Advertisement

ಡಿಸೆಂಬರ್‌ 3 ರಿಂದ ಜೀಯಲ್ಲಿ ಪಾರು 

11:23 AM Dec 02, 2018 | |

ಹೊಸ ಶೈಲಿಯ ಧಾರವಾಹಿಗಳನ್ನು ಪ್ರಸಾರ ಮಾಡುವ ಮೂಲಕ ಕನ್ನಡ ಕಿರುತೆರೆ ವೀಕ್ಷಕರ ಮನೆ ಮಾತಾಗಿರುವ  ಜೀ ಕನ್ನಡ ವಾಹಿನಿ ಇದೀಗ ಮತ್ತೂಂದು ಹೊಸ ಧಾರವಾಹಿಯನ್ನು ನೀಡಲು ಅಣಿಯಾಗಿದೆ. ಈಗಾಗಲೇ ಪ್ರೇಮಕಥೆ, ಹಾರರ್‌ ಥ್ರಿಲ್ಲರ್‌ನಂತಹ ಬೇರೆ ಬೇರೆ ಜಾನರ್‌ ಕಥಾ ಹಂದರಗಳನ್ನು ಪ್ರೇಕ್ಷಕರಿಗೆ ನೀಡಿರುವ ಜೀ ವಾಹಿನಿ ಇದೀಗ ಅಪ್ಪಟ ಗ್ರಾಮೀಣ ಸೊಗಡಿನಲ್ಲಿ ನಡೆಯುವ ದೊಡ್ಡ ಮನೆತನದ ಕಥೆಯೊಂದನ್ನು “ಪಾರು’ ಎಂಬ ಹೊಸ ಧಾರವಾಹಿಯ ಮೂಲಕ ನಿರೂಪಿಸಲು ಹೊರಟಿದೆ.

Advertisement

ಅರಸನ ಕೋಟೆಯ ದೊಡ್ಡ ಮನೆತನದ ಒಡತಿ ಅಖೀಲಾಂಡೇಶ್ವರಿ ಹಾಗೂ ಅದೇ ಹಳ್ಳಿಯಲ್ಲಿ ಹುಟ್ಟಿ ಬೆಳೆದ ಪಾರು ಇಬ್ಬರ ನಡುವಿನ ಕಥೆಯನ್ನು “ಪಾರು’ ಧಾರಾವಾಹಿಯ ಮೂಲಕ ನಿರ್ದೇಶಕ ಗುರುಪ್ರಸಾದ್‌ ಮುಡೇನಹಳ್ಳಿ ನಿರೂಪಿಸುತ್ತಿದ್ದಾರೆ. ಡಿಸೆಂಬರ್‌ 3 ರಿಂದ ಜೀ ವಾಹಿನಿಯಲ್ಲಿ ಪ್ರತಿ ರಾತ್ರಿ 9.30 ಕ್ಕೆ ಪ್ರಸಾರವಾಗಲಿರುವ ಈ ಧಾರಾವಾಹಿಯನ್ನು ಧೃತಿ ಕ್ರಿಯೇಷನ್ಸ್‌ ಮೂಲಕ ನಟ-ನಿರ್ದೇಶಕ ದಿಲೀಪ್‌ ರಾಜ್‌ ನಿರ್ಮಾಣ ಮಾಡುತ್ತಿದ್ದಾರೆ.  

ಇನ್ನೂ ಹುಟ್ಟಿನಿಂದಲೇ ಶ್ರೀಮಂತಿಕೆಯನ್ನು ಹೊದ್ದುಕೊಂಡೇ ಬಂದಂತಹ ಅರಸನ ಕೋಟೆಯ ಅರಮನೆಯ ಮಹಾರಾಣಿ ಅಖೀಲಾಂಡೇಶ್ವರಿಯ ಪಾತ್ರವನ್ನು ಹಿರಿಯ ನಟಿ ವಿನಯ್‌ಪ್ರಸಾದ್‌ ಅವರು ನಿರ್ವಹಿಸುತ್ತಿದ್ದಾರೆ. ಅಖೀಲಾಂಡೇಶ್ವರಿಯ ಪ್ರಮುಖ ಘಟನೆಗಳನ್ನು “ಪಾರು’ ಮೂಲಕ ಹೇಳಲಾಗುತ್ತಿದೆ. “ಪಾರು’ ಒಂದು ವಿಭಿನ್ನ ನಿರೂಪಣೆಯ ಧಾರವಾಹಿಯಾಗಿದ್ದು ಪ್ರೇಕ್ಷಕರನ್ನು ರಂಜಿಸಲಿದೆ. ಕನ್ನಡ ಪ್ರೇಕ್ಷಕರಿಗೆ “ಪಾರು’ ಮತ್ತೂಂದು ಹಂತದ ಮನರಂಜನೆಯನ್ನು ನೀಡುತ್ತದೆ ಎಂಬ ವಿಶ್ವಾಸ ತಂಡಕ್ಕಿದೆ. 

Advertisement

Udayavani is now on Telegram. Click here to join our channel and stay updated with the latest news.

Next