Advertisement
ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆದ ವಿತ್ತೀಯ ವ್ಯವ ಹಾರಗಳಿಗೆ ಸಂಬಂಧಿಸಿದ ಸಂಪುಟ ಸಮಿತಿ (ಸಿಸಿಇಎ) ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. 1987ರ ಸೆಣಬಿನ ಪ್ಯಾಕೇಜಿಂಗ್ ಸಾಮಗ್ರಿ (ಜೆಪಿಎಂ) ಕಾಯ್ದೆಯ ಪ್ರಕಾರ, ಧಾನ್ಯಗಳಲ್ಲಿ ಶೇ.90ರಷ್ಟು ಧಾನ್ಯಗಳನ್ನು ಸೆಣಬಿನ ಚೀಲದಲ್ಲಿ ಪ್ಯಾಕ್ ಮಾಡುವುದು ಕಡ್ಡಾಯವಾಗಿತ್ತು. ಇದನ್ನು ಈಗ ಶೇ.100ರಷ್ಟು ಧಾನ್ಯಗಳ ಸಂಗ್ರಹಣೆಗೆ ಗೋಣಿಚೀಲ ಕಡ್ಡಾಯ ಎಂದು ಬದಲಿಸಲಾಗಿದೆ. ಈ ಮೂಲಕ, ಪ್ಲಾಸ್ಟಿಕ್ ಸೇರಿ ದಂತೆ ಪರಿಸರಕ್ಕೆ ಮಾರಕವಾಗುವ ಪ್ಯಾಕಿಂಗ್ ಮಾದರಿ ಗಳ ಬದಲಿಗೆ ಜೈವಿಕ ಉತ್ಪನ್ನವಾದ ಗೋಣಿ ಚೀಲಗಳನ್ನು ಬಳ ಸಲು ಉತ್ತೇಜನ ನೀಡುವುದರ ಜತೆಗೆ, ಸೆಣಬು ಬೆಳೆಯುವ ರೈತರಿಗೆ ಅನುಕೂಲ ಕಲ್ಪಿಸಲಾಗಿದೆ. ಆದರೆ, ಸಕ್ಕರೆಯ ವಿಚಾರ ದಲ್ಲಿ ಶೇ.20ರಷ್ಟು ಗೋಣಿ ಚೀಲದ ಪ್ಯಾಕಿಂಗ್ ಸಾಕು ಎಂಬ ಜೆಪಿಎಂ ಕಾಯ್ದೆಯ ನಿಯಮವನ್ನು ಹಾಗೇ ಉಳಿಸಿಕೊಳ್ಳಲಾಗಿದೆ. Advertisement
ಆಹಾರ ಧಾನ್ಯಗಳಿಗೆ ಸೆಣಬಿನ ಚೀಲದ ಪ್ಯಾಕಿಂಗ್ ಕಡ್ಡಾಯ
06:00 AM Nov 23, 2018 | |
Advertisement
Udayavani is now on Telegram. Click here to join our channel and stay updated with the latest news.