ಕಟಪಾಡಿ:ನೇಷನ್ ಫಸ್ಟ್ ತಂಡವು (ಎಕ್ಸ್‌ಕೆಡೆಟ್ ಟೀಂ) ಕೋಟೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಟ್ಟು ಪ್ರದೇಶದಲ್ಲಿ ಕೋಟೆ ಗ್ರಾ.ಪಂ. ಮಾಜಿ ಅಧ್ಯಕ್ಷೆ ಸಾಧನಾ ದೇಜಪ್ಪ ಕೋಟ್ಯಾನ್ ಎಂಬವರ ಹಡಿಲು ಬಿದ್ದ ಗದ್ದೆಯಲ್ಲಿ ನೇಜಿ ನಾಟಿ ಮಾಡಿತು.
ಯುವ ಜನರನ್ನೇ ಹೊಂದಿದ್ದ ಈ ತಂಡವು ಉಳುಮೆ ಪೂರೈಸಿ ನಾಟಿ ಮಾಡಲು ಸಮತಟ್ಟುಗೊಳಿಸಿದ ಗದ್ದೆಯಲ್ಲಿ ಸಾಲು ನಾಟಿ ಪದ್ಧತಿಯಲ್ಲಿ ನೇಜಿ ನೆಟ್ಟರು.
ಸುಮಾರು 24 ದಿನಗಳ ಎಂ.ಒ. 4 ತಳಿಯ ನೇಜಿಯನ್ನು ನಾಟಿ ಪೂರೈಸಿದ ತಂಡದಲ್ಲಿ ಸುಮಾರು 20 ಮಂದಿ ತೊಡಗಿಸಿಕೊಂಡಿದ್ದರು.
ಕೃಷಿಯಿಂದ ವಿಮುಖರಾದವರನ್ನು ಸೆಳೆಯುವುದು ಮತ್ತು ಯುವ ಜನ ರಲ್ಲಿ ಕೃಷಿ ಬಗ್ಗೆ ಅರಿವು ಮೂಡಿಸುವ ಉದ್ದೇಶ ದಿಂದ ಈ ತಂಡವು ಉಡುಪಿಯ ವಿವಿಧ ಪ್ರದೇಶದಲ್ಲಿ ಸುಮಾರು 4 ಎಕರೆ ಹಡಿಲು ಬಿದ್ದ ಗದ್ದೆಯನ್ನು ಈ ವರ್ಷ ನಾಟಿ ಮಾಡುತ್ತಿದೆ.
ನೇಷನ್ ಫಸ್ಟ್ ತಂಡವು ಮೆ| ಪ್ರಕಾಶ್ ರಾವ್ ಅವರ ಮಾರ್ಗದರ್ಶನ ಮತ್ತು ಸೂರಜ್ ಕಿದಿಯೂರು ಅವರ ನೇತೃತ್ವದಲ್ಲಿ ಕೃಷಿ ನಡೆಸುತ್ತಿದೆ.