Advertisement

ಬಹುಮಹಡಿ ಕಟ್ಟಡದ ಮೇಲಿಂದ ಬಿದ್ದು ಒಯೋ ಸಂಸ್ಥಾಪಕ ರಿತೇಶ್ ಅಗರ್ವಾಲ್ ‘ತಂದೆ’ವಿಧಿವಶ

07:28 PM Mar 10, 2023 | Team Udayavani |

ನವದೆಹಲಿ: ಓಯೋ ರೂಮ್ಸ್ ಸಂಸ್ಥಾಪಕ ರಿತೇಶ್ ಅಗರ್ವಾಲ್ ಅವರ ತಂದೆ ರಮೇಶ್ ಅಗರ್ವಾಲ್ ಇಂದು ಮಧ್ಯಾಹ್ನ ಹರಿಯಾಣದ ಗುರುಗ್ರಾಮ್‌ನಲ್ಲಿ ಬಹುಮಹಡಿಯಿಂದ ಬಿದ್ದು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

ಸೆಕ್ಟರ್ 54, ಗುರುಗ್ರಾಮ್‌ನಲ್ಲಿರುವ ಡಿಎಲ್‌ಎಫ್‌ನ ದಿ ಕ್ರೆಸ್ಟ್ ಸೊಸೈಟಿಯ 20 ನೇ ಮಹಡಿಯಿಂದ ವ್ಯಕ್ತಿಯೊಬ್ಬರು ಬಿದ್ದಿದ್ದಾರೆ ಎಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಡಿಎಲ್‌ಎಫ್ ಭದ್ರತಾ ಸಿಬ್ಬಂದಿಯಿಂದ ಮಾಹಿತಿ ಬಂದಿದ್ದು ಪೊಲೀಸರು ಘಟನಾ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದಾಗ ಕಟ್ಟಡದಿಂದ ಬಿದ್ದಿರುವ ವ್ಯಕ್ತಿ ರಮೇಶ್ ಪರ್ಸಾದ್ ಅಗರ್ವಾಲ್ ಎಂದು ಗುರುತಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಅಲ್ಲದೆ ಓಯೊ ಸಂಸ್ಥಾಪಕ ರಿತೇಶ್ ಅಗರ್ವಾಲ್ ಅವರು ತಂದೆ ಸಾವನ್ನಪಿದ್ದ ಕುರಿತು ಟ್ವೀಟ್ ಮಾಡಿದ್ದಾರೆ. ತಂದೆ ಅಕಾಲಿಕ ಸಾವಿನಿಂದ ನಮ್ಮ ಕುಟುಂಬಕ್ಕೆ ಅಪಾರ ನಷ್ಟವಾಗಿದೆ. ನಮ್ಮ ಕಠಿಣ ಸಮಯಗಳಲ್ಲೂ ನನ್ನ ತಂದೆ ತೋರಿದ ಸಹಾನುಭೂತಿ ಮತ್ತು ಆತ್ಮೀಯತೆಯು ನನ್ನನ್ನ ಮುಂದೆ ಕೊಂಡೊಯ್ದಿತು. ಅವರ ಮಾತುಗಳು ನಮ್ಮ ಹೃದಯದಲ್ಲಿ ಆಳವಾಗಿ ಪ್ರತಿಧ್ವನಿಸುತ್ತವೆ. ಈ ದುಃಖದ ಸಮಯದಲ್ಲಿ ಪ್ರತಿಯೊಬ್ಬರೂ ನಮ್ಮ ಖಾಸಗಿತನವನ್ನ ಗೌರವಿಸಬೇಕೆಂದು ನಾವು ವಿನಂತಿಸುತ್ತೇವೆ’ ಎಂದು ಟ್ವೀಟ್ ಮಾಡಿದ್ದಾರೆ.

ರಿತೇಶ್ ಅಗರ್ವಾಲ್ ಇತ್ತೀಚೆಗೆ ಗೀತಾಂಶ ಸೂದ್ ಅವರನ್ನು ಮಾರ್ಚ್ 7 ರಂದು ವಿವಾಹವಾಗಿದ್ದರು.

ಇದನ್ನೂ ಓದಿ: 8.5 ಮಿಲಿಯನ್ ಫಾಲೋವರ್ಸ್ ಇರುವ ರತನ್ ಟಾಟಾ ಫಾಲೋ ಮಾಡೋ ಏಕೈಕ Instagram ಖಾತೆ ಯಾವುದು?

Advertisement
Advertisement

Udayavani is now on Telegram. Click here to join our channel and stay updated with the latest news.

Next