Advertisement
ಮಕ್ಕಳ ಸಂಖ್ಯೆ ಕಡಿಮೆಯಾಗಿರುವುದರಿಂದ ದತ್ತು ಪಡೆಯಲು ಲಭ್ಯತೆ ಕಡಿಮೆಯಾಗಿದೆ. ಹೀಗಾಗಿ 16,000 ಕ್ಕೂ ಹೆಚ್ಚು ನಿರೀಕ್ಷಿತ ಪೋಷಕರು ದತ್ತು ಪಡೆಯಲು ಮೂರು ವರ್ಷಗಳಿಂದ ಕಾಯುತ್ತಿದ್ದಾರೆ.
Related Articles
Advertisement
ಇದನ್ನೂ ಓದಿ:ಇಬ್ಬರು ಶಸ್ತ್ರ ಸಜ್ಜಿತ ಲಷ್ಕರ್ ಉಗ್ರರನ್ನು ಹಿಡಿದು ಕೊಟ್ಟ ಕಾಶ್ಮೀರದ ಗ್ರಾಮಸ್ಥರು
ಅಧಿಕೃತ ಮಾಹಿತಿಯ ಪ್ರಕಾರ, 2,971 ಮಕ್ಕಳು ಸ್ಪೆಷಲ್ ಅಡಾಪ್ಷನ್ ಏಜೆನ್ಸಿಗಳಲ್ಲಿ ವಾಸಿಸುತ್ತಿದ್ದಾರೆ, ಅವರು “ದತ್ತು ಸ್ವೀಕಾರಾರ್ಹವಲ್ಲ” ಎಂಬ ವರ್ಗದ ಅಡಿಯಲ್ಲಿ ಬರುತ್ತಾರೆ ಆದರೆ ವಿಶೇಷ ದತ್ತು ಕೇಂದ್ರದಲ್ಲಿ ಒಟ್ಟು ಸುಮಾರು 7,000 ಮಕ್ಕಳಿದ್ದಾರೆ.
“ದತ್ತು ಸ್ವೀಕಾರ ಮಾಡಲಾಗದ ವರ್ಗದ ಅಡಿಯಲ್ಲಿ ಬರುವ ಮಕ್ಕಳು ದತ್ತು ತೆಗೆದುಕೊಳ್ಳಲು ಜೈವಿಕ ಪೋಷಕರು ಒಪ್ಪಿಗೆ ನೀಡದ ಮಕ್ಕಳು ಆದರೆ ಪೋಷಕರು ತಮ್ಮ ಮಗುವನ್ನು ಬೆಂಬಲಿಸಲು ಮತ್ತು ಆರೈಕೆ ಮಾಡಲು ಸಾಧ್ಯವಾಗದ ಕಾರಣ ಅವರನ್ನು ಚೈಲ್ಡ್ ಕೇರ್ ಹೋಮ್ಸ್‌ನಲ್ಲಿ ಇರಿಸಲಾಗುತ್ತದೆ. ಒಂದು ಮಗು ಐದು ವರ್ಷಕ್ಕಿಂತ ಮೇಲ್ಪಟ್ಟಿದ್ದರೆ, ಅವರನ್ನು ದತ್ತು ಪಡೆಯಲು ಮೊದಲು ಅವರ ಒಪ್ಪಿಗೆ ಕೂಡ ಅಗತ್ಯವಿದೆ, ”ಎಂದು ಇನ್ನೊಬ್ಬ ಅಧಿಕಾರಿ ವಿವರಿಸಿದ್ದಾರೆ.
ಮೊದಲು, ದತ್ತು ಪ್ರಕ್ರಿಯೆಗಳು ನ್ಯಾಯಾಲಯಗಳ ವ್ಯಾಪ್ತಿಯಲ್ಲಿತ್ತು. ಕಳೆದ ಸಂಸತ್ತಿನ ಅಧಿವೇಶನದಲ್ಲಿ, ಸಂಸದೀಯ ಸಮಿತಿಯು ದೇಶದಲ್ಲಿ ದತ್ತು ಪ್ರಕ್ರಿಯೆಯನ್ನು ಸರಳಗೊಳಿಸುವಂತೆ ಶಿಫಾರಸು ಮಾಡಿದೆ ಮತ್ತು ದತ್ತು ಪ್ರಕ್ರಿಯೆಗೆ ಮಾರ್ಗದರ್ಶನ ನೀಡುವ ವಿವಿಧ ನಿಯಮಗಳ ಬಗ್ಗೆ ನಿಕಟವಾದ ಮರುಪರಿಶೀಲನೆಯ ಅಗತ್ಯವನ್ನು ಒತ್ತಿಹೇಳಿತ್ತು.
ಅಲ್ಲದೆ, ಕಳೆದ ವರ್ಷ ಸರ್ಕಾರವು ಜುವೆನೈಲ್ ಜಸ್ಟೀಸ್ ಆಕ್ಟ್ ಅನ್ನು ತಿದ್ದುಪಡಿ ಮಾಡಿತ್ತು, ಅದರ ಅಡಿಯಲ್ಲಿ ದೇಶದಲ್ಲಿ ದತ್ತು ಪ್ರಕ್ರಿಯೆಗಳನ್ನು ವೇಗಗೊಳಿಸಲು ಜಿಲ್ಲಾಧಿಕಾರಿಗಳಿಗೆ ಹೆಚ್ಚಿನ ಅಧಿಕಾರ ಮತ್ತು ಜವಾಬ್ದಾರಿಗಳನ್ನು ನೀಡಲಾಗಿತ್ತು.
ದತ್ತು ಪ್ರಕ್ರಿಯೆಯನ್ನು ಸರಳಗೊಳಿಸುವುದರ ಬದಲು ಹೆಚ್ಚು ಕಾನೂನಾತ್ಮಕ ಬದಲಾವಣೆಗಳು ಅಗತ್ಯವಿದೆ ಎಂದು ಮಕ್ಕಳ ಹಕ್ಕಗಳ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.