ಹೊಸದಿಲ್ಲಿ: ಪಾಕಿಸ್ಥಾನದಿಂದ ವೀಸಾ ಪಡೆದಿದ್ದ ಜಮ್ಮು ಕಾಶ್ಮೀರದ 200ಕ್ಕೂ ಅಧಿಕ ಯುವಕರು ಕಾಣೆಯಾಗಿದ್ದಾರೆ.
2017ರ ಜನವರಿಯಿಂದ ಜಮ್ಮು ಕಾಶ್ಮೀರದ 399 ಯುವಕರಿಗೆ ಪಾಕಿಸ್ಥಾನ ಹೈ ಕಮಿಷನ್‌ನಿಂದ ಪಾಕ್ ವೀಸಾ ನೀಡಲಾಗಿತ್ತು.
ಈ ಪೈಕಿ 218 ಮಂದಿ ಬಗ್ಗೆ ಇದುವರೆಗೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ಈ ಯುವಕರನ್ನು ಪಾಕಿಸ್ಥಾನವು ಉಗ್ರ ಸಂಘಟನೆಗೆ ಸೇರಿಸಿಕೊಂಡು ಭಯೋತ್ಪಾದನೆ ಕೃತ್ಯಗಳಿಗೆ ತರಬೇತಿ ನೀಡುತ್ತಿರಬಹುದು ಎಂದು ಗುಪ್ತಚರ ಪಡೆಗಳು ಶಂಕಿಸಿವೆ.
ಪಾಕಿಸ್ಥಾನವು ಜಮ್ಮು ಕಾಶ್ಮೀರದ ಯುವಕರನ್ನು ಸೆಳೆದುಕೊಂಡು ಅವರಿಗೆ ಉಗ್ರ ತರಬೇತಿ, ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಿದೆ.
ಆ ಯುವಕರನ್ನು ಬಳಸಿಕೊಂಡು ಪುಲ್ವಾಮಾ ಮಾದರಿಯಲ್ಲಿ ಭಯೋತ್ಪಾದಕ ಕೃತ್ಯಗಳನ್ನು ನಡೆಸುತ್ತಿದೆ ಎಂದು ಗುಪ್ತಚರ ಪಡೆ ಮೂಲಗಳು ತಿಳಿಸಿವೆ.