Advertisement

Israel-Hamas Conflict: ಇಸ್ರೇಲ್-ಹಮಾಸ್ ಸಂಘರ್ಷದಲ್ಲಿ ಮೃತರ ಸಂಖ್ಯೆ 1,100 ಕ್ಕೆ ಏರಿಕೆ

08:41 AM Oct 09, 2023 | Team Udayavani |

ಗಾಜಾ ಪಟ್ಟಿ: ಇಸ್ರೇಲ್ ಹಾಗೂ ಉಗ್ರಗಾಮಿ ಗುಂಪು ಹಮಾಸ್ ನಡುವಿನ ಸಂಘರ್ಷ ಮುಂದುವರೆದಿದ್ದು, ಎರಡು ಕಡೆಗಳ ಸಂಘರ್ಷದಲ್ಲಿ ಮೃತರ ಸಂಖ್ಯೆ 1,100 ಕ್ಕೂ ಮೇಲ್ಪಟ್ಟಿದೆ ಎಂದು ವರದಿ ತಿಳಿಸಿದೆ.

Advertisement

ಗಾಜಾ ಪಟ್ಟಿಯ ಬಳಿ ಇಸ್ರೇಲ್ ಮೇಲೆ ಹಮಾಸ್ ಉಗ್ರರು ನಡೆಸಿದ ಬಳಿಕ ಇಸ್ರೇಲ್ ಪ್ಯಾಲೇಸ್ಟಿನಿಯನ್ ಉಗ್ರಗಾಮಿ ಗುಂಪು ಹಮಾಸ್ ವಿರುದ್ಧ ಯುದ್ಧ ಘೋಷಿಸಿತು. ಮೂರು ದಿನಗಳ ಸಂಘರ್ಷವು ಈಗಾಗಲೇ ಎರಡೂ ಕಡೆಗಳಲ್ಲಿ 1,100 ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿದೆ ಎಂದು ಹೇಳಲಾಗಿದ್ದು, ಇಸ್ರೇಲ್‌ನಲ್ಲಿ 44 ಸೈನಿಕರು ಸೇರಿದಂತೆ 700 ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ ಎಂದು ವರದಿ ತಿಳಿಸಿದೆ.

ದಾಳಿಯ ಕುರಿತು ಪ್ರತಿಕ್ರಿಯೆ ನೀಡಿದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹಮಾಸ್‌ ದಾಳಿಯಿಂದ ಯುದ್ಧ ಆರಂಭವಾಗಿದ್ದು ಇದಕ್ಕೆ ನಮ್ಮ ಸೇನೆ ಪ್ರತಿಕಾರ ತೀರಿಸಿಕೊಳ್ಳಲಿದೆ ಎಂದು ಹೇಳಿದ ಅವರು ಉಗ್ರಗಾಮಿ ಗುಂಪಿನ ಅಡಗುತಾಣಗಳನ್ನು ಸಂಪೂರ್ಣ ನಾಶಪಡಿಸುವುದಾಗಿ ಪ್ರತಿಜ್ಞೆ ಮಾಡಿದರು.

ಉಗ್ರರ ದಾಳಿಯಲ್ಲಿ ಹಲವು ಸೈನಿಕರು ಮತ್ತು ಪೊಲೀಸರು ಸೇರಿದಂತೆ ಹೆಚ್ಚಿನ ಜನ ಮೃತಪಟ್ಟಿದ್ದಾರೆ ಮತ್ತು 2,048ಕ್ಕೂ ಹೆಚ್ಚು ಜನ ಗಾಯಗೊಂಡಿದ್ದು, ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಇಸ್ರೇಲ್ ಮೂಲದ ಮಾಧ್ಯಮ ವರದಿ ಮಾಡಿದೆ.

ಸಂಗೀತೋತ್ಸವ ಕಾರ್ಯಕ್ರಮದ ಮೇಲೆ ಹಮಾಸ್ ದಾಳಿ
ಇಸ್ರೇಲ್ ನಲ್ಲಿ ನಡೆಯುತಿದ್ದ ಸಂಗೀತೋತ್ಸವ ಕಾರ್ಯಕ್ರಮದ ಮೇಲೆ ಹಮಾಸ್ ಉಗ್ರರು ದಾಳಿ ನಡೆಸಿದ ಪರಿಣಾಮ ಸುಮಾರು 260 ಮಂದಿ ಮೃತಪಟ್ಟಿರುವುದಾಗಿ ಇಸ್ರೇಲಿ ರಕ್ಷಣಾ ಸೇವೆ ಝಕಾ ವರದಿ ಮಾಡಿದೆ.

Advertisement

ಗಾಜಾ ಬಳಿಯ ಕಿಬ್ಬುಟ್ಜ್ ರೀಮ್ ಬಳಿ ನೇಚರ್ ಪಾರ್ಟಿ ಆಯೋಜಿಸಲಾಗಿತ್ತು ಇದನ್ನು ಗುರುಯಾಗಿರಿಸಿಕೊಂಡು ದಾಳಿ ನಡೆಸಿದ ಹಮಾಸ್ ಉಗ್ರರು ರಾಕೆಟ್ ದಾಳಿ ನಡೆಸಿದ್ದಾರೆ ಘಟನೆಯಿಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಜನರು ದಿಕ್ಕುಪಾಲಾಗಿ ಜೀವ ಉಳಿಸಿಕೊಳ್ಳಲು ಓಡಿದ್ದಾರೆ ಈ ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದ ಜನರ ಮೇಲೆ ಹಮಾಸ್ ಬಂದೂಕುಧಾರಿಗಳು ಗುಂಡಿನ ಮರೆಗಳೆದರು. ಈ ದಾಳಿಯಲ್ಲಿ ಸುಮಾರು 260ಜನ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ.

ಇದನ್ನೂ ಓದಿ: Mangaluru ತಣ್ಣೀರುಬಾವಿಯಲ್ಲಿ ಕಡಲಜೀವಿಗಳಿಗೊಂದು ಸಂರಕ್ಷಣ ಕೇಂದ್ರ

Advertisement

Udayavani is now on Telegram. Click here to join our channel and stay updated with the latest news.

Next