Advertisement

ಪಾದರಾಯನಪುರ ಗಲಾಟೆ: ಆರೋಪಿಗಳಿಗೆ ಜಾಮೀನು

05:44 AM May 30, 2020 | Lakshmi GovindaRaj |

ಬೆಂಗಳೂರು: ಪಾದರಾಯನಪುರದಲ್ಲಿ ಕೋವಿಡ್‌ 19 ನಿಯಂತ್ರಣ ಕರ್ತವ್ಯದಲ್ಲಿದ್ದ ಪೊಲೀಸರು ಹಾಗೂ ಬಿಬಿಎಂಪಿ ಆರೋಗ್ಯ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ 126 ಆರೋಪಿಗಳಿಗೆ  ಹೈಕೋರ್ಟ್‌ ಷರತ್ತುಬದ ಜಾಮೀನು ನೀಡಿದೆ.

Advertisement

ಜಾಮೀನು ಕೋರಿ ವಜೀರ್‌ ಖಾನ್‌ ಸೇರಿದಂತೆ 126 ಆರೋಪಿಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಜಾನ್‌ ಮೈಕೆಲ್‌ ಕುನ್ಹಾ ಅವರಿದ್ದ ಏಕಸದಸ್ಯ ನ್ಯಾಯಪೀಠ,  ಜಾಮೀನು   ಅರ್ಜಿಯನ್ನು ಮಾನ್ಯ ಮಾಡಿ, ಷರತ್ತಿನ ಜಾಮೀನು ನೀಡಿ ಆದೇಶಿಸಿತು. ಜಾಮೀನು ಪಡೆದ ಎಲ್ಲಾ ಆರೋಪಿಗಳಿಗೂ ಕೋವಿಡ್‌-19 ಪರೀಕ್ಷೆ ನಡೆಸಬೇಕು.

ಕೋವಿಡ್‌ 19 ಪಾಸಿಟಿವ್‌ ಇದ್ದವರಿಗೆ ಸರ್ಕಾರದ ನಿಯಮದಂತೆ ಕ್ರಮ  ಕೈಗೊಳ್ಳಬೇಕು. ಉಲ್ಲಂ ಸಿದರೆ ಜಾಮೀನು ರದ್ದುಗೊಳ್ಳಲಿದೆ.  ಅಲ್ಲದೇ ಆರೋಪಿಗಳು 1 ಲಕ್ಷ ರೂ. ವೈಯಕ್ತಿಕ ಬಾಂಡ್‌ ಹಾಗೂ ಅಷ್ಟೇ ಮೊತ್ತದ ಶ್ಯೂರಿಟಿ ಒದಗಿಸಬೇಕು ಎಂದು ಆದೇಶಿಸಿದೆ. ಕೋವಿಡ್‌-19 ತಪಾಸಣೆಗೆ ಹೋದಾಗ ಗಲಾಟೆ   ನಡೆದು  ಪೊಲೀಸರು ಮತ್ತು ಆರೋಗ್ಯ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಏ.19ರಂದು ಜೆಜೆಆರ್‌ ನಗರ ಠಾಣೆ ಪಿಎಸ್‌ಐ ದೂರು ನೀಡಿದ್ದರು.

ಆರೋಪಿಗಳ ವಿರುದ ಸಾರ್ವಜನಿಕ ಆಸ್ತಿ ಹಾನಿ ತಡೆ ಕಾಯ್ದೆಯಡಿ  ಎಫ್‌ಐಆರ್‌ ದಾಖಲಿಸಲಾ ಗಿತ್ತು. ಸಿಟಿ ಸಿವಿಲ್‌ ಕೋರ್ಟ್‌ ಮೇ 5ರಂದು ಜಾಮೀನು ಅರ್ಜಿ ತಿರಸ್ಕರಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next