Advertisement

ಹಳಿ ತಪ್ಪಿದ ಗೂಡ್ಸ್ ರೈಲಿನ 50ಕ್ಕೂ ಹೆಚ್ಚು ವ್ಯಾಗನ್‌ಗಳು; ಸಂಚಾರ ಅಸ್ತವ್ಯಸ್ತ

03:35 PM Oct 26, 2022 | Team Udayavani |

ಪಾಟ್ನಾ : ಬಿಹಾರದ ಗುರ್ಪಾ ರೈಲು ನಿಲ್ದಾಣದ ಬಳಿ ಬುಧವಾರ ಮುಂಜಾನೆ ಕಲ್ಲಿದ್ದಲು ತುಂಬಿದ ಗೂಡ್ಸ್ ರೈಲಿನ ಕನಿಷ್ಠ 53 ವ್ಯಾಗನ್‌ಗಳು ಹಳಿತಪ್ಪಿದ್ದು, ರೈಲು ಸಂಚಾರವನ್ನು ಅಸ್ತವ್ಯಸ್ತಗೊಳಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಧನಬಾದ್ ವಿಭಾಗದ ಕೊಡೆರ್ಮಾ ಮತ್ತು ಮನ್ಪುರ್ ರೈಲು ನಿಲ್ದಾಣಗಳ ನಡುವೆ ಬೆಳಗ್ಗೆ 6.24 ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಪೂರ್ವ ಕೇಂದ್ರ ರೈಲ್ವೆ (ಇಸಿಆರ್) ಹೇಳಿಕೆಯಲ್ಲಿ ತಿಳಿಸಿದೆ.ಇದಕ್ಕೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ. ರೈಲ್ವೆ ತಂಡಗಳು ಮಾರ್ಗಗಳನ್ನು ಮರುಸ್ಥಾಪಿಸುವ ಕೆಲಸವನ್ನು ಪ್ರಾರಂಭಿಸಿವೆ ಎಂದು ಇಸಿಆರ್ ವಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಹಳಿ ತಪ್ಪಿದ ಕಾರಣ ಯಾರಿಗೂ ಗಾಯಗಳಾಗಿಲ್ಲ.ಘಟನೆಯ ನಂತರ ಹತ್ತು ರೈಲುಗಳನ್ನು ಬೇರೆ ಮಾರ್ಗಗಳಿಗೆ ತಿರುಗಿಸಲಾಗಿದೆ ಮತ್ತು ನಾಲ್ಕು ರೈಲುಗಳನ್ನು ಭಾಗಶಃ ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳ ಹೇಳಿಕೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next