Advertisement
ಸುರತ್ಕಲ್‌ನ ಗಾಂಧಿನಗರ, ಕುಂಜತ್ತ ಬೈಲ್‌ನಲ್ಲಿ ನಗರ ಮಧ್ಯೆ ಇರುವ ಕೃಷಿ ಪ್ರದೇಶ. ಸುರತ್ಕಲ್ ಕೃಷಿ ಇಲಾಖೆ ಹೋಬಳಿ ವ್ಯಾಪ್ತಿಯ ಈ ಗದ್ದೆಯಲ್ಲಿ ಹಲವು ವರ್ಷಗಳಿಂದ 2-3 ಭತ್ತ ಬೆಳೆಯಲಾಗುತ್ತಿತ್ತು. ಕಾಲ ಕ್ರಮೇಣ ಕೂಲಿಯಾಳುಗಳ ಕೊರತೆ, ಲಾಭಕ್ಕಿಂತ ನಷ್ಟ ಹೆಚ್ಚೆಂಬ ಲೆಕ್ಕಾಚಾರಗಳು ಜನರನ್ನು ಕೃಷಿಯಿಂದ ಹಿಂದೆ ಉಳಿಯುವಂತೆ ಮಾಡಿತು.
Related Articles
Advertisement
ಶಾಸಕರ ಸಹಕಾರಈ ಸಾಹಸಕ್ಕೆ ಬೆಂಬಲವಾಗಿ ಮಾರ್ಗ ದರ್ಶನ ನೀಡಿದವರು ಕೃಷಿಕ ಮರಕಡದ ಜಗದೀಶ್. ಶಾಸಕ ಡಾ| ಭರತ್ ಶೆಟ್ಟಿ ವೈ ಅವರ ಸಹಕಾರವೂ ಇದೆ. ಈ ಬಾರಿಯೂ ಮಳೆಗಾಲದಲ್ಲಿ ಹಲವು ಎಕರೆ ಕೃಷಿ ಭೂಮಿ ಇಡ್ಯಾ, ಗಾಂಧಿನಗರ, ಮರಕಡದಲ್ಲಿ ಹಸಿರಾಗಿ ಕಂಗೊಳಿಸಿದೆ. ಅಕ್ಕಿ ವಿತರಣೆ
ಕೊರೊನಾ ಲಾಕ್‌ಡೌನ್ ಸಂದರ್ಭ ಈ ತಂಡ ಬೆಳೆದ ಅಕ್ಕಿಯನ್ನು ಹಲವು ಬಡ ಕುಟುಂಬಗಳಿಗೆ ವಿತರಿಸಿ ಮಾನವೀಯತೆ ಮೆರೆದಿತ್ತು. ಬೈ ಹುಲ್ಲನ್ನು 2 ವರ್ಷಗಳಿಂದ ಪಜಿರು ಗೋ ಆಶ್ರಮಕ್ಕೆ ಉಚಿತವಾಗಿ ನೀಡಲಾಗುತ್ತಿದೆ. ಮನಸ್ಸಿಗೆ ಖುಷಿ ಕೊಡುವ ಕೆಲಸವಿದು. ಅದಕ್ಕೇ ನಿರಂತರವಾಗಿ ಮಾಡುತ್ತಿದ್ದೇವೆ ಎನ್ನುತ್ತಾರೆ ಮಾಡದಡಿ ಗುಡ್ಡೆ ಫ್ರೆಂಡ್ಸ್ ಸಂಘದವರ ಮಾತು. ಹೀಗೆ ಯುವ ತಂಡಗಳು ಕೈಗೊಳ್ಳುತ್ತಿರುವ ಹಡಿಲು ಭೂಮಿ ಸಾಗುವಳಿ ರಾಜ್ಯಕ್ಕೆ ಮಾದರಿಯಾಗುತ್ತಿದೆ. ಕೃಷಿ ಯಂತ್ರ, ಬೇಕಾದ ಸೌಲಭ್ಯ ಸಿಕ್ಕಲ್ಲಿ ಕರಾವಳಿಯಲ್ಲಿ ಮತ್ತೆ ಕೃಷಿ ನಳನಳಿಸಲಿದೆ. ಪ್ರತ್ಯೇಕ ಬ್ರಾಂಡ್‌ನ ಗುಣಮಟ್ಟದ ಅಕ್ಕಿ ಗ್ರಾಹಕರಿಗೆ ಲಭ್ಯವಾಗಲೂಬಹುದು. ಆ ಮೂಲಕ ಕೃಷಿ ಸಂಸ್ಕೃತಿಯ ಜೊತೆಗೆ ಗ್ರೀನ್ ಕಾಲರ್ ಉದ್ಯೋಗಕ್ಕೆ ಬರುವವರ ಸಂಖ್ಯೆ ಯೂ ಹೆಚ್ಚಳ ಆಗಬಹುದು ಎಂಬುದು ಹಲವರ ಅಭಿಪ್ರಾಯ. ಒಂದು ಕಾಲಕ್ಕೆ ಕೃಷಿಯೇ ಜೀವನ ಪದ್ಧತಿಯಾಗಿತ್ತು. ಆದರೆ ಕಾಲಕ್ರಮೇಣ ಭತ್ತ ಬೆಳೆಯುವುದು ಬಿಟ್ಟು ಇಲ್ಲಿನ ಜನ ಇತರ ವಾಣಿಜ್ಯ ಚಟುವಟಿಕೆಗಳಲ್ಲೇ ಆಸಕ್ತರಾದರು. 5 ವರ್ಷಗಳಲ್ಲಿ ಸ್ಥಳೀಯ ಯುವಕರು ಹಡಿಲು ಭೂಮಿಯಲ್ಲಿ ಕೃಷಿ ಮಾಡುತ್ತಿದ್ದಾರೆ. ಈ ಮೂಲಕ ಗದ್ದೆಗಿಳಿದು ತಾವು ಬೆಳೆದ ಫಸಲನ್ನು ಬಳಸಿ, ಬೈ ಹುಲ್ಲನ್ನು ಗೋ ಶಾಲೆಗೆ ನೀಡಿ ಮಾದರಿಯಾಗಿದ್ದಾರೆ.
-ಜಗದೀಶ್, ಕೃಷಿಕ ಹಾಗೂ
ತಂಡದ ಮಾರ್ಗದರ್ಶಕರು