Advertisement

65 ವರ್ಷದಲ್ಲಾಗದ ಪ್ರಗತಿ 4 ವರ್ಷದಲ್ಲಿ

11:50 AM May 03, 2018 | Team Udayavani |

ಬೆಂಗಳೂರು: ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಹಾಲಿ ಶಾಸಕ ಡಾ. ಅಶ್ವತ್ಥ್ ನಾರಾಯಣ್‌ ಪರವಾಗಿ ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ಬುಧವಾರ ಬಿರುಸಿನ ಪ್ರಚಾರ ನಡೆಸಿದರು.

Advertisement

ಬಿಜೆಪಿ ಕಾರ್ಯಕರ್ತರೊಂದಿಗೆ ಪಾದಯಾತ್ರೆ ನಡೆಸಿದ ಸಚಿವ ಸದಾನಂದ ಗೌಡ, ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗಾಗಿ ಮತ್ತೂಮ್ಮೆ ಅಶ್ವತ್ಥ್ ನಾರಾಯಣ್‌ ಅವರನ್ನು ಗೆಲ್ಲಿಸುವಂತೆ ಮತದಾರರಲ್ಲಿ ಮನವಿ ಮಾಡಿದರು. ಕಳೆದ 65 ವರ್ಷಗಳಲ್ಲಿ ಕಾಂಗ್ರೆಸ್‌ನಿಂದ ಸಾಧ್ಯವಾಗದ ಪ್ರಗತಿಯನ್ನು ನರೇಂದ್ರ ಮೋದಿ ಸರ್ಕಾರ ನಾಲ್ಕೇ ವರ್ಷಗಳಲ್ಲಿ ಸಾಧಿಸಿದೆ.
 
ದೇಶದ ಕಟ್ಟಕಡೆಯ ಗ್ರಾಮಕ್ಕೂ ವಿದ್ಯುತ್‌ ಬೆಳಕು ನೀಡಿದ್ದು, ಅಭಿವೃದ್ಧಿಗೆ ನಿಜ ಅರ್ಥ ಕೊಟ್ಟದ್ದೇ ಬಿಜೆಪಿ ಸರ್ಕಾರ. ಹೀಗಾಗಿ ಈ ಬಾರಿ ಬಿಜೆಪಿಯನ್ನು ಬೆಂಬಲಿಸುವಂತೆ ಕೋರಿದರು. ಮೈಸೂರು ಬೆಂಗಳೂರು ನಡುವೆ 2920 ಕೋಟಿ ರೂ. ಕೋಟಿ ವೆಚ್ಚದಲ್ಲಿ ಷಟ್ಪಥ ರಸ್ತೆ ನಿರ್ಮಾಣಕ್ಕೆ ಈಗಾಗಲೇ ಶಂಕುಸ್ಥಾಪನೆಯಾಗಿದ್ದು ಕಾಮಗಾರಿಗೆ ಗುತ್ತಿಗೆಯನ್ನೂ ನೀಡಲಾಗಿದೆ. ಈ ಯೋಜನೆ ಯಿಂದ ಸಾಕಷ್ಟು ಪ್ರಮಾಣದಲ್ಲಿ ಸ್ಥಳೀಯವಾಗಿ ಉದ್ಯೋಗ ಸೃಷ್ಟಿಯಾಗಲಿವೆ. ಜತೆಗೆ ಪ್ರಮುಖ ನಗರಗಳಲ್ಲಿ ಮೇಲ್ಸೇತುವೆ ನಿರ್ಮಾಣದ ಮೂಲಕ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಿದೆ ಎಂದು ಸಚಿವರು ತಿಳಿಸಿದರು.

ಶಾಸಕ ಅಶ್ವತ್ಥ್ ನಾರಾಯಣ್‌ ಮಾತನಾಡಿ, ಕೇಂದ್ರ ಸರ್ಕಾರ ಅವಧಿಗೂ ಮುನ್ನವೇ ಯೋಜನೆಗಳನ್ನು ಪೂರ್ಣಗೊಳಿಸಿದರೆ ರಾಜ್ಯದಲ್ಲಿ ಕಾಂಗ್ರೆಸ್‌ ಕಾಮ ಗಾರಿ ಪೂರ್ಣಗೊಳ್ಳುವ ಮೊದಲು ಉದ್ಘಾಟನೆ ಮಾಡಿದ್ದನ್ನೇ ಸಾಧನೆ ಎಂದುಕೊಂಡಿದೆ. ಚುನಾವಣೆ ಹತ್ತಿರವಾಗುತ್ತಿದ್ದಂತೆ ಉತ್ತಮವಾಗಿದ್ದ ರಸ್ತೆಗಳನ್ನೂ ಅಗೆದು ಕಾಂಕ್ರಿಟ್‌ ಹಾಕಲಾಗಿದ್ದು, ಗುತ್ತಿಗೆ ಯೋಜನೆಗಳನ್ನು ಹಂಚುವಲ್ಲಿ ಪಡೆದ ಕಮಿಷನ್‌ ಹಣವನ್ನೇ ಚುನಾವಣೆಯಲ್ಲಿ ಖರ್ಚುಮಾಡುತ್ತಿದೆ
ಎಂದು ಆರೋಪಿಸಿದರು.

ಕ್ಷೇತ್ರದಾದ್ಯಂತ ಮತದಾರರ ಬೆಂಬಲ ಅಭೂತ ಪೂರ್ವವಾಗಿದ್ದು, ಈ ಬಾರಿ ಗೆಲುವು ಸಾಧಿಸಿದರೆ ಬೆಂಗಳೂರಿನ ಶುಚಿತ್ವಕ್ಕೆ ಮಹತ್ವ ಕೊಡುವುದಲ್ಲದೆ ಟ್ರಾಫಿಕ್‌ ಸಮಸ್ಯೆಗೆ ಪರಿಹಾರ ಕಾಣಿಸಲು ಶ್ರಮಿಸುವುದಾಗಿ ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next