Advertisement

ಬೆಳ್ತಂಗಡಿಯಲ್ಲಿ ಭತ್ತದ ಬೇಸಾಯಕ್ಕೆ ಯಂತ್ರ ಶ್ರೀ ಬೆಂಗಾವಲು

03:42 PM Jun 15, 2024 | Team Udayavani |

ಬೆಳ್ತಂಗಡಿ: ಒಂದು ಕಾಲದಲ್ಲಿ ಭತ್ತ ಕೃಷಿ ಹೊರತುಪಡಿಸಿ ಯಾವುದೇ ಕೃಷಿ ಇರಲಿಲ್ಲ. ಕ್ರಮೇಣ ಅಡಿಕೆ, ರಬ್ಬರ್‌ ಇನ್ನಿತರ ಏಕಮುಖ ಬೆಳೆಗೆ ಒಗ್ಗಿಕೊಂಡ ಪರಿಣಾಮ ವರ್ಷದಿಂದ ವರ್ಷಕ್ಕೆ ಭತ್ತ ಕೃಷಿಕರ ಸಂಖ್ಯೆ ಕಡಿಮೆಯಾಗಿ ಭತ್ತದ ಗದ್ದೆಯು ಅಡಿಕೆ ತೋಟವಾಗಿ ಪರಿವರ್ತನೆಗೊಳ್ಳುತ್ತಿದೆ. ಇದನ್ನರಿತು ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ| ಡಿ ವೀರೇಂದ್ರ ಹೆಗ್ಗಡೆಯವರು, ಭತ್ತ ಕೃಷಿ ಮುಂದಿನ ಪೀಳಿಗೆಗೆ ವರ್ಗಾಯಿಸಬೇಕು ಎನ್ನುವ ಉದ್ದೇಶಕ್ಕಾಗಿ ಯಾಂತ್ರಿಕೃತ ಭತ್ತ ಬೇಸಾಯ ಪರಿಚಯಿಸಿದ ಪರಿಣಾಮ ತಾಲೂಕಿನಲ್ಲೊಂದರಲ್ಲೆ 500 ಎಕ್ರೆ ಪ್ರದೇಶಗಳಲ್ಲಿ ಮುಂಗಾರಿಗೆ ಯಂತ್ರದ ಮೂಲಕ ಭತ್ತನಾಟಿ ಮಾಡಲು ಈಗಾಗಲೇ ರೈತರು ತಯಾರಿಯನ್ನು ಮಾಡಿಕೊಂಡಿದ್ದಾರೆ.

Advertisement

ಯಂತ್ರದ ಮೂಲಕ ಭತ್ತ ಬೇಸಾಯ ಮಾಡುವುದಾದರೆ ತಾಲೂಕಿನಲ್ಲಿ ಒಬ್ಬರು ಯೋಜನೆಯ ವತಿಯಿಂದ ಕೃಷಿ
ಮೇಲ್ವಿಚಾರಕರಿದ್ದು ಅವರು ಯಂತ್ರಶ್ರೀ ಮಾಡುವ ರೈತರ ಮನೆ ಭೇಟಿ ಮಾಡಿ ಬೀಜದ ಆಯ್ಕೆ, ಭತ್ತದ ಬೀಜೋಪಚಾರ, ಸಸಿ ಮಡಿ ತಯಾರಿ, ಯಂತ್ರದ ಮೂಲಕ ನಾಟಿ, ಗೊಬ್ಬರ ನೀಡುವಿಕೆ ಮತ್ತು ರೋಗ, ಕೀಟಗಳ ಹಾಗೂ ಹುಳದಬಾಧೆ ನಿಯಂತ್ರಣದ ಬಗ್ಗೆ ಮಾಹಿತಿಯನ್ನು ಉಚಿತವಾಗಿ ನೀಡುತ್ತಾರೆ. ಯಾಂತ್ರಿಕೃತ ಭತ್ತ ಬೇಸಾಯಕ್ಕೆ ಸಸಿಮಡಿಯನ್ನು ತಯಾರಿಸಲು ಕಷ್ಟವಾಗುತ್ತಿರುವ ರೈತರಿಗೆ ಸಹಕಾರ ವಾಗುವಂತೆ ಬೆಳ್ತಂಗಡಿಯ ಮಲೆಬೆಟ್ಟಿನ ಪ್ರಗತಿಪರ ಭತ್ತ ಕೃಷಿಕ ಪ್ರವೀಣ್‌ ಯಂತ್ರಶ್ರೀ ಸಸಿಮಡಿಯನ್ನು ತಯಾರಿಸಿ ರೈತರಿಗೆ ಕಡಿಮೆ ದರದಲ್ಲಿ ನೀಡುತ್ತಿದ್ದಾರೆ.

ಸಸಿ ಮಡಿ ತಯಾರಿ ಹೇಗೆ

ಯೋಗ್ಯಬೀಜ ಆಯ್ಕೆ ಮಾಡಿ ಬಿಜೋಪಚಾರ ಮಾಡಿ ಮೊಳಕೆ ಬರಿಸಬೇಕು. 2. ಜರಡಿ ಮೂಲಕ ಮಣ್ಣನ್ನು ಸಂಗ್ರಹಿಸಿ, ಟ್ರೇಗೆ ಜೋಡಣೆ ಮಾಡಿ ಬೀಜ ಹಾಕಬೇಕು. 3. ಮಳೆ ಇಲ್ಲದ ಸಂದರ್ಭ ದಿನಕ್ಕೆ ಮೂರು ಬಾರಿ ನೀರು ಕೊಡಬೇಕು. 4. 18 ರಿಂದ 20 ದಿನದಲ್ಲಿ ನಾಟಿಗೆ ಯೋಗ್ಯ ಸಸಿ ಸಿದ್ಧ . 5. 8 ಮತ್ತು 4 ಸಾಲಿನ ಯಂತ್ರಗಳ ಮೂಲಕ ನಾಟಿ ಕಾರ್ಯ. 6. ಟೆಂಪರರಿ ಟ್ರೇ ಸಿ.ಎಚ್‌.ಎಸ್‌.ಸಿ. ಕೇಂದ್ರ ಬೆಳ್ತಂಗಡಿಯಲ್ಲಿ ಲಭ್ಯ. 7. ಒಂದು ಟ್ರೇಗೆ 15 ರೂ., ಇದರಲ್ಲಿ ಮೂರು ಅಥವಾ 4 ಬೆಳೆ ಸಾಧ್ಯ 8. ಖಾಯಂ ಟ್ರೇ ಕೂಡ ಲಭ್ಯ. 9. ಒಂದು ಎಕ್ರೆಗೆ 70-80 ಟ್ರೇ ಅಗತ್ಯ.

ರೈತನ ಮನೆ ಬಾಗಿಲಿಗೆ ಬಂದು ಮಾಹಿತಿ

Advertisement

ಕೃಷಿ ಪ್ರಾದೇಶಿಕ ಕೇಂದ್ರ ಕಚೇರಿ ಧರ್ಮಸ್ಥಳದಿಂದ ಇಡೀ ರಾಜ್ಯಕ್ಕೆ ಪೂರಕವಾಗಿ ಪ್ರಾದೇಶಿಕ ನಿರ್ದೇಶಕ ಮನೋಜ್‌ ಮಿನೇಜಸ್‌ ಹಾಗೂ ಜಿಲ್ಲಾ ನಿರ್ದೇಶಕ ಮಹಾಬಲ ಕುಲಾಲ್‌, ಕೃಷಿ ಯೋಜನಾಧಿಕಾರಿಗಳಾದ ಸುಧೀರ್‌ ಜೈನ್‌ ಹಾಗೂ ಜಯಾನಂದರವರು ತಾಂತ್ರಿಕ ಮಾಹಿತಿಯನ್ನು ರೈತರಿಗೆ ಒದಗಿಸುತ್ತಿದ್ದಾರೆ. ರೈತರಿಗೆ ಯಾಂತ್ರಿಕೃತ ಭತ್ತ ಬೇಸಾಯ ತಾಂತ್ರಿಕ ಮಾಹಿತಿಗೆ ಕೃಷಿ ಅಧಿಕಾರಿಯಾದ ರಾಮ್‌ ಕುಮಾರ್‌ ರೈತನ ಮನೆ  ಬಾಗಿಲಿಗೆ ಬಂದು ಮಾಹಿತಿ ಒದಗಿಸುತ್ತಿದ್ದಾರೆ.
ಸುರೇಂದ್ರ, ಯೋಜನಾಧಿಕಾರಿಗಳು, ಬೆಳ್ತಂಗಡಿ.

ಯಂತ್ರ ನಾಟಿಗೆ ಜಿಎಸ್‌ಟಿ ಬಿಲ್‌ ರೈತ ತಾನು ಭತ್ತ ಕೃಷಿಯನ್ನು ಮಾಡಿದ ಆಧಾರಕ್ಕಾಗಿ ಆ ವರ್ಷದ ದಿನಾಂಕ ನಮೂದಿನೊಂದಿಗೆ ಇಲಾಖೆಯಿಂದ ಭತ್ತದ ಬೀಜ ತಂದಾಗ ಇಲಾಖೆಯ ಬಿಲ್‌, ಕೃಷಿ ಯಂತ್ರಧಾರೆಯ ಮೂಲಕವಾಗಿ ಉಳುಮೆ ಮಾಡಿದಾಗ ಹಾಗೂ ನಾಟಿ ಮಾಡಿದಾಗ ಕೃಷಿ ಯಂತ್ರಧಾರೆಯ ಮೂಲಕ ಜಿಎಸ್‌ಟಿ ನಮೂದಾಗಿರುವ ಟ್ಯಾಕ್ಸ್‌ ಇನ್ವಾಯ್ಸ್… ರೈತನ ಹೆಸರನ್ನು ನಮೂದಿಸಿ ನೀಡಲಾಗುತ್ತದೆ. ಇದು ಬೆಳೆ ವಿಮೆ ಪಡೆಯುವ ಸಂದರ್ಭ ರೈತರಿಗೆ ಆಧಾರವಾಗುತ್ತದೆ.
ರಾಮ್‌ ಕುಮಾರ್‌, ಕೃಷಿ ಅಧಿಕಾರಿ, ಬೆಳ್ತಂಗಡಿ ತಾಲೂಕು

ಭತ್ತಕ್ಕೆ ಬೆಳೆ ವಿಮೆ
ಭತ್ತದ ಬೆಳೆಗೆ ವಿಮೆಯನ್ನು ಮಾಡುತ್ತಿದ್ದು, ಆಯ ಗ್ರಾಮದಲ್ಲಿ ಯೋಜನೆಯ ವತಿಯಿಂದ ಸಿ.ಎಸ್‌.ಸಿ. ಕೇಂದ್ರವಿದ್ದು ಈ ಕೇಂದ್ರವನ್ನು ರೈತರು ಸಂಪರ್ಕಿಸಬಹುದಾಗಿದೆ. ಒಂದು ಎಕ್ರೆಗೆ 755 ರೂ. ಮೊತ್ತದ ಬೆಳೆ ವಿಮೆಯನ್ನು ರೈತರು ಪಾವತಿಸಿದ್ದಲ್ಲಿ, ಯಾವುದೇ ಪ್ರಾಕೃತಿಕ ವಿಕೋಪ ಹಾಗೂ ಹವಮಾನ ವೈಪರಿತ್ಯದಿಂದಾಗಿ ನಷ್ಟ ಅನುಭವಿಸಿದಾಗ ಬೆಳೆ ವಿಮೆಯಿಂದ
ಪರಿಹಾರ ಪಡೆಯಬಹುದು.

Advertisement

Udayavani is now on Telegram. Click here to join our channel and stay updated with the latest news.

Next