Advertisement

ಲಾರಿಗಳಲ್ಲಿ ಓವರ್‌ ಲೋಡ್‌: ಪ್ರತಿಭಟನೆ

11:32 AM Jan 12, 2018 | Team Udayavani |

ಸುರತ್ಕಲ್‌ : ರೋರೋ ಮೂಲಕ ಹೋಗುವ ಲಾರಿ ಸರಕುಗಳಲ್ಲಿ ಓವರ್‌ ಲೋಡ್‌ ಹಾಗೂ ಜಿಎಸ್‌ಟಿ ತಪ್ಪಿಸಿ ಕೊಂಡೊಯ್ಯುತ್ತಿದ್ದ ಐದು ಲಾರಿಗಳನ್ನು ರೋರೋ ಬಳಿ ಲಾರಿ ಚಾಲಕ ಮಾಲಕರ ಹಿತರಕ್ಷಣಾ ಸೇನಾ ಪ್ರತಿಭಟನೆ ನಡೆಸಿ ತಡೆ ಹಿಡಿಯಿತಲ್ಲದೆ ಆರ್‌ಟಿಒ ಅ ಧಿಕಾರಿಗಳು ಬರಬೇಕು ಎಂದು ಪಟ್ಟು ಹಿಡಿದರು.

Advertisement

ರೋರೋ ಲಾರಿಯಲ್ಲಿ ಸುಮಾರು 25 ಅಧಿ ಕ ಓವರ್‌ ಲೋಡ್‌ ಕಂಡು ಬಂದಿದ್ದು, ತೂಕ ಮಾಡುವ ಸಂದರ್ಭ ಪತ್ತೆಯಾಯಿತು. ಈ ಬಗ್ಗೆ ಆರ್‌ಟಿಒ ಅಧಿಕಾರಿಗಳಲ್ಲಿ ದೂರಿದರೂ ನಿರ್ಲಕ್ಷ್ಯ  ಭಾವ ತಾಳಿದ್ದಾರೆ ಎಂದು ಹಿತರಕ್ಷಣಾ ಸೇನಾ ಮುಖಂಡರು ಆರೋಪಿಸಿದರು. ರೋರೋ ಅ ಧಿಕಾರಿಗಳು ಹಾಗೂ ಏಜೆಂಟ್‌ಗಳು ಹಾಗೂ ಆರ್‌ಟಿಒ ಅಧಿ ಕಾರಿಗಳು ಶಾಮೀಲಾಗಿದ್ದಾರೆ ಎಂದು ಸಂಚಾಲಕ ನವೀನ್‌ ರಾಜ್‌ ಆಪಾದಿಸಿದರು.  ಪ್ರಮುಖರಾದ ಸಿದ್ದೀಕ್‌, ಪದ್ಮನಾಭ, ಲಾರೆನ್ಸ್‌ , ಪುಷ್ಪರಾಜ್‌, ಮದನ್‌ ಕರ್ಕೇರ, ವಿಶ್ವನಾಥ್‌, ಸಂದೀಪ್‌ ಸರಪಾಡಿ ನೇತೃತ್ವದಲ್ಲಿ ಲಾರಿ ತಪಾಸಣೆ ಕಾರ್ಯ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next