು ಇದರಲ್ಲಿ ಸಾಬೀತಾಗಿದೆ.
– ದೇವೇಶ ಸೂರಗುಪ್ತ