ಬಮಾಕೊ (ಮಾಲಿ): ಅಲ್‌ಖೈದಾ ಸಂಘಟನೆಗೆ ಸೇರಿದ ಜಿಹಾದಿ ಉಗ್ರರ ಮೇಲೆ ವೈಮಾನಿಕ ದಾಳಿ ಮಾಡಿದ ಫ್ರಾನ್ಸ್, 50 ಉಗ್ರರನ್ನು ಹತ್ಯೆಗೈದಿದೆ.
ಬುರ್ಕಿನಫಾಸೊ, ನೈಜರ್ ಗಡಿಭಾಗದಲ್ಲಿ ಇಸ್ಲಾಮ್ ನುಸುಳಕೋರರನ್ನು ತಡೆಯಲು ಫ್ರಾನ್ಸ್ ಸದ್ಯ ಒದ್ದಾಡುತ್ತಿದೆ. ಇಲ್ಲಿಗೆ ಹತ್ತಿರದಲ್ಲಿರುವ ಕೇಂದ್ರ ಮಾಲಿಯಲ್ಲಿ ಅ.30ರಂದೇ ಈ ದಾಳಿ ನಡೆದಿದ್ದು, ಈಗ ಸರ್ಕಾರ ಅದನ್ನು ಬಹಿರಂಗಪಡಿಸಿದೆ.
ನುಸುಳಕೋರರು ವೈಮಾನಿಕ ವಿಚಕ್ಷಣೆ ತಡೆಯಲು, ಮರಗಳ ನಡುವಿನಿಂದ ಚಲಿಸುತ್ತಿದ್ದರು. ಈ ವೇಳೆ ಭಾರೀ ಪ್ರಮಾಣದ ಬೈಕ್‌ಗಳ ಚಲನೆ ಕಂಡುಬಂದಿದ್ದರಿಂದ ಎಚ್ಚರಗೊಂಡ ಫ್ರಾನ್ಸ್‌ನ ಬರ್ಖಾನೆ ಕಾರ್ಯಾಚರಣೆ ತಂಡ, ಒಮ್ಮೆಲೆ ಸ್ಥಳಕ್ಕೆ ತೆರಳಿ, ದಾಳಿ ನಡೆಸಿದೆ. ಈ ವೇಳೆ ಸ್ಫೋಟಕಗಳು, 30 ಬೈಕ್‌ಗಳು, ನಾಲ್ವರು ಉಗ್ರರನ್ನು ವಶಕ್ಕೆ ಪಡೆಯಲಾಗಿದೆ.
ಇದನ್ನೂ ಓದಿ;ಸೇನೆಗೆ ಮತ್ತಷ್ಟು ಬಲ: ಭಾರತೀಯ ವಾಯುಪಡೆಗೆ ಸೇರ್ಪಡೆಯಾಗಲಿವೆ ಮತ್ತೆ 3 ರಫೇಲ್ ಯುದ್ಧ ವಿಮಾನ
ಒಳನುಸುಳುತ್ತಿದ್ದ ಗುಂಪಿಗೆ ಧಾರ್ಮಿಕ ಕೇಂದ್ರವೊಂದರ ದಾಳಿ ಮಾಡುವ ಉದ್ದೇಶವಿತ್ತು ಎಂದು ಫ್ರಾನ್ಸ್ ರಕ್ಷಣಾ ಸಚಿವೆ ಫ್ಲಾರೆನ್ಸ್ ಪಾರ್ಲಿ ತಿಳಿಸಿದ್ದಾರೆ.