Advertisement

ಕಿಮ್ಸ್‌ ನಲ್ಲಿ ಆಮ್ಲಜನಕ ಘಟಕಕ್ಕೆ ಭೂಮಿಪೂಜೆ

06:29 PM May 31, 2021 | Team Udayavani |

ಹುಬ್ಬಳ್ಳಿ: ಕಿಮ್ಸ್‌ ಆವರಣದಲ್ಲಿ ಎಲ್‌ ಆ್ಯಂಡ್‌ ಟಿ ಹಾಗೂ ಎನ್‌ಎಂಡಿಸಿ ಕಂಪನಿ ವತಿಯಿಂದ ಪ್ರತ್ಯೇಕವಾಗಿ ನಿರ್ಮಿಸಲಾಗುತ್ತಿರುವ ತಲಾ 1 ಟನ್‌ ಸಾಮರ್ಥಯದ ಎರಡು ಆಮ್ಲಜನಕ ಉತ್ಪಾದನಾ ಘಟಕಕ್ಕೆ ಕೇಂದ್ರ ಸಂಸದೀಯ ವ್ಯವಹಾರಗಳು, ಕಲ್ಲಿದ್ದಲು ಹಾಗೂ ಗಣಿ ಸಚಿವ ಪ್ರಹ್ಲಾದ ಜೋಶಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ರವಿವಾರ ಭೂಮಿಪೂಜೆ ನೆರವೇರಿಸಿದರು.

Advertisement

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಪ್ರಹ್ಲಾದ ಜೋಶಿ, ಲಿಕ್ವಿಡ್‌ (ದ್ರವ) ಆಮ್ಲಜನಕವನ್ನು ಒಂದು ಕಡೆಯಿಂದ ಇನ್ನೊಂದೆಡೆ ಸಾಗಿಸುವುದು ಬಹಳ ಸಮಸ್ಯೆ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರದಿಂದ ಬೇರೆ ಬೇರೆ ಕಂಪನಿಗಳಿಂದ ಸಿಎಸ್‌ಆರ್‌ ಇಲ್ಲವೆ ವಿಶೇಷ ನಿಧಿಯಡಿ ಸಾಧ್ಯವಾದಷ್ಟು ಎಲ್ಲಾ ಜಿಲ್ಲಾಸ್ಪತ್ರೆಗಳಲ್ಲಿ ಆಮ್ಲಜನಕವನ್ನು ಗಾಳಿಯಿಂದಲೇ ಉತ್ಪಾದಿಸುವ ಘಟಕಗಳನ್ನು ನಿರ್ಮಿಸಲಾಗುತ್ತಿದೆ ಎಂದರು.

ಪೆಟ್ರೋಲಿಯಂ ನೈಸರ್ಗಿಕ ಅನಿಲಗಳ ಮಂತ್ರಾಲಯದಡಿಯ ಐಒಸಿಎಲ್‌ (ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌ ಲಿಮಿಟೆಡ್‌), ಎಂಆರ್‌ ಪಿಎಲ್‌ (ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್‌ ಲಿಮಿಟೆಡ್‌)ದಂತಹ ಸಂಸ್ಥೆಗಳು ರಾಜ್ಯದಲ್ಲಿ 32 ಆಮ್ಲಜನಕ ಉತ್ಪಾದನಾ ಘಟಕಗಳ ನಿರ್ಮಾಣಕ್ಕೆ ಮುಂದಾಗಿವೆ. ಗಣಿ ಮತ್ತು ಕಲ್ಲಿದ್ದಲು ಮಂತ್ರಾಲಯದಡಿ ಬರುವ ನೈವೇಲಿ ಲಿಗ್ನೆ ಟ್‌ ಕಾರ್ಪೊರೇಷನ್‌ ರಾಜ್ಯದಲ್ಲಿ 9 ಆಮ್ಲಜನಕ ಉತ್ಪಾದನಾ ಘಟಕಗಳನ್ನು ನಿರ್ಮಿಸಲಿದೆ. ಇದರ ಟೆಂಡರ್‌ ಪ್ರಕ್ರಿಯೆ ಕೂಡ ಮುಗಿದಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next