ಬೆಂಗಳೂರು: ಭಾರತದ ಸ್ವದೇಶಿ ಇ-ಕಾಮರ್ಸ್ ಮಾರ್ಕೆಟ್ ಪ್ಲೇಸ್ ಆಗಿರುವ ಫ್ಲಿಪ್ ಕಾರ್ಟ್ ತನ್ನ ಬಹುನಿರೀಕ್ಷಿತ ದಿ ಬಿಗ್ ಬಿಲಿಯನ್ ಡೇಸ್ 10 ನೇ ಆವೃತ್ತಿಗೆ ಸಜ್ಜಾಗಿದೆ.
ಹಬ್ಬದ ಋತು ಆರಂಭವಾಗಿದ್ದು, ಈ ಸಂದರ್ಭದಲ್ಲಿ ಗ್ರಾಹಕರ ಬೇಡಿಕೆಗಳನ್ನು ತ್ವರಿತವಾಗಿ ಪೂರೈಸುವ ನಿಟ್ಟಿನಲ್ಲಿ ಫ್ಲಿಪ್ ಕಾರ್ಟ್ ದೇಶಾದ್ಯಂತ ಪೂರೈಕೆ ಜಾಲದಲ್ಲಿ ಲಕ್ಷಾಂತರ ಉದ್ಯೋಗಗಳನ್ನು ಸೃಷ್ಟಿ ಮಾಡುತ್ತಿದೆ.
ಈ ಹಬ್ಬದ ಋತುವಿಗೆ ಮುಂಚಿತವಾಗಿ ಫ್ಲಿಪ್ ಕಾರ್ಟ್ ತನ್ನ ಪೂರೈಕೆ ಜಾಲವನ್ನು ನಿರ್ವಹಣೆ ಮಾಡುವ ಕೇಂದ್ರಗಳು, ವಿಂಗಡಣೆ ಕೇಂದ್ರಗಳು ಮತ್ತು ವಿತರಣಾ ಕೇಂದ್ರಗಳು ಸೇರಿದಂತೆ ವಿವಿಧೆಡೆ 1 ಲಕ್ಷ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಿದೆ. ಈ ಮೂಲಕ ಸ್ಥಳೀಯ ಕಿರಾಣ ವಿತರಣಾ ಪಾಲುದಾರರು, ದಿವ್ಯಾಂಗ ವ್ಯಕ್ತಿಗಳು, ಮಹಿಳೆಯರು ಮತ್ತು ಇತರರಿಗೆ ಉದ್ಯೋಗಾವಕಾಶಗಳು ದೊರೆಯಲಿದೆ.
ಫ್ಲಿಪ್ ಕಾರ್ಟ್ ಪೂರೈಕೆ ಜಾಲಕ್ಕೆ ಸೇರಿಕೊಳ್ಳುವ ಹೊಸ ಉದ್ಯೋಗಿಗಳಿಗೆ ತನ್ನ ತರಬೇತಿ ಕಾರ್ಯಕ್ರಮಗಳ ಮೂಲಕ ವಿಶೇಷವಾದ ಕೌಶಲ್ಯಗಳನ್ನು ಕಲಿಸಿಕೊಡಲಿದೆ. ಇದು ಸ್ಥಳೀಯ ಉದ್ಯೋಗ ಮತ್ತು ಆರ್ಥಿಕತೆಯನ್ನು ಗಣನೀಯ ಪ್ರಮಾಣದಲ್ಲಿ ಹೆಚ್ಚಿಸಲು ನೆರವಾಗುತ್ತದೆ.
ಕಿರಾಣ ವಿತರಣಾ ಪಾಲುದಾರರು, ಮಾರಾಟಗಾರರು, ಎಂಎಸ್ಎಂಇಗಳು, ಕುಶಲಕರ್ಮಿಗಳು/ನೇಕಾರರು, ವೇರ್ ಹೌಸ್ ಗಳ ಸಿಬ್ಬಂದಿ ಮತ್ತು ಇನ್ನೂ ಅನೇಕರು ಇರುವ ಇಡೀ ಜಾಲದ ಹೆಚ್ಚುತ್ತಿರುವ ಬೆಳವಣಿಗೆಗೆ ಹಬ್ಬದ ಋತು ಮತ್ತು ದಿ ಬಿಗ್ ಬಿಲಿಯನ್ ಡೇಸ್ ಪ್ರಮುಖ ಸ್ಥಾನದಲ್ಲಿ ಕಾರ್ಯನಿರ್ವಹಿಸುತ್ತದೆ.
ವರ್ಷಕ್ಕೊಮ್ಮೆ ಸೆಪ್ಟೆಂಬರ್ ಅಂತ್ಯಕ್ಕೆ ಅಥವಾ ಅಕ್ಟೋಬರ್ ಮೊದಲ ವಾರ ನಡೆಯಲಿರುವ ಫ್ಲಿಪ್ ಕಾರ್ಟ್ ಬಿಗ್ ಬಿಲಿಯನ್ ಡೇ ಸೇಲ್ ನಲ್ಲಿ ಗ್ರಾಹಕರಿಗೆ ಅತ್ಯಂತ ಕಡಿಮೆ ದರದಲ್ಲಿ ಗ್ಯಾಜೆಟ್ ಗಳು, ಗೃಹೋಪಯೋಗಿ ವಸ್ತುಗಳು, ಉಡುಪುಗಳು ಸೇರಿ ಅನೇಕ ಬಗೆಯ ವಸ್ತುಗಳು ದೊರಕುತ್ತವೆ. ಬಿಗ್ ಬಿಲಿಯನ್ ಡೇ ಯಲ್ಲಿ ವರ್ಷದ ಯಾವುದೇ ಹಬ್ಬದ ಸೇಲ್ ಗಿಂತ ದೊಡ್ಡ ಮಟ್ಟದ ರಿಯಾಯಿತಿಗಳು ಲಭ್ಯವಾಗುತ್ತವೆ.