Advertisement
ಕೊರಂಗಳದಿಂದ ಹಲವು ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ಇಲ್ಲಿಂದ ತೆರಳುತ್ತಾರೆ. ರಸ್ತೆಯ ಅವ್ಯವಸ್ಥೆಯಿಂದಾಗಿ ಕಾಲೇಜಿಗೆ ತಲುಪಲು ವಿಳಂಬವಾಗುತ್ತಿದೆ. ರಾಜ್ಯ ಹೆದ್ದಾರಿ ಪಡ್ಡಂದಡ್ಕದಿಂದ ಕೇವಲ 100 ಮೀಟರ್‌ನಷ್ಟು ಮಾತ್ರ ಕಾಂಕ್ರೀಟ್ ಕಾಮಗಾರಿ ನಡೆದಿದೆ.
ಈ ರಸ್ತೆಯ ದುರವಸ್ಥೆ ಬಗ್ಗೆ ಕಳೆದ ಸುಮಾರು 4 ವರ್ಷಗಳಿಂದ ಹೊಸಂಗಡಿ ಗ್ರಾಮಸಭೆಯಲ್ಲಿ ಧ್ವನಿ ಎತ್ತುತ್ತಲೇ ಬಂದಿದ್ದೇವೆ. ಮನವಿಯನ್ನೂ ನೀಡಲಾಗಿದೆ. ಆದರೆ ಪ್ರಯೋಜನವಾಗಿಲ್ಲ ಎಂಬುದು ಇಲ್ಲಿನ ಗ್ರಾಮಸ್ಥರ ಅಳಲು.
ಶಾಸಕ ಕೆ. ವಸಂತ ಬಂಗೇರ ಅವರಿಗೂ ಮನವಿ ನೀಡಲಾಗಿದೆ. ಅವರು ಸಂಬಂಧಿತ ಇಲಾಖಾಧಿಕಾರಿಗಳಿಗೆ ಸೂಚಿಸಿದ್ದರೂ ಪರಿಸ್ಥಿತಿಯನ್ನು ಅವಲೋಕಿಸಲು ಅಧಿಕಾರಿಗಳು ಇಲ್ಲಿಗೆ ಭೇಟಿ ನೀಡಿಲ್ಲ ಎಂಬುದು ಗ್ರಾಮಸ್ಥರ ಆರೋಪ. ಸುಮಾರು 30 ಕುಟುಂಬಗಳು ಇದೇ ರಸ್ತೆಯನ್ನು ಉಪಯೋಗಿಸುತ್ತಿವೆ. ಮಳೆಗಾಲದಲ್ಲಿ ಈ ರಸ್ತೆ ತೀರಾ ಹದೆಗೆಟ್ಟು ನಡೆದುಕೊಂಡು ಹೋಗಲು ಕೂಡ ಅಸಾಧ್ಯವಾದ ಪರಿಸ್ಥಿತಿ ನಿರ್ಮಾಣವಾಗಿದೆ. ಶೀಘ್ರ ದುರಸ್ತಿಯಾಗಲಿ ಎಂಬ ಒತ್ತಾಯ ಸಾರ್ವಜನಿಕರಿಂದ ಕೇಳಿ ಬಂದಿದೆ.
Related Articles
ಕೊರಂಗಳಕ್ಕೆ ಜನರು ಬಾಡಿಗೆಗೆ ರಿûಾ ಒತ್ತಾಯಿಸಿದಾಗ ಹೋಗಿದ್ದೇವೆ. ಆದರೆ ವಾಪಸಾದಾಗ ರಿûಾ ರಸ್ತೆಯಲ್ಲೇ ಬಾಕಿಯಾಗಿ ಪಾರ್ಕ್‌ನಿಂದ ರಿûಾ ಚಾಲಕರನ್ನು ಕರೆಸಿ ಸಹಾಯ ಪಡೆದು ವಾಪಸ್ ಹೋಗಿದ್ದೇವೆ. ಮಳೆಗಾಲಕ್ಕೆ ಆ ರಸ್ತೆ ಸಂಚಾರಕ್ಕೆ ಅನನುಕೂಲ.
– ರಿûಾ ಚಾಲಕ, ಪಡ್ಡಂದಡ್ಕ
Advertisement
ಮನವಿಗೂ ಸ್ಪಂದನೆಯಿಲ್ಲ ಕಳೆದ ಹಲವು ವರ್ಷಗಳಿಂದ ಸಮಸ್ಯೆ ಇದೇ ರೀತಿ ಇದೆ. ಮಳೆಗಾಲದಲ್ಲಿ ಸಂಪರ್ಕವೇ ಅಸಾಧ್ಯ ಎಂಬಂತಾಗಿದೆ. ಪಂಚಾಯತ್, ಶಾಸಕರಿಗೂ ಮನವಿ ನೀಡಲಾಗಿದ್ದರೂ ಪ್ರಯೋಜನವಾಗಿಲ್ಲ.
– ಗ್ರಾಮಸ್ಥ, ಕೊರಂಗಳ