ನವದೆಹಲಿ: ಮುಂಬೈ-ನಾಗ್ಪುರ ಸಂಪರ್ಕ ಕಲ್ಪಿಸುವ ಸಮೃದ್ಧಿ ಹೆದ್ದಾರಿಯಲ್ಲಿ 50 ಕ್ಕೂ ಹೆಚ್ಚು ವಾಹನಗಳು ಪಂಕ್ಚರ್ ಆಗಿ ಕೆಲ ಕಾಲ ಸಂಚಾರದಲ್ಲಿ ಅಸ್ತವ್ಯಸ್ಥಗೊಂಡಿರುವ ಘಟನೆ ಡಿಸೆಂಬರ್ 29 ರಂದು ರಾತ್ರಿ ಸಂಭವಿಸಿದೆ.
ವಾಶಿಮ್ ಜಿಲ್ಲೆಯ ಮಾಲೆಗಾಂವ್ ಮತ್ತು ವನೋಜಾ ಟೋಲ್ ಪ್ಲಾಜಾ ನಡುವೆ ಕಬ್ಬಿಣದ ಹಲಗೆಯೊಂದು ಹೆದ್ದಾರಿಗೆ ಬಿದ್ದ ಪರಿಣಾಮ ಇದರ ಮೇಲೆ ಸಂಚರಿಸಿದ ವಾಹನಗಳು ಪಂಕ್ಚರ್ ಆಗಿವೆ ಎಂದು ಹೇಳಲಾಗಿದೆ. ಸರಣಿ ವಾಹನಗಳು ಪಂಕ್ಚರ್ ಆಗಿದ್ದರಿಂದ ವಾಹನ ಸಂಚಾರ ಅಸ್ತವ್ಯಸ್ಥಗೊಂಡಿದೆ.
ಕಾರುಗಳು, ಸರಕು ವಾಹನಗಳ ಮೇಲೆ ಹೆಚ್ಚಿನ ಪರಿಣಾಮ ಬಿದ್ದಿರುವುದರಿಂದ ಹೆದ್ದಾರಿ ಬದಿಯಲ್ಲಿ ವಾಹನಗಳ ಸಾಲುಗಳು ಕಂಡು ಬಂದಿವೆ.
ಹೆದ್ದಾರಿಯಲ್ಲಿ ಕಬ್ಬಿಣದ ಸಲಾಕೆ ತೆರವುಗೊಳಿಸದ ಕಾರಣ ಕೆಲ ಕಾಲ ವಾಹನಗಳು ತೊಂದರೆ ಅನುಭವಿಸಬೇಕಾಯಿತು, ಇನ್ನು ಈ ಕಬ್ಬಿಣದ ಸಲಾಕೆ ಬಿದ್ದಿರುವ ಕುರಿತು ತನಿಖೆ ನಡೆಸಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ, ಆಕಸ್ಮಿಕವಾಗಿ ಬಿದ್ದಿದೆಯೋ ಅಥವಾ ಯಾರಾದರೂ ದುರುದ್ದೇಶಪೂರ್ವಕವಾಗಿ ಬೀಳಿಸಿದ್ದಾರೆಯೇ ಎಂಬುದರ ಕುರಿತು ತನಿಖೆ ನಡೆಸಲಾಗುತ್ತಿದೆ.
ಒಟ್ಟಾರೆಯಾಗಿ ಐವತ್ತಕ್ಕೂ ಹೆಚ್ಚು ವಾಹನಗಳು ಕಬ್ಬಿಣದ ಸಲಾಕೆಯಿಂದ ತೊಂದರೆ ಅನುಭವಿಸಬೇಕಾಯಿತು.
ಇದನ್ನೂ ಓದಿ: Kundapura: ಪಾರ್ಕಿಂಗ್ ಸಮಸ್ಯೆ ಪರಿಹಾರಕ್ಕೆ ಗಡುವು