Advertisement

ತುಂಬಿ ಹರಿದ ಹಳ್ಳ-ಕೊಳ್ಳಗಳು

12:25 PM May 19, 2020 | mahesh |

ಕೊಂಡ್ಲಹಳ್ಳಿ: ಸಮೀಪದ ಮಾರಮ್ಮನಹಳ್ಳಿಯಲ್ಲಿ ಸುರಿದ ಆಲಿಕಲ್ಲು ಮಳೆ ಸುರಿದು ಹಳ್ಳ-ಕೊಳ್ಳಗಳು ತುಂಬಿ ಹರಿದಿದ್ದು, ಚೆಕ್‌ ಡ್ಯಾಂಗಳು ಭರ್ತಿಯಾಗಿವೆ. ಗಾಳಿಗೆ ಗ್ರಾಮದಲ್ಲಿ ಮರಗಳು ಬಿದ್ದು ಗ್ರಾಮದ ಇಸ್ಲಾಂಪುರ ರಸ್ತೆ ಬಂದ್‌ ಆಗಿತ್ತು. ರಾತ್ರಿಯಿಂದ ಸೋಮವಾರ ಮಧ್ಯಾಹ್ನವರೆಗೂ ಕರೆಂಟ್‌ ಸಂಪರ್ಕ ಇರಲಿಲ್ಲ. ಮನೆಗಳ ಮೇಲೆ ಮರಗಳು, ವಿದ್ಯುತ್‌ ಕಂಬ ಬಿದ್ದು ಹಾನಿ ಸಂಭವಿಸಿದೆ. 20ಕ್ಕೂ ವಿದ್ಯುತ್‌ ಕಂಬಗಳು ಗಾಳಿಗೆ ಮುರಿದು ಬಿದ್ದಿವೆ. ನೀರಾವರಿ ತೋಟಗಳಲ್ಲಿನ ಟೊಮಾಟೋ, ಪಪ್ಪಾಯಿ, ಈರುಳ್ಳಿ ಬೆಳೆಗಳು ನೆಲಕ್ಕಚ್ಚಿ ರೈತರಿಗೆ ಅಪಾರ ಹಾನಿಯಾಗಿದೆ. ಕೊಂಡ್ಲಹಳ್ಳಿ, ಮೊಗಲಹಳ್ಳಿ, ಬಿ.ಜಿ.ಕೆರೆ, ಕೋನಸಾಗರ, ಉಡೇವು ಗ್ರಾಮಗಳ ಭಾನುವಾರ ಭಾರಿ ಗಾಳಿ-ಮಳೆಯಿಂದ ಅಪಾರ ಹಾನಿಯಾಗಿದೆ.

Advertisement

ಮಾರಮ್ಮನಹಳ್ಳಿ, ಕೊಂಡ್ಲಹಳ್ಳಿ, ಮಾರಮ್ಮನಹಳ್ಳಿ, ಮೊಗಲಹಳ್ಳಿಗಳ ಹಳ್ಳಗಳು ತುಂಬಿ ಹರಿದಿವೆ. ಚೆಕ್‌ ಡ್ಯಾಂಗಳು ಭರ್ತಿಯಾಗಿವೆ. ಗ್ರಾಮಸ್ಥರು ತುಂಬಿ ಹರಿಯುವ ಹಳ್ಳ ಸಂತಸಪಟ್ಟರು. ಕೊಂಡ್ಲಹಳ್ಳಿಯ ಹಳ್ಳದ ದಂಡೆಯಲ್ಲಿ ತಾ ಪಂ ಸದಸ್ಯ ಟಿ.ರೇವಣ್ಣ ಪೂಜೆ ಸಲ್ಲಿಸಿದರು. ಸ್ಥಳಕ್ಕೆ ಕಂದಾಯ ಇಲಾಖೆಯ ನಾಗರಾಜ್‌ ,ಬೊಮ್ಮಣ್ಣ, ಕೃಷಿ ಇಲಾಖೆ ನಾಗರಾಜ್‌ ಭೇಟಿ ನೀಡಿದ ನಷ್ಟದ ವಿವರ ಮಾಹಿತಿ ಪಡೆದರು.

Advertisement

Udayavani is now on Telegram. Click here to join our channel and stay updated with the latest news.

Next