Advertisement

ಆಮ್ಲಜನಕ ಪೂರೈಕೆ ಘಟಕ ಆರಂಭ : ಪೊಲೀಸರಿಗೆ ನಿರ್ವಹಣೆ ಕುರಿತು ತರಬೇತಿ

04:31 PM May 26, 2021 | Team Udayavani |

ಹುಬ್ಬಳ್ಳಿ: ಸೋನ್ ಸೂದ್- ಸ್ವಾಗ್ ಇಆರ್‌ಟಿ  ಫೌಂಡೇಶನ್ ವತಿಯಿಂದ ನಗರದಲ್ಲಿ ಆಮ್ಲಜನಕ ಪೂರೈಕೆ ಘಟಕ ಆರಂಭಿಸಲಾಗಿದೆ.  ರಾಜ್ಯ ರೈಲ್ವೆ ಪೊಲೀಸರು ಇದನ್ನು ನಿರ್ವಹಣೆ ಮಾಡಲಿದ್ದು, ಪೊಲೀಸರಿಗೆ  ನಿರ್ವಹಣೆ ಕುರಿತು ತರಬೇತಿ ನೀಡಲಾಯಿತು.

Advertisement

ಇಲ್ಲಿನ ರೈಲ್ವೆ ನಿಲ್ದಾಣದ ಬಳಿಯಿರುವ ರಾಜ್ಯ ರೈಲ್ವೆ ಪೊಲೀಸ್ ಠಾಣೆ ಪಕ್ಕದಲ್ಲಿ ಘಟಕ ಆರಂಭಿಸಲಾಗಿದೆ. ಆಮ್ಲಜನಕ ಕೊರತೆಯಿಂದ ಯಾರೂ ಸಾವನ್ನಪ್ಪಬಾರದು ಎನ್ನುವ ಕಾರಣಕ್ಕೆ ಈ ಘಟಕ ಆರಂಭಿಸಿದ್ದು,  ಅಗತ್ಯ ಇದ್ದವರಿಗೆ ಇಲ್ಲಿ ಆಮ್ಲಜನಕ ಸಿಲೆಂಡರ್ ಸಿಗಲಿದೆ. ವಾಣಿಜ್ಯ ನಗರದಿಂದ ಸುತ್ತಲಿನ 120 ಕಿಮೀ ವ್ಯಾಪ್ತಿವರೆಗೆ ಈ ಸೇವೆ ದೊರೆಯಲಿದೆ. ಸದ್ಯಕ್ಕೆ ವಿವಿಧ ಮಾದರಿಯ 20 ಆಕ್ಸಿಜೆನ್ ಸಿಲೆಂಡರ್ ವ್ಯವಸ್ಥೆ ಮಾಡಲಾಗಿದ್ದು, ಬೇಡಿಕೆ ಆಧರಿಸಿ ಇನ್ನಷ್ಟು ಹೆಚ್ಚಿಸಲು ನಿರ್ಧರಿಸಿದ್ದಾರೆ. ಆಮ್ಲಜನಕ ಸಿಲೆಂಡರ್ ಅಗತ್ಯವುಳ್ಳವರು ರಾಜ್ಯ ರೈಲ್ವೆ ಪೊಲೀಸ್ ಡಿವೈಎಸ್ಪಿ ಎನ್.ಪುಷ್ಪಲತಾ ಮೊ: 9480800462, ಇನ್‌ಸ್ಪೆಕ್ಟರ್ ಡಿ.ಬಿ.ಪಾಟೀಲ ಮೊ: 948080472, ಪಿಎಸ್‌ಐ ಸತ್ಯಪ್ಪ ಮುಕ್ಕಣ್ಣವರ-9480800212 ಗೆ ಕರೆ ಮಾಡಬಹುದು.

ರೈಲ್ವೆ ಪೊಲೀಸರು ನಿರ್ವಹಣೆ: ರೈಲ್ವೆ ಎಡಿಜಿಪಿ ಭಾಸ್ಕರ್ ರಾವ್ ಅವರು ಘಟಕ ಆರಂಭಕ್ಕೆ ಕಾಳಜಿ ವಹಿಸಿದ್ದಾರೆ. ಹೀಗಾಗಿ ಎರಡು ಫೌಂಡೇಶನ್‌ಗಳು ಬೇಕಾದ ಸಿಲೆಂಡರ್ ವ್ಯವಸ್ಥೆ ಮಾಡುತ್ತವೆ. ಅಗತ್ಯ ಜನರಿಗೆ ತಲುಪಿಸುವ ಕಾರ್ಯ ರಾಜ್ಯ ರೈಲ್ವೆ ಪೊಲೀಸರು ನಿರ್ವಹಿಸಲಿದ್ದಾರೆ. ಇದಕ್ಕಾಗಿ ಒಂದಿಷ್ಟು ಸಿಬ್ಬಂದಿ, ವಾಹನ, ಒಂದು ಅಂಬ್ಯುಲೆನ್ಸ್, ಏಕಕಾಲಕ್ಕೆ ಬೇಡಿಕೆ ಬಂದರೆ ತಮ್ಮ ಸರಕಾರಿ ವಾಹನ ಬಳಸಲು ಯೋಜನೆ ರೂಪಿಸಿದ್ದಾರೆ. ಇದಕ್ಕೆ ರೈಲ್ವೆ ಇಲಾಖೆ ವೈದ್ಯಕೀಯ ವಿಭಾಗ ವೈದ್ಯಕೀಯ ನೆರವು ನೀಡಲಿದೆ.

Advertisement

Udayavani is now on Telegram. Click here to join our channel and stay updated with the latest news.

Next