Advertisement

ಆಕ್ಸಿಜನ್‌ ಮಹತ್ವ  ತಿಳಿಸಿದ್ದೇ  ಕೊರೊನಾ : ಪಾಟೀಲ

05:56 PM Jun 30, 2021 | Team Udayavani |

ಶಹಾಬಾದ: ಕೋವಿಡ್‌ ಸಂಕಷ್ಟ ಸಮಯದಲ್ಲಿ ಆಕ್ಸಿಜನ್‌ ನೀಡುವ ಗಿಡ ಮರಗಳ ಮಹತ್ವ ಮನದಟ್ಟು ಮಾಡಿಸಿ ಮನುಕುಲಕ್ಕೆ ಕೊರೊನಾ ಹೊಸ ಪಾಠ ಕಲಿಸಿದೆ ಎಂದು ಮರತೂರ ಗ್ರಾಪಂ ಸದಸ್ಯ ಅಜಿತ್‌ಕುಮಾರ ಪಾಟೀಲ ಹೇಳಿದರು.

Advertisement

ಮರತೂರ ಗ್ರಾಮದಲ್ಲಿ ಆಯೋಜಿಸಿದ್ದ ಸಸಿ ವಿತರಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು. ಕೊರೊನಾ ವೈರಸ್‌ ಕಳೆದ ಒಂದೂವರೆ ವರ್ಷದಿಂದ ಜಗತ್ತನ್ನೇ ಕಾಡುತ್ತಿದೆ. ಸೋಂಕಿತ ವ್ಯಕ್ತಿಗಳಿಗೆ ಉಸಿರಾಟದ ತೊಂದರೆಯಾದಾಗ ಆಕ್ಸಿಜನ್‌ ಸಿಲಿಂಡರ್‌ ಸಿಗದೇ ಪರದಾಡಿದಂತಹ ಪರಿಸ್ಥಿತಿ ನಾವೆಲ್ಲಾ ಕಂಡಿದ್ದೆವೆ.

ಅಲ್ಲದೇ ಆಕ್ಸಿಜನ್‌ ಕೊರತೆಯಿಂದ ಸಾವಿರಾರು ಜನರು ಪ್ರಾಣ ಬಿಟ್ಟಿದ್ದಾರೆ. ಆದರೆ ನಮ್ಮ ಜೀವಿತಾ ಅವಧಿಯೂದ್ದಕ್ಕೂ ಉಚಿತವಾಗಿ ಆಕ್ಸಿಜನ್‌ ಪೂರೈಕೆ ಮಾಡುತ್ತಿರುವ ಗಿಡಮರಗಳ ಮಹತ್ವ ಅರಿಯದ ಮೂಢ ಜನರಿಗೆ ಅರಿವು ಮೂಡಿದಂತಾಗಿದೆ. ಈಗಲಾದರೂ ಪ್ರತಿಯೊಬ್ಬರೂ ಕಡ್ಡಾಯವಾಗಿ ಒಂದಾದರೂ ಸಸಿ ನೆಟ್ಟು ಪೋಷಿಸಬೇಕು ಎಂದು ಹೇಳಿದರು.

ಪಿಕೆಪಿಎಸ್‌ಎನ್‌ ಅಧ್ಯಕ್ಷ ರವಿ ನರೋಣಿ ಮಾತನಾಡಿ, ಅರಣ್ಯ ನಾಶದಿಂದ ಪರಿಸರದ ತಾಪಮಾನ ಹೆಚ್ಚಾಗಿ ಪ್ರಕೃತಿ ವಿಕೋಪಗಳು ಸಂಭವಿಸುತ್ತಿವೆ. ಆದ್ದರಿಂದ ಈ ತಾಪಮಾನ ತಡೆಯಲು ಮರ ಬೆಳೆಸಬೇಕು ಎಂದು ಹೇಳಿದರು.

ಗ್ರಾಪಂ ಅಧ್ಯಕ್ಷ ಗುರುನಾಥ ಕಂಬಾ, ಗ್ರಾಪಂ ಸದಸ್ಯರಾದ ಸಿದ್ರಾಮಪ್ಪಗೌಡ ಮಾಲಿಪಾಟೀಲ, ಶಾಮರಾಯ ಸುಣಗಾರ, ಶೌಕತ್‌ ಅಲಿ, ಪರಶುರಾಮ, ಗೌರಿಶಂಕರ ಪಾಟೀಲ, ಶರಣಬಸಪ್ಪ ಪಾಟೀಲ, ಸಂಗಣ್ಣ ಮೈನಾಳ, ಗ್ರಾಪಂ ಕಾರ್ಯದರ್ಶಿ ಅಣ್ಣಾಸಾಬ ಪಾಟೀಲ, ಭೀಮಾಶಂಕರ ನರೋಣಿ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next