Advertisement

11.44 ಲಕ್ಷ ನಕಲಿ, ಡುಪ್ಲಿಕೇಟ್‌ ಪಾನ್‌ ಕಾರ್ಡ್‌ ಪತ್ತೆ: ಅನೂರ್ಜಿತ

07:39 PM Aug 02, 2017 | |

ಹೊಸದಿಲ್ಲಿ : ಒಬ್ಬ ವ್ಯಕ್ತಿ ಒಂದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಅಕ್ರಮವಾಗಿ ಪಡೆದುಕೊಂಡಿರುವ  ಸುಮಾರು 11.44 ಲಕ್ಷ ಪಾನ್‌ ಕಾರ್ಡ್‌ಗಳನ್ನು  ನಿಷ್ಕ್ರಿಯಗೊಳಿಸಲಾಗಿದೆ ಇಲ್ಲವೇ ರದ್ದು ಮಾಡಲಾಗಿದೆ.

Advertisement

ಪಾನ್‌ ಕಾರ್ಡ್‌ ಗೆ ಆಧಾರ್‌ ಕಾರ್ಡ್‌ ನಂಬರ್‌ ಜೋಡಿಸುವುದನ್ನು ಸರಕಾರ ಕಡ್ಡಾಯ ಮಾಡಿದ ಬಳಿಕದಲ್ಲಿ  ಒಬ್ಬ ವ್ಯಕ್ತಿ ಒಂದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಅಕ್ರಮವಾಗಿ ಹೊಂದಿರುವ 11 ಲಕ್ಷಕ್ಕೂ ಮೀರಿದ ಪಾನ್‌ ಕಾರ್ಡ್‌ಗಳು ಈ ತನಕ ಪತ್ತೆಯಾಗಿವೆ.

ಈ ವಿಷಯವನ್ನು ಇಂದು ಬುಧವಾರ ಕೇಂದ್ರ ಸಹಾಯಕ ಹಣಕಾಸುಸಚಿವ ಸಂತೋಷ್‌ ಕುಮಾರ್‌ ಗಂಗ್ವಾರ್‌ ಅವರು ರಾಜ್ಯಸಭೆಗೆ ನೀಡಿದ ಲಿಖೀತ ಉತ್ತರದಲ್ಲಿ ತಿಳಿಸಿದ್ದಾರೆ. 

2017ರ ಜುಲೈ 27ರ ವರೆಗೆ 11,44,211 ಅಕ್ರಮ ಪಾನ್‌ ಕಾರ್ಡ್‌ಗಳು ಪತ್ತೆಯಾಗಿದ್ದು ಅವುಗಳನ್ನು ನಿಷ್ಕ್ರಿಯ ಗೊಳಿಸಲಾಗಿದೆ ಅಥವಾ ರದ್ದು ಮಾಡಲಾಗಿದೆ ಎಂದು ಸಚಿವರು ಹೇಳಿದರು. 

ಒಬ್ಬ ವ್ಯಕ್ತಿ ಒಂದೇ ಪಾನ್‌ ಕಾರ್ಡ್‌ ಹೊಂದಿರಬೇಕಾಗಿದ್ದು ಅದರ ಅಡಿ ಆತನು ತನ್ನ ಎಲ್ಲ ಹಣಕಾಸು ವ್ಯವಹಾರಗಳಿಗೆ ಸಂಬಂಧಿಸಿದ ಮಾಹಿತಿಗಳನ್ನು ನಮೂದಿಸಿ ವರ್ಷಂಪ್ರತಿ ಆದಾಯ ತೆರಿಗೆ ರಿಟರ್ನ್ ಸಲ್ಲಿಸಬೇಕಾಗುತ್ತದೆ. ಒಬ್ಬನೇ ವ್ಯಕ್ತಿ ಒಂದಕ್ಕಿಂತ ಹೆಚ್ಚು ಪಾನ್‌ ಕಾರ್ಡ್‌ ಹೊಂದುವುದು ಕಾನೂನು ಪ್ರಕಾರ ದುರುದ್ದೇಶದ ಅಪರಾಧವಾಗುತ್ತದೆ. 

Advertisement

“ಜುಲೈ 27ರ ವರೆಗೆ 1,566 ನಕಲಿ ಪಾನ್‌ ಕಾರ್ಡ್‌ಗಳನ್ನು ಪತ್ತೆ ಹಚ್ಚಲಾಗಿದೆ; ಇಂತಹ ಕಾರ್ಡುಗಳನ್ನು ಅಸ್ತಿತ್ವದಲ್ಲೇ ಇರದ ವ್ಯಕ್ತಿಗಳ ಹೆಸರಲ್ಲಿ ಅಥವಾ ಸುಳ್ಳು ಗುರುತಿನ ವ್ಯಕ್ತಿಗಳ ಹೆಸರಿನಲ್ಲಿ ಮೋಸದಿಂದ ಪಡೆಯಲಾಗಿತ್ತು ಎಂದು ಸಚಿವರು ಹೇಳಿದರು.  

2016ರ ನವೆಂಬರ್‌ನಿಂದ 2017ರ ಮಾರ್ಚ್‌ ವರೆಗಿನ ಅವಧಿಯಲ್ಲಿ ಆದಾಯ ತೆರಿಗೆ ಇಲಾಖೆ 900 ವ್ಯಕ್ತಿ-ಸಮೂಹಗಳನ್ನು  ಶೋಧಿಸಿದ್ದು ಆ ಪ್ರಕಾರ 900 ಕೋಟಿ ರೂ. ವಶಪಡಿಸಿಕೊಳ್ಳಲಾಗಿದೆ ಮತ್ತು ಬಹಿರಂಗಪಡಿಸದ 7,961 ಕೋಟಿ ರೂ. ಆದಾಯವನ್ನು ಘೋಷಿಸಿಕೊಳ್ಳುವಂತೆ ಮಾಡಲಾಗಿದೆ ಎಂದು ಸಚಿವ ಗಂಗ್ವಾರ್‌ ಹೇಳಿದರು. 

ಇದೇ ರೀತಿ  8,239 ಸಮೀಕ್ಷೆಗಳನ್ನು ನಡೆಸಲಾಗಿ 6,745 ಕೋಟಿ ರೂ.ಗಳ ಅಘೋಷಿತ ಆದಾಯವನ್ನು ಪತ್ತೆ ಹಚ್ಚಲಾಗಿದೆ ಎಂದವರು ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next