ವೆಲ್ಲಿಂಗ್ಟನ್: ತೋಂಗಾ ದ್ವೀಪರಾಷ್ಟ್ರದಲ್ಲಿ ಜ.15ರಂದು ಹಠಾತ್ತಾಗಿ ಸಮುದ್ರದ ಅಡಿಯಿಂದ ಸ್ಫೋಟಗೊಂಡಿದ್ದ ಜ್ವಾಲಾಮುಖಿಯಿಂದಾಗಿ ಅಪಾರ ನಷ್ಟವುಂಟಾಗಿದೆ.
ಪೆಸಿಫಿಕ್ ಸಮುದ್ರದ ಮೇಲ್ಮೈಯಿಂದ ಆಕಾಶದ ಕಡೆಗೆ ಸುಮಾರು 30 ಕಿ.ಮೀ.ವರೆಗೆ ಛಿಮ್ಮಿದ್ದ ಜ್ವಾಲಾಮುಖಿಯಿಂದಾಗಿ ಸಮುದ್ರದಲ್ಲಿ ಸುನಾಮಿ ಉಂಟಾಗಿತ್ತು.
ಒಂದೆಡೆ, ಲಾವಾದ ಬಿಸಿ ಹಾಗೂ ಮತ್ತೊಂದೆಡೆ ಸುನಾಮಿಗಳ ದೈತ್ಯ ಅಲೆಗೆ ಸಿಲುಕಿದ ತೊಂಗಾದ ಹಲವಾರು ಪ್ರಾಂತ್ಯಗಳಲ್ಲಿ ಅಗ್ನಿ ಹಾಗೂ ಜಲ ಪ್ರಳಯಗಳೆರಡೂ ಸಂಭವಿಸಿವೆ.
ಇದನ್ನೂ ಓದಿ:ಪಶ್ಚಿಮ ಬಂಗಾಳದ ಪ್ರಸಿದ್ಧ ವ್ಯಂಗ್ಯಚಿತ್ರಕಾರ ನಾರಾಯಣ ದೇವನಾಥ್ ನಿಧನ
ಅನೇಕ ಕಟ್ಟಡ ಹಾಗೂ ಇನ್ನಿತರ ಮೂಲ ಸೌಕರ್ಯಗಳು ನಾಶವಾಗಿದ್ದು, ದ್ವೀಪರಾಷ್ಟ್ರದ ಹಲವಾರು ಪ್ರಾಂತ್ಯ ಗಳಲ್ಲಿನ ಮರಗಳ ಮೇಲೆ ದಪ್ಪನೆಯ ಹಾರುಬೂದಿ ಲೇಪಿತವಾಗಿದೆ. ಇದರಿಂದಾಗಿ ಇಬ್ಬರು ಅಸುನೀಗಿದ್ದಾರೆ.