Advertisement

ಉದ್ಯೋಗ ನಷ್ಟ, ಸಾಲಬಾಧೆಗೆ 25 ಸಾವಿರ ಮಂದಿ ಸಾವು!

09:10 PM Feb 09, 2022 | Team Udayavani |

ನವದೆಹಲಿ: ದೇಶದಲ್ಲಿ 2018 ಮತ್ತು 2020ರಲ್ಲಿ ಸಾಲದ ಹೊರೆ ಅಥವಾ ಉದ್ಯೋಗ ನಷ್ಟ ಹೊಂದಿದ ಕಾರಣಕ್ಕೆ 25 ಸಾವಿರ ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Advertisement

ಹೀಗೆಂದು ಕೇಂದ್ರ ಸರ್ಕಾರ ಬುಧವಾರ ರಾಜ್ಯಸಭೆಯಲ್ಲಿ ಗೃಹ ಖಾತೆ ಸಹಾಯ ಸಚಿವ ನಿತ್ಯಾನಂದ ರಾಯ್‌ ಲಿಖಿತ ಉತ್ತರ ನೀಡಿದ್ದಾರೆ.

9,140 ಮಂದಿ ಮತ್ತು 16,091 ಮಂದಿ ಎರಡು ವರ್ಷಗಳ ಅವಧಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

ರಾಷ್ಟ್ರೀಯ ಅಪರಾಧ ದಾಖಲೆಗಳ ಮಂಡಳಿ (ಎನ್‌ಸಿಆರ್‌ಬಿ) ನೀಡಿದ ಮಾಹಿತಿ ಆಧಾರದಲ್ಲಿ ಈ ಮಾಹಿತಿ ನೀಡಲಾಗಿದೆ ಎಂದು ಸಚಿವರು ತಮ್ಮ ಉತ್ತರದಲ್ಲಿ ತಿಳಿಸಿದ್ದಾರೆ.

ಎನ್‌ಸಿಆರ್‌ಬಿ ಪ್ರಕಾರ 2020ರಲ್ಲಿ 3,548 ಮಂದಿ ನಿರುದ್ಯೋಗಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2018ರಲ್ಲಿ 2,741, 2019ರಲ್ಲಿ 1,851 ಮಂದಿ ಕೆಲಸವಿಲ್ಲ ಎಂಬ ಕಾರಣಕ್ಕಾಗಿ ಸಾವಿಗೆ ಶರಣಾಗಿದ್ದಾರೆ.

Advertisement

ಇದನ್ನೂ ಓದಿ:ನಾಳೆ ಯುಪಿ ಮೊದಲ ಹಂತದ ವೋಟಿಂಗ್ : 9 ಸಚಿವರ ಭವಿಷ್ಯ ನಿರ್ಧಾರ

ಸಾಲದ ಬಾಧೆಯಿಂದಾಗಿ ಸಾವಿಗೆ ಶರಣಾದವರ ಬಗ್ಗೆ ಮಾಹಿತಿ ನೀಡಿದ ಕೇಂದ್ರ ಸಚಿವರು 2018ರಲ್ಲಿ 4,970, 2019ರಲ್ಲಿ 5,908, 2020ರಲ್ಲಿ 600ರಷ್ಟು ಕಡಿಮೆಯಾಗಿ, 5,213 ಆಗಿತ್ತು ಎಂದು ಹೇಳಿದ್ದಾರೆ ನಿತ್ಯಾನಂದ ರಾಯ್‌.

ನೊಂದಿರುವವರಿಗೆ ಸಾಂತ್ವನ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ವತಿಯಿಂದ ಜಿಲ್ಲಾ ಕೇಂದ್ರಗಳಲ್ಲಿ ರಾಷ್ಟ್ರೀಯ ಮಾನಸಿಕ ಆರೋಗ್ಯ ಯೋಜನೆಯ ಅನ್ವಯ ಜಿಲ್ಲಾ ಮಾನಸಿಕ ಆರೋಗ್ಯ ಯೋಜನೆ ಜಾರಿ ಮಾಡಲಾಗುತ್ತಿದೆ. 692 ಜಿಲ್ಲೆಗಳಲ್ಲಿ ಅದನ್ನು ಜಾರಿಗೊಳಿಸಲಾಗುತ್ತಿದೆ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next