Advertisement
ಪಡಿತರ ವ್ಯವಸ್ಥೆಯಡಿ ಸ್ಥಳೀಯ ಕುಚ್ಚಲು ಅಕ್ಕಿ ವಿತರಣೆಗೆ ಕೇಂದ್ರ ಸರಕಾರ ಈಗಾಗಲೇ ಅನುಮತಿ ನೀಡಿದೆ. ಅದರಂತೆ ರಾಜ್ಯ ಸರಕಾರ ಭತ್ತ ಖರೀದಿ ಕೇಂದ್ರ ತೆರೆದು ಬೆಂಬಲ ಬೆಲೆಯಡಿ ಖರೀದಿ ಪ್ರಕ್ರಿಯೆ ಆರಂಭಿಸಬೇಕಿತ್ತು. ಆದರೆ ಇನ್ನೂ ಈ ಪ್ರಕ್ರಿಯೆ ಆರಂಭವಾಗದೇ ಇರುವುದರಿಂದ ಕೆಲವು ಭಾಗಗಳಲ್ಲಿ ರೈತರು ಕಳೆದ ವರ್ಷದಂತೆ ಯಥಾ ಪ್ರಕಾರ ಮಿಲ್‌ಗಳಿಗೆ ನೀಡುತ್ತಿದ್ದಾರೆ.
Related Articles
ಕಟಾವು ಪ್ರಕ್ರಿಯೆ ಈಗಾಗಲೇ ನಡೆಯುತ್ತಿದೆ. ರೈತರಿಂದ ಭತ್ತ ಖರೀದಿಗೆ ಆದಷ್ಟು ಬೇಗ ಖರೀದಿ ಕೇಂದ್ರವನ್ನು ತೆರೆಯಲು ಸರಕಾರ ಆದೇಶ ಮಾಡಬೇಕು. ಇಲ್ಲವಾದರೆ ಗ್ರಾಮೀಣ ಭಾಗದ ರೈತರಿಗೆ ಭತ್ತ ಸಂಗ್ರಹಿಸಿಕೊಳ್ಳುವುದು ಕಷ್ಟವಾಗಲಿದೆ. ಸ್ಥಳೀಯರಿಗೆ ಪಡಿತರ ವ್ಯವಸ್ಥೆಯಲ್ಲಿ ಕುಚ್ಚಲು ಅಕ್ಕಿ ನೀಡಲು ಭತ್ತ ಖರೀದಿ ಪ್ರಕ್ರಿಯೆ ಆರಂಭಿಸಬೇಕು ಎಂದು ಎಂದು ಹಿರಿಯ ರೈತರಾದ ಯಡ್ತಾಡಿ ಕೆ. ಸತೀಶ್ ಕುಮಾರ್ ಶೆಟ್ಟಿ ಆಗ್ರಹಿಸಿದ್ದಾರೆ.
Advertisement
ಶೀಘ್ರ ಆದೇಶ ಸಾಧ್ಯತೆಭತ್ತ ಖರೀದಿ ಕೇಂದ್ರ ತೆರೆಯುವ ಸಂಬಂಧ ಶೀಘ್ರದಲ್ಲೇ ಸರಕಾರದಿಂದ ಆದೇಶ ಬರುವ ಸಾಧ್ಯತೆಯಿದೆ. ಸರಕಾರದಿಂದ ಬರುವ ನಿರ್ದೇಶನಂತೆ ಮುಂದಿನ ಕ್ರಮ ತೆಗೆದುಕೊಳ್ಳಲಿದ್ದೇವೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಡಾ| ಕೆಂಪೇಗೌಡ ತಿಳಿಸಿದರು.