ನವದೆಹಲಿ : ಬ್ರಿಸ್ಬೇನ್ ನಲ್ಲಿ ನಡೆದ ಭಾರತ ಮತ್ತು ಆಸ್ಟ್ರೇಲಿಯಾ ಸರಣಿಯನ್ನು 2..1ರ ಅಂತರದಲ್ಲಿ ಐತಿಹಾಸಿಕ ಗೆಲುವು ಸಾಧಿಸಿದ ಟೀಮ್ ಇಂಡಿಯಾ ತಂಡಕ್ಕೆ ಪ್ರಧಾನಿ ಮೋದಿ ಶುಭಾಶಯ ಹೇಳಿದ್ದಾರೆ.
ಆಸ್ಟ್ರೇಲಿಯಾದಲ್ಲಿ ಟೀಮ್ ಇಂಡಿಯಾ ಗೆಲುವು ಸಾಧಿಸಿದ್ದಕ್ಕೆ ನಾವೆಲ್ಲರೂ ಸಂತೋಷರಾಗಿದ್ದೇವೆ. ಅವರ ಗಮನಾರ್ಹ ಶಕ್ತಿ ಮತ್ತು ಉತ್ಸಾಹ, ನಿರ್ಧಾರ, ಉದ್ದೇಶ ಪಂದ್ಯದುದ್ದಕ್ಕೂ ಕಾಣಿಸುತ್ತಿತ್ತು. ಶುಭಾಶಯಗಳು ಟೀಮ್ ಇಂಡಿಯಾ. ನಿಮ್ಮ ಮುಂದಿನ ಪ್ರಯತ್ನಕ್ಕೂ ಆಲ್ ದಿ ಬೆಸ್ಟ್ ಅಂತ ಮೋದಿ ಟೀಟ್ ಮಾಡಿ ಶುಭ ಹಾರೈಸಿದ್ದಾರೆ.
ಬ್ರಿಸ್ಬೇನ್ ನ ಗಾಬ್ಬಾ ಅಂಗಳದಲ್ಲಿ ದಿಟ್ಟ ಪ್ರದರ್ಶನ ತೋರಿದ ಭಾರತ ತಂಡ ಮೂರು ವಿಕೆಟ್ ಅಂತರದಲ್ಲಿ ಪಂದ್ಯ ಗೆದ್ದು, 2-1 ಅಂತರದಲ್ಲಿ ಬಾರ್ಡರ್- ಗವಾಸ್ಕರ್ ಟ್ರೋಫಿಯನ್ನು ತನ್ನ ಮುಡಿಗೇರಿಸಿಕೊಂಡಿತ್ತು.
ಗೆಲುವಿಗೆ ನಾಲ್ಕನೇ ಇನ್ನಿಂಗ್ಸ್ ನಲ್ಲಿ 328 ರನ್ ಗುರಿ ಪಡೆದ ಭಾರತ ತಂಡಕ್ಕೆ ಆರಂಭಿಕ ಶುಭ್ಮನ್ ಗಿಲ್, ಚೇತೇಶ್ವರ ಪೂಜಾರ ಮತ್ತು ರಿಷಭ್ ಪಂತ್ ನೆರವಾದರು. ಮೂವರು ಅರ್ಧಶತಕ ಸಿಡಿಸಿ, ಗಾಬ್ಬಾದಲ್ಲಿ ವಿಶ್ವದಾಖಲೆಯ ಜಯ ಸಾಧಿಸಲು ನೆರವಾಗಿದ್ದರು.