Advertisement

ದೇಶದ ನವೋದ್ಯಮಗಳ 24,250 ಮಂದಿ ವಜಾ

09:39 PM Apr 10, 2023 | Team Udayavani |

ನವದೆಹಲಿ: ಜಾಗತಿಕ ತಂತ್ರಜ್ಞಾನ ಸಂಸ್ಥೆಗಳಲ್ಲಿನ ಉದ್ಯೋಗ ಕಡಿತ ಒಂದೆಡೆಯಾದರೆ ಮತ್ತೊಂದೆಡೆ ಜಾಗತಿಕ ಆರ್ಥಿಕ ಹಿಂಜರಿತ, ಆರ್ಥಿಕ ಅನಿಶ್ಚಿತತೆಯಿಂದ ಭಾರತೀಯ ನವೋದ್ಯಮಗಳ ಉದ್ಯೋಗ ಕಡಿತ ಸರಣಿ ಮುಂದುವರಿದಿದೆ. ಅದರ ಭಾಗವಾಗಿ ಈವರೆಗೆ 84 ದೇಶಿಯ ನವೋದ್ಯಮಗಳಲ್ಲಿ ದುಡಿಯುತ್ತಿದ್ದ 24,250 ಮಂದಿ ಕೆಲಸ ಕಳೆದುಕೊಂಡಿದ್ದಾರೆ.

Advertisement

ನವೋದ್ಯಮಗಳ ಮಾಹಿತಿ ಸಂಗ್ರಹ ಪೋರ್ಟಲ್‌ ಐನ್‌ಸಿ42 ಈ ಕುರಿತಂತೆ ದತ್ತಾಂಶ ಬಿಡುಗಡೆಗೊಳಿಸಿದೆ. ಆ ಪ್ರಕಾರ, ದೇಶದಲ್ಲಿ ನವೋದ್ಯಮಗಳಿಂದ ಉದ್ಯೋಗಿಗಳನ್ನು ಕೆಲಸಗಳಿಂದ ವಜಾಗೊಳಿಸುತ್ತಿರುವ ಪಟ್ಟಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಎನ್ನಲಾಗಿದೆ.

ಈ ವರೆಗೆ ಉದ್ಯೋಗ ಕಡಿತಗೊಳಿಸಿರುವ ನವೋದ್ಯಮಗಳ ಪೈಕಿ ಡಿಜಿಟಲ್‌ ಹೆಲ್ತ್‌ ಕೇರ್‌ ಸಂಸ್ಥೆ ಪ್ರ್ಯಾಕ್ಟೋ 41ಎಂಜಿನಿಯರ್‌ಗಳನ್ನು ವಜಾಗೊಳಿಸಿದರೆ, ಡಂಜೋ 300 ಉದ್ಯೋಗಿಗಳನ್ನು, ಜೆಸ್ಟ್‌ ಮನಿ ಸಂಸ್ಥೆ ಶೇ.25 ಹಾಗೂ ಫ್ಯಾನ್‌ಕ್ಲಾಶ್‌ ಶೇ.75 ಉದ್ಯೋಗಿಗಳನ್ನು ತೆಗೆದುಹಾಕಿದೆ ಎಂದು ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next