Advertisement

ಮಂಗಳನಲ್ಲಿ ಆಮ್ಲಜನಕ ಉತ್ಪಾದನೆ

11:38 PM Apr 22, 2021 | Team Udayavani |

ಕ್ಯಾಲಿಫೋರ್ನಿಯಾ: ಮಂಗಳದ ವಾತಾವರಣದಲ್ಲಿ ಜೀವಾನಿಲ ಆಮ್ಲಜನಕವನ್ನು ಉತ್ಪಾದಿಸುವ ಮೂಲಕ ನಾಸಾದ ಪರ್ಸೆವೆರನ್ಸ್‌ ನೌಕೆ ಮತ್ತೂಂದು ಚಾರಿತ್ರಿಕ ಋಜು ದಾಖಲಿಸಿದೆ. ಅಂಗಾರಕನಲ್ಲಿರುವ ದಟ್ಟ ಇಂಗಾ ಲದ ಡೈ ಆಕ್ಸೈಡ್‌ ಬಳಸಿಕೊಂಡು, ಉಸಿರಾಟಯೋಗ್ಯ ಆಮ್ಲಜನಕ ತಯಾರಿಸಿ ವಿಸ್ಮಯ ಮೂಡಿಸಿದೆ.

Advertisement

ಪರ್ಸೆವೆರನ್ಸ್‌ನ ಈ ಯಶಸ್ಸು ಭವಿಷ್ಯ ದಲ್ಲಿ ಮಂಗಳದಲ್ಲಿ ಇಳಿಯುವ ಗಗನಯಾತ್ರಿಕರಿಗೆ ಆಮ್ಲ ಜನಕದ ಕೊರತೆ ನೀಗಿಸುವ ಸಾಹಸಕ್ಕೆ ಪ್ರೇರಣೆ ಸಿಕ್ಕಂತಾಗಿದೆ.

5 ಗ್ರಾಂ ಆಮ್ಲಜನಕ!: ಟೋಸ್ಟ್‌ ತಯಾರಿಸುವ ಪುಟ್ಟ ಯಂತ್ರದ ಮಾದರಿಯಲ್ಲಿರುವ “ಮೋಕ್ಸಿ’ಯನ್ನು ಪರ್ಸೆ ವೆರನ್ಸ್‌ನಲ್ಲಿ ಅಳವಡಿಸಲಾಗಿದೆ. “ಮೋಕ್ಸಿ ಯಂತ್ರ ಪ್ರಾ ಯೋಗಿಕ ಹಂತದಲ್ಲಿ 5 ಗ್ರಾಂ ಆಕ್ಸಿಜನ್‌ ಉತ್ಪಾದಿಸಿದ್ದು, ಒಬ್ಬ ಗಗನಯಾತ್ರಿಗೆ 10 ನಿಮಿಷ ಉಸಿರಾಡಲು ಇಷ್ಟು ಜೀವಾನಿಲ ಸಾಕು’ ಎಂದು ನಾಸಾ ತಿಳಿಸಿದೆ.

ತಯಾರಿಸಿದ್ದು ಹೇಗೆ?: ಅಂಗಾರಕನ ವಾತಾವರಣದಲ್ಲಿ ಶೇ.95ರಷ್ಟು ಇಂಗಾಲದ ಡೈ ಆಕ್ಸೆ„ಡ್‌ ತುಂಬಿಕೊಡಿದೆ. ಮೊಕ್ಸಿ ತನ್ನ ಎಲೆಕ್ಟ್ರೊಲಿಸಿಸ್‌ ತಂತ್ರಜ್ಞಾನ ಮೂಲಕ ಭಾರೀ ಶಾಖ ಬಳಸಿಕೊಂಡು, ಇಂಗಾಲದ ಡೈ ಆಕ್ಸೆ„ಡ್‌ ಅಣು ವಿನಲ್ಲಿನ ಆಮ್ಲಜನಕ ಪರಮಾಣುವನ್ನು ಪ್ರತ್ಯೇಕಗೊಳಿಸಿ, ಸಂಗ್ರಹಿಸಿದೆ ಎಂದು ವಿಜ್ಞಾನಿಗಳು ವಿವರಿಸಿದ್ದಾರೆ.

ಈ ಪ್ರಾಯೋಗಿಕ ಯಶಸ್ಸು ಆಧರಿಸಿ, ಭವಿಷ್ಯದ ದಿನಗಳಲ್ಲಿ ಮೋಕ್ಸಿ “ಪರ್ಸೆವೆರನ್ಸ್‌’ ನೌಕೆ ಮರಳುವಿಕೆಗೆ ಅಗತ್ಯವಿರುವ ಇಂಧನಯೋಗ್ಯ ಆಮ್ಸಜನಕವನ್ನೂ ಸಂಗ್ರಹಿಸಲಿದೆ.

Advertisement

ಇಲ್ಲಿಂದ ರವಾನಿಸುವುದಕ್ಕಿಂತ ಅಲ್ಲಿ ಉತ್ಪಾದಿಸುವುದೇ ಉತ್ತಮ! :

ನಾಲ್ವರು ಗಗನಯಾತ್ರಿಕರನ್ನು ಮಂಗಳನಲ್ಲಿ ಹೊತ್ತೂಯ್ಯುವ ನೌಕೆಗೆ ಏನಿಲ್ಲವೆಂದರೂ 25 ಮೆಟ್ರಿಕ್‌ ಟನ್‌ ಆಮ್ಲಜನ ಅಗತ್ಯ.

ಈ ಪೈಕಿ 7 ಮೆಟ್ರಿಕ್‌ ಟನ್‌ ಆಮ್ಲಜನಕ ರಾಕೆಟ್‌ನ ಇಂಧನಕ್ಕೇ ಬೇಕು.

ಭೂಮಿಯಿಂದ 25 ಟನ್‌ ಆಮ್ಲಜನಕ ಟ್ಯಾಂಕ್‌ ರವಾನಿಸುವುದಕ್ಕಿಂತ, ಇಂಗಾಲದ ಡೈ ಆಕ್ಸೆ„ಡನ್ನು ಪರಿವರ್ತಿಸಿ 1 ಟನ್‌ ಆಮ್ಲಜನಕ ಉತ್ಪಾದಿಸುವ ಯಂತ್ರ ಕೊಂಡೊಯ್ಯುವುದೇ ಪ್ರಾಕ್ಟಿಕಲ್‌.

Advertisement

Udayavani is now on Telegram. Click here to join our channel and stay updated with the latest news.

Next