Advertisement

ಶಾಲೆ-ಕಾಲೇಜುಗಳ ಪರಿಸ್ಥಿತಿ ಅವಲೋಕನ

11:07 AM Jan 22, 2018 | Team Udayavani |

ಆಳಂದ: ಪಟ್ಟಣದ ಪದವಿ ಕಾಲೇಜು ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಕುರಿತು ತಹಶೀಲ್ದಾರ್‌ ಕಚೇರಿಯಲ್ಲಿ ಜಿಲ್ಲಾಧಿಕಾರಿ ಆರ್‌. ವೆಂಕಟೇಶಕುಮಾರ ಅಧಿಕಾರಿಗಳ ಸಭೆ ನಡೆಸಿ ಮಾಹಿತಿ ಕಲೆಹಾಕಿದರು.

Advertisement

ಹೇಬಳಿ ರಸ್ತೆಯಲ್ಲಿ ನಿರ್ಮಾಣವಾಗುತ್ತಿರುವ ಸರ್ಕಾರಿ ಪದವಿ ಕಾಲೇಜಿನ ಪ್ರಗತಿ ವರದಿ ಹಾಗೂ ಪಟ್ಟಣದಿಂದ ಕಾಲೇಜಿನ ವರೆಗೆ ರಸ್ತೆ ಸುಧಾರಣೆ ಕೈಗೊಳ್ಳಬೇಕು. ಈಗಾಗಲೇ ಸಾರಿಗೆ ಬಸ್ಸುಗಳು ಒಡಾಡುವ ಸಂಖ್ಯೆ ಎಷ್ಟು? ಕಾಲೇಜು ಪ್ರಾರಂಭವಾದರೆ ಇನ್ನು ಎಷ್ಟು ಬಸ್‌ ಬಿಡಬಹುದು, ಪದವಿ ಕಾಲೇಜಿಗೆ ಎಷ್ಟು ಕೋಣೆಗಳು ಬೇಕು? ನಿರ್ಮಾಣವಾಗುತ್ತಿರುವ ಕೋಣೆಗಳ ಸಂಖ್ಯೆ ಎಷ್ಟು, ಕಟ್ಟಡ ಪೂರ್ಣಗೊಂಡಾಗ ಉಳಿಯುವ ಸ್ಥಳದ ಮಾಹಿತಿ, ವಿದ್ಯುತ್‌, ಕುಡಿಯುವ ನೀರಿನ ವ್ಯವಸ್ಥೆ ಬಗ್ಗೆ ಸಮಗ್ರ ಮಾಹಿತಿಯನ್ನು ಎರಡು ದಿನದಲ್ಲಿ ಸಲ್ಲಿಸಲು ಜಿಲ್ಲಾಧಿಕಾರಿಗಳು ಸೂಚಿಸಿದರು.

ತಹಶೀಲ್ದಾರ್‌ ಬಸವರಾಜ ಎಂ. ಬೆಣ್ಣೆಶಿರೂರ, ಗ್ರೇಡ್‌ 2 ತಹಶೀಲ್ದಾರ್‌ ಬಿ.ಜಿ. ಕುದರಿ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಡಾ| ಸಂಜಯ ರೆಡ್ಡಿ, ಪುರಸಭೆ ಮುಖ್ಯ ಅಧಿಕಾರಿ ಚಂದ್ರಕಾಂತ ಪಾಟೀಲ, ಲೋಕೋಪಯೋಗಿ ಇಲಾಖೆಯ
ಎಇಇ ಹಾವೇಂದ್ರ ಪುಣ್ಯಶೆಟ್ಟಿ, ಗ್ರಾಮೀಣ ನೀರು ಸರಬರಾಜು ವಿಭಾಗದ ಎಇಇ ಅಬ್ದುಲ್‌ ಸಲಾಂ, ಜಿಪಂ ಉಪ ವಿಭಾಗದ ಎಇಇ ತಾನಾಜಿ ವಾಡೇಕರ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಸಹಾಯಕ ನಿರ್ದೇಶಕ ರೆಡ್ಡಿ, ಕಾಲೇಜು ವಿಭಾಗದ ಶಿವಶರಣಪ್ಪಾ ಬಿರಾದಾರ, ಬಸವಣ್ಣಪ್ಪ, ಸಾರಿಗೆ ಘಟಕದ ವ್ಯವಸ್ಥಾಪಕ ಚಂದ್ರಶೇಖರ, ಜೆಸ್ಕಾಂ ಅಧಿಕಾರಿಗಳು ಇದ್ದರು. 

ಶಾಲೆಗೆ ಭೇಟಿ: 2018ರ ಚುನಾವಣೆ ಪ್ರಯುಕ್ತ ಕೊಡಲಹಂಗರಗಾ ಸರ್ಕಾರಿ ಪ್ರಾಥಮಿಕ ಶಾಲೆಗೆ ಜಿಲ್ಲಾಧಿ ಕಾರಿ ವೆಂಕಟೇಶಕುಮಾರ ಭೇಟಿ ನೀಡಿ ಮತಗಟ್ಟೆ ಕೇಂದ್ರಗಳನ್ನು ಪರಿಶೀಲಿಸಿ, ಮಕ್ಕಳಿಗೆ ಅನೇಕ ಪ್ರಶ್ನೆಗಳನ್ನು ಕೇಳಿ ಶಿಕ್ಷಣದ ಗುಣಮಟ್ಟ ತಿಳಿದುಕೊಂಡರು. ನಂತರ ಕಡಗಂಚಿ ತೋಗರಿ ಖರೀದಿ ಕೆಂದ್ರಕ್ಕೆ ಭೇಟಿ ನೀಡಿ ಅಲ್ಲಿನ ಖರೀದಿ ಪ್ರಕಿಯೆ ಪರಿಶೀಲಿಸಿದರು. ತಹಶೀಲ್ದಾರ್‌ ಬಸವರಾಜ ಎಂ. ಬೆಣ್ಣೆಶಿರೂರ ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next