Advertisement

41 crore ಭಾರತೀಯರು ಬಡತನ ಮುಕ್ತ; ವಿಶ್ವಸಂಸ್ಥೆ

11:31 PM Jul 11, 2023 | Team Udayavani |

ನ್ಯೂಯಾರ್ಕ್‌: ಹದಿನೈದು ವರ್ಷಗಳಲ್ಲಿ 41.5 ಕೋಟಿ ಭಾರತೀಯರು ಕಡು ಬಡತನ­ದಿಂದ ಹೊರಬಂದಿದ್ದಾರೆ. ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾದ ಭಾರತದ ಮಹತ್ವದ ಸಾಧನೆ ಇದಾಗಿದೆ ಎಂದು ವಿಶ್ವಸಂಸ್ಥೆ ತಿಳಿಸಿದೆ.

Advertisement

ಬಹು ಆಯಾ­ಮಗಳ ಬಡತನ ಸೂಚ್ಯಂಕ(ಎಂಪಿಐ) ವರದಿಯನ್ನು ಯುನೈಟೆಡ್‌ ನೇಶನ್‌ ಡೆವಲಪೆ¾ಂಟ್‌ ಪ್ರೋಗ್ರಾಮ್‌ (ಯುಎನ್‌ಡಿಪಿ) ಮತ್ತು ಆಕ್ಸ್‌ಫ‌ರ್ಡ್‌ ಪಾವರ್ಟಿ ಆ್ಯಂಡ್‌ ಹ್ಯೂಮನ್‌ ಡೆವಲಪ್ಮೆಂಟ್ ಇನಿಶಿಯೇಟಿವ್‌ (ಒಪಿಎಚ್‌ಐ) ಬಿಡುಗಡೆ ಮಾಡಿದೆ.

ವರದಿ ಪ್ರಕಾರ, 2005-2006ರಿಂದ 2019-2021ರವರೆಗೆ ಭಾರತದ 41.5 ಕೋಟಿ ನಾಗರಿಕರು ಬಹು ಆಯಾಮಗಳ ಬಡತನದಿಂದ ಹೊರಬಂದಿದ್ದಾರೆ. ಇದೇ ವೇಳೆ 15 ವರ್ಷಗಳಲ್ಲಿ ಭಾರತ ಸೇರಿದಂತೆ 25 ದೇಶಗಳು ಕಡು ಬಡತನದ ಪ್ರಮಾಣವನ್ನು ಅರ್ಧಕ್ಕೆ ಇಳಿಸಿವೆ ಎಂದು ಹೇಳಿದೆ.

ಬಹು ಆಯಾಮಗಳ ಬಡತನ ಎಂದರೆ ಮನೆ, ವಿದ್ಯುತ್‌, ಶಿಕ್ಷಣ, ನೈರ್ಮಲ್ಯ, ಪೌಷ್ಟಿಕ ಆಹಾರ ಇತ್ಯಾದಿಗಳಿಂದ ವಂಚಿತರಾದವರು.

2005-2006ರಲ್ಲಿ ಭಾರತದಲ್ಲಿ ಸುಮಾರು 64.5 ಕೋಟಿ ಜನರು ಬಡತನದಿಂದ ಬಳಲುತ್ತಿದ್ದರು. 2015-2016ರಲ್ಲಿ ಸುಮಾರು 37 ಕೋಟಿ ನಾಗರಿಕರು ಬಡತನದಿಂದ ಹೊರಬಂದಿದ್ದು, 2019-2021ರಲ್ಲಿ ಸುಮಾರು 23 ಕೋಟಿ ಮಂದಿ ಬಡತನದಿಂದ ಹೊರಬಂದಿದ್ದಾರೆ ಎಂದು ವರದಿ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next