ಬೆಂಗಳೂರು: ರಾಜಧಾನಿ ಬೆಂಗಳೂರಿನ ಜನತೆಗೆ ಮುಂದಿನ ಎರಡು ದಿನಗಳ ಕಾಲ ಸಂಚಾರ ದಟ್ಟಣೆಯ ಬಿಸಿ ತಟ್ಟಲಿದ್ದು, ಬೆಂಗಳೂರಿನ ಹೃದಯ ಭಾಗದಲ್ಲಿ ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ಹಾದು ಹೋಗಲಿದೆ.
ಪಾದಯಾತ್ರೆಯ ಮಾರ್ಗದ ಬಗ್ಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ ಪತ್ರಿಕಾಗೋಷ್ಢಿಯಲ್ಲಿ ಮಾಹಿತಿ ನೀಡಿದ್ದಾರೆ. ಬಿಟಿಎಂ ಕ್ಷೇತ್ರದ ಅದ್ವೈತ್ ಪೆಟ್ರೋಲ್ ಬಂಕ್ ನಿಂದ ಅರಮನೆ ಮೈದಾನವರೆಗೂ ಪಾದಯಾತ್ರೆ ನಡೆಯಲಿದೆ ಎಂದು ತಿಳಿಸಿದ್ದಾರೆ.
ಬೆಂಗಳೂರಿನ ಜನರು ಪಾದಯಾತ್ರೆಗೆ ಬೆಂಬಲ ಕೊಡುತ್ತಿದ್ದಾರೆ.ಇವತ್ತು ೧೮ ಕಿಲೋ ಮೀಟರ್ ಪಾದಯಾತ್ರೆ ಮಾಡಲಿದ್ದೇವೆ.ಬಿಟಿಎಂ ಲೇಔಟ್ ನಿಂದ ಅರಮನೆ ಮೈದಾನವರೆಗೂ ಪಾದಯಾತ್ರೆ ಮಾಡುತ್ತಿದ್ದೇವೆ ಎಂದರು.
ಇವರದ್ದು ಡಬಲ್ ಎಂಜಿನ್ ಸರ್ಕಾರ ಅಲ್ಲ.ಇವರದ್ದು ಡಬ್ಬ ಎಂಜಿನ್ ಸರ್ಕಾರ.ಬಿಜೆಪಿಯವರು ಉತ್ತರಕುಮಾರ ರೀತಿ. ಉತ್ತರಕುಮಾರ ಪೌರಷ ಓಲೆ ಮುಂದೆ ಅನ್ನೋ ಹಾಗೆ ಆಗಿದೆ. ಕೇಂದ್ರದ ಮುಂದೆ ಎಲ್ಲ ಸಂಸದರು ಹೋಗಿ ಒತ್ತಡ ಹಾಕ ಬೇಕಿತ್ತುಅದನ್ನ ಮಾಡೋದು ಬಿಟ್ಟು ಪೇಪರ್ ಟೈಗರ್ ಆಗಿದ್ದಾರೆ ಎಂದು ಟೀಕಿಸಿದರು.
ಬಿಜೆಪಿಯವರು ಚಿಲ್ಲರೆ ರಾಜಕಾರಣ ಮಾಡುತ್ತಿದ್ದಾರೆ. ಬೊಮ್ಮನಹಳ್ಳಿ,ಆರ್ ಆರ್ ನಗರ ಕ್ಷೇತ್ರದಲ್ಲಿ ಸಾವಿರಾರು ಫ್ಲೆಕ್ಸ್ ಹಾಕಿದ್ದಾರೆ.ಅಶ್ವತ್ ನಾರಾಯಣ್ ಹುಟ್ಟಹಬ್ಬ,ಸೋಮಣ್ಣ ಹುಟ್ಟು ಹಬ್ಬ,ಗೋಪಾಲಯ್ಯ ಕ್ಷೇತ್ರದಲ್ಲಿ ಫ್ಲೆಕ್ಸ್ ಹಾಕಿದ್ದಾರೆ.ಫ್ಲೆಕ್ಸ್ ಹಾಕೋದು ಕಾನೂನು ರೀತಿ ತಪ್ಪುಆದ್ರೆ ಬಿಜೆಪಿಯವರೇ ಎಷ್ಟು ಸಾವಿರ ಫ್ಲೆಕ್ಸ್ ಹಾಕಿದ್ದಾರೆ ? ಕಾನೂನು ಎಲ್ಲರಿಗೂ ಒಂದೇ ಅಲ್ವಾ ಎಂದು ಪ್ರಶ್ನಿಸಿದರು.
ಬೆಂಗಳೂರಿನ ಜನರಿಗಾಗಿ ನಾವು ಪಾದಯಾತ್ರೆ ಮಾಡುತ್ತಿದ್ದೇವೆ.ಸ್ಪಲ್ಪ ಟ್ರಾಫಿಕ್ ಸಮಸ್ಯೆ ಆಗಲಿದೆ. ಇದನ್ನ ದಯವಿಟ್ಟು ಸಹಿಸಿಕೊಳ್ಳಬೇಕು. ಬೆಂಗಳೂರು ಜನರು ಹೊಟ್ಟೆಗೆ ಹಾಕಿಕೊಳ್ಳಲಿ ಎಂದರು.