Advertisement

2,800ಕ್ಕೂ ಅಧಿಕ ವಾಹನ ಮುಟ್ಟುಗೋಲು!

10:14 PM Apr 20, 2020 | Sriram |

ಮಂಗಳೂರು: ಮಂಗಳೂರು ಪೊಲೀಸ್‌ ಕಮಿಷನರೆಟ್‌ ವ್ಯಾಪ್ತಿಯಲ್ಲಿ ಎಪ್ರಿಲ್‌ನಲ್ಲಿ ಲಾಕ್‌ಡೌನ್‌ ನಿಯಮ ಉಲ್ಲಂಘಿಸಿದ ಆರೋಪದ ಮೇಲೆ ಪೊಲೀಸರು ಕೇಸು ದಾಖಲಿಸಿ ಮುಟ್ಟುಗೋಲು ಹಾಕಿದ ವಾಹನಗಳ ಸಂಖ್ಯೆ 2,800 ದಾಟಿದೆ! ಹಾಗಿದ್ದರೂ ಜನರು ಅನಗತ್ಯವಾಗಿ ರಸ್ತೆಗೆ ಇಳಿ ಯುವುದನ್ನು ನಿಲ್ಲಿಸಿಲ್ಲ!

Advertisement

ಲಾಕ್‌ಡೌನ್‌ ಸಂದರ್ಭ ಅನಾವಶ್ಯಕವಾಗಿ ರಸ್ತೆಗೆ ಇಳಿಯ ಬಾರದೆಂದು ಆವಶ್ಯಕ ಸೇವೆಯ ವಾಹನಗಳಿಗೆ ಪಾಸ್‌ ವ್ಯವಸ್ಥೆಯನ್ನು ಮಾಡಲಾಗಿದೆ.

ಅನಗತ್ಯವಾಗಿ ರಸ್ತೆಯಲ್ಲಿ ಓಡಾಡುವ ವಾಹನ ಸವಾರರ ವಿರುದ್ಧ ಪ್ರಕರಣ ದಾಖಲಿಸಿ, ವಾಹನ ಮುಟ್ಟುಗೋಲು ಹಾಕುವ ಕ್ರಮವನ್ನು ಜಿಲ್ಲಾಡಳಿತಕೈಗೊಂಡಿದೆ. ಲಭ್ಯ ಅಂಕಿ ಅಂಶಗಳ ಪ್ರಕಾರ ಎಪ್ರಿಲ್‌ 2ರಿಂದ 19ರ ವರೆಗೆ ಮಂಗಳೂರು ಪೊಲೀಸ್‌ ಕಮಿಷನರೆಟ್‌ ವ್ಯಾಪ್ತಿಯಲ್ಲಿ 2,826 ವಾಹನಗಳನ್ನು ಮುಟ್ಟುಗೋಲು ಹಾಕಿದ್ದಾರೆ. ಇದರಲ್ಲಿ ಶೇ. 95ರಷ್ಟು ದ್ವಿಚಕ್ರ ವಾಹನಗಳು.

ಎ. 8ರಂದು ಗರಿಷ್ಠ ಎಂದರೆ 317 ವಾಹನಗಳನ್ನು ಮುಟ್ಟುಗೋಲು ಹಾಕಲಾಗಿತ್ತು. ಎ. 13ರಂದು ಕನಿಷ್ಠ ಎಂದರೆ 39 ವಾಹನಗಳನ್ನು ಮುಟ್ಟುಗೋಲು ಹಾಕಿದ್ದರು. ಎ. 15ರಿಂದ 2ನೇ ಹಂತದ ಲಾಕ್‌ಡೌನ್‌ ಜಾರಿಯಾದ ಬಳಿಕ ವಾಹನಗಳು ರಸ್ತೆಗೆ ಇಳಿಯುವುದು ಕಡಿಮೆ ಆಗ ಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ ಅದು ಸುಳ್ಳಾಗಿದೆ.

ಈ ಹಿಂದೆ ದಂಡ ಹಾಕಿ ಮುಟ್ಟು ಗೋಲು ಹಾಕಿದ ವಾಹನಗಳನ್ನು ಬಿಡಲಾಗುತ್ತಿದ್ದರೂ ಈಗ ಹಾಗೆ ಬಿಡುತ್ತಿಲ್ಲ. ಲಾಕ್‌ಡೌನ್‌ ಮುಗಿದ ಅನಂತರವೇ ಬಿಡುಗಡೆ ಮಾಡಲಾ ಗುತ್ತದೆ. ಅದನ್ನು ನ್ಯಾಯಾಲಯದಲ್ಲಿ ದಂಡ ಪಾವತಿಸಿ ಬಿಡುಗಡೆ ಮಾಡಿಸಿಕೊಳ್ಳಬೇಕು. ವಾಹನಕ್ಕೆ ಸಂಬಂಧಿಸಿ ಸರಿಯಾದ ದಾಖಲೆ ಪತ್ರಗಳಿಲ್ಲದಿದ್ದಲ್ಲಿ ವಾಹನಸಿಗಲಾರದು.

Advertisement

ದಾಖಲೆ ಪತ್ರಗಳಿಲ್ಲದ ವಾಹನಗಳು
ಬೆಂಗಳೂರಿನಲ್ಲಿ ಲಾಕ್‌ಡೌನ್‌ ಉಲ್ಲಂಘಿಸಿದ 10,000ಕ್ಕೂ ಮಿಕ್ಕಿದ ವಾಹನಗಳನ್ನು ಮುಟ್ಟು ಗೋಲು ಹಾಕಿದ್ದು, ಈ ಪೈಕಿ ಬಹಳಷ್ಟು ವಾಹನಗಳಿಗೆ ಸೂಕ್ತ ದಾಖಲೆಗ ಳಿಲ್ಲದಿರುವುದು ತನಿಖೆ ವೇಳೆ ಬೆಳಕಿಗೆ ಬಂದಿತ್ತು.ಮಂಗಳೂರಿನಲ್ಲಿ ದಾಖಲೆ ಪತ್ರಗಳಿಲ್ಲದ ಎಷ್ಟು ವಾಹನ ಇವೆ ಎನ್ನುವ ಬಗ್ಗೆ ಅಂಕಿ ಅಂಶ ಲಭಿಸಿಲ್ಲ.

ಸರಕಾರಕ್ಕೆ ಜನರು ಸಹಕರಿಸಿ
ಲಾಕ್‌ಡೌನ್‌ ಸಂದರ್ಭದಲ್ಲಿ ಅನಾವಶ್ಯಕವಾಗಿ ವಾಹನಗಳನ್ನು ರಸ್ತೆಗಿಳಿಸಬಾರದು, ಹತ್ತಿರದಲ್ಲಿ ಅಂಗಡಿ ಇದ್ದರೂ ವಾಹನದಲ್ಲಿ ದೂರದ ಅಂಗಡಿಗೆ ತೆರಳಿ ಖರೀದಿಸುವುದು ಕೆಲವರಿಗೆ ಖಯಾಲಿ. ಈ ಕ್ರಮ ಸರಿಯಲ್ಲ. ಲಾಕ್‌ಡೌನ್‌ ನಿಯಮ ಪಾಲಿಸಿ ಕೋವಿಡ್‌ 19 ವಿರುದ್ಧದ ಹೋರಾಟದಲ್ಲಿ ಸರಕಾರಕ್ಕೆ ಜನರು ಸಹಕರಿಸಬೇಕು.
 - ಲಕ್ಷ್ಮೀ ಗಣೇಶ್‌, ಡಿಸಿಪಿ

Advertisement

Udayavani is now on Telegram. Click here to join our channel and stay updated with the latest news.

Next