Advertisement

Peoples Padma; ನಾಮನಿರ್ದೇಶನ ಮಾಡಲು ಜನರನ್ನು ಒತ್ತಾಯಿಸಿದ ಪ್ರಧಾನಿ ಮೋದಿ

07:30 PM Sep 09, 2024 | Team Udayavani |

ಹೊಸದಿಲ್ಲಿ: ಪದ್ಮ ಪ್ರಶಸ್ತಿಗೆ ಸಾಧಕರನ್ನು ನಾಮನಿರ್ದೇಶನ ಮಾಡಲು ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ (ಸೆ9) ದೇಶವಾಸಿಗಳಿಗೆ ಮನವಿ ಮಾಡಿದ್ದಾರೆ.

Advertisement

ಎಕ್ಸ್ ಪೋಸ್ಟ್ ನಲ್ಲಿ ಕಳೆದೊಂದು ದಶಕದಲ್ಲಿ, ಅಸಂಖ್ಯಾತ ತಳಮಟ್ಟದ ಸಾಧಕರನ್ನು “ಪೀಪಲ್ಸ್ ಪದ್ಮ”(Peoples Padma) ನೀಡಿ ಗೌರವಿಸಲಾಗಿದೆ ಮತ್ತು ಪ್ರಶಸ್ತಿಗಳಿಗೆ ಸ್ಪೂರ್ತಿದಾಯಕ ವ್ಯಕ್ತಿಗಳನ್ನು ನಾಮನಿರ್ದೇಶನ ಮಾಡಲು ಹೆಚ್ಚಿನ ಜನರನ್ನು ಒತ್ತಾಯಿಸುತ್ತಿದ್ದೇವೆ. ಪ್ರಶಸ್ತಿ ಪುರಸ್ಕೃತರ ಜೀವನ ಪಯಣ ಅಸಂಖ್ಯಾತ ಜನರನ್ನು ಪ್ರೇರೇಪಿಸಿದೆ ಎಂದು ಪ್ರಧಾನಿ ಬರೆದಿದ್ದಾರೆ.

“ನಾಮನಿರ್ದೇಶನ ಮಾಡಲು ಈ ತಿಂಗಳ 15(ಸೆ) ಕೊನೆಯ ದಿನವಾಗಿದೆ. ಪದ್ಮ ಪ್ರಶಸ್ತಿಗಳಿಗೆ ಸ್ಪೂರ್ತಿದಾಯಕ ವ್ಯಕ್ತಿಗಳನ್ನು ನಾಮನಿರ್ದೇಶನ ಮಾಡಲು ಹೆಚ್ಚಿನ ಜನರನ್ನು ನಾನು ಕೋರುತ್ತೇನೆ. ನೀವು https://awards.gov.in ಮೂಲಕ ನಾಮನಿರ್ದೇಶನ ಮಾಡಬಹುದು ಎಂದು ಬರೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next