ಟೆಹ್ರಾನ್: ಇರಾನ್‌ನಲ್ಲಿ ಹಿಜಾಬ್ ವಿರೋಧಿ ಪ್ರತಿಭಟನೆಗಳು ಮುಂದುವರಿದಿವೆ. ಪ್ರತಿಭಟನಾಕಾರರು ಇದೀಗ ಹಿಜಾಬ್ ಧರಿಸುವಂತೆ ಸೂಚಿಸುವ ಧರ್ಮಗುರುಗಳನ್ನು ಗುರಿಯಾಗಿ ಇರಿಸಿಕೊಂಡು ಪ್ರತಿಭಟನೆ ತೀವ್ರಗೊಳಿಸಿದ್ದಾರೆ.
ಸದ್ಯ ವೈರಲ್ ಆಗಿರುವ ವಿಡಿಯೋ ಒಂದರಲ್ಲಿ ಧರ್ಮ ಗುರು ಒಬ್ಬರಿಗೆ “ನಿಮ್ಮ ಕೆಲಸ ನೀವು ನೋಡಿಕೊಳ್ಳಿ (ಮೈಂಡ್ ಯುವರ್ ಓನ್ ಬಿಸಿನೆಸ್) ಎಂದು ಮಹಿಳೆಯೊಬ್ಬರು ಕಿಡಿಕಾರಿದ್ದಾರೆ.
ಜತೆಗೆ, “ಸರಿಯಾಗಿ ವಸ್ತ್ರ ಧರಿಸಿ. ನಿಮ್ಮ ಬ್ಯಾಗ್ ಪ್ಯಾಕ್ ಮಾಡಿ, ಇಲ್ಲಿಂದ ಕೂಡಲೇ ಹೊರನಡೆಯಿರಿ’ ಎಂದೂ ಹೇಳಿದ್ದಾರೆ. ಅದಕ್ಕೆ ಪೂರಕವಾಗಿ ಧರ್ಮಗುರುಗಳು ಮಹಿಳೆಗೆ ಸಾರ್ವಜನಿಕ ಸ್ಥಳದಲ್ಲಿ ಹಿಜಾಬ್ ಧರಿಸಬೇಕೆಂದು ಸೂಚನೆ ನೀಡಿದ್ದು ದಾಖಲಾಗಿದೆ. ಆ ಸಲಹೆಯನ್ನು ತಿರಸ್ಕರಿಸಿರುವ ಮಹಿಳೆ, “ನಾನು ಹಿಜಾಬ್ ಧರಿಸುವುದಿಲ್ಲ’ ಎಂದು ಹೇಳಿ ಹೊರನಡೆದಿದ್ದಾರೆ.
“ಇದು ನನ್ನ ದೇಶ. ನಾನು ಹಿಜಾಬ್ ಧರಿಸಬೇಕೋ, ಬೇಡವೋ ಎಂದು ಹೇಳುವ ಅಧಿಕಾರ ಯಾರಿಗೂ ಇಲ್ಲ. ನನ್ನಿಚ್ಛೆಯಂತೆ ಬದುಕಲು ನಾನು ಬಯಸುತ್ತೇನೆ’ ಎಂದು ಯುವತಿಯೊಬ್ಬಳು ಹೇಳಿರುವ ವಿಡಿಯೋ ಕೂಡ ಬಹಿರಂಗವಾಗಿವೆ.