Advertisement

ಮರಣಮೃದಂಗ: ದೆಹಲಿಯಲ್ಲಿ ಒಂದು ಸಾವಿರಕ್ಕೂ ಅಧಿಕ ಕೋವಿಡ್ ಸಾವಿನ ಅಂಕಿಅಂಶ ಮುಚ್ಚಿಡಲಾಗಿದೆ!

02:44 PM Apr 27, 2021 | Team Udayavani |

ನವದೆಹಲಿ: ಭಾರತದಲ್ಲಿ ಕೋವಿಡ್ ಎರಡನೇ ಅಲೆ ತೀವ್ರ ಆತಂಕ, ಜೀವಹಾನಿಗೆ ಎಡೆಮಾಡಿಕೊಟ್ಟಿರುವ ನಡುವೆ ರಾಷ್ಟ್ರರಾಜಧಾನಿಯಲ್ಲಿ ಕೋವಿಡ್ ಸೋಂಕಿನಿಂದ ಸಾವನ್ನಪ್ಪಿರುವ ರಾಶಿ, ರಾಶಿ ಶವಗಳ ದಹನ ಕ್ರಿಯೆ ಮಾಡುತ್ತಿರುವ ಫೋಟೊ ವಿದೇಶಿ ಪತ್ರಿಕೆಗಳ ಮುಖಪುಟದಲ್ಲಿ ಪ್ರಕಟವಾಗಿದೆ. ಆದರೆ ದೆಹಲಿಯಲ್ಲಿ ಸಾವಿರಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದು, ದೆಹಲಿ ಸರ್ಕಾರ ನೈಜ ಅಂಕಿಅಂಶವನ್ನು ಮುಚ್ಚಿಟ್ಟಿರುವುದು ಬೆಳಕಿಗೆ ಬಂದಿದೆ.

Advertisement

ಇದನ್ನೂ ಓದಿ:ಲೈಂಗಿಕ ದೌರ್ಜನ್ಯದ ಆರೋಪಿ ತರುಣ್‌ ವಿರುದ್ಧದ ವಿಚಾರಣೆ ಮುಕ್ತಾಯ : ಮೇ.12ಕ್ಕೆ ತೀರ್ಪು

ದೆಹಲಿ ಮಹಾನಗರ ಪಾಲಿಕೆಯ ದಾಖಲೆಯಲ್ಲಿ ಕೋವಿಡ್ ಸಾವಿನ ನೈಜ ಅಂಕಿಅಂಶ ಪತ್ತೆಯಾಗಿರುವುದಾಗಿ ಎನ್ ಡಿಟಿವಿ ವರದಿ ತಿಳಿಸಿದ್ದು, ಏಳು ಚಿತಾಗಾರಗಳಿಗೆ ಭೇಟಿ ನೀಡಿದ ವೇಳೆ 1,150 ಶವಗಳು ಪತ್ತೆಯಾಗಿರುವುದಾಗಿ ತಿಳಿಸಿದೆ. ಆದರೆ ಅಧಿಕಾರಿಗಳು ಇದನ್ನು ಕೋವಿಡ್ ಸಾವಿನ ಪಟ್ಟಿಯಲ್ಲಿ ಸೇರಿಸಿಲ್ಲ ಎಂದು ಆರೋಪಿಸಿದೆ.

ದೆಹಲಿ ಮುನ್ಸಿಪಲ್ ಕಾರ್ಪೋರೇಷನ್ ನಿಂದ ಸಂಗ್ರಹಿಸಿರುವ ಮಾಹಿತಿ ಪ್ರಕಾರ, ಏಪ್ರಿಲ್ 2 ಮತ್ತು ಏಪ್ರಿಲ್ 18ರ ನಡುವೆ 26 ಚಿತಾಗಾರಾಗಳಲ್ಲಿ 3,096 ಶವಸಂಸ್ಕಾರ ನಡೆಸಲಾಗಿದೆ ಎಂದು ತಿಳಿಸಿದೆ. ಆದರೆ ದೆಹಲಿ ಸರ್ಕಾರ ಬಿಡುಗಡೆಗೊಳಿಸಿರುವ ಒಟ್ಟು ಅಂಕಿಅಂಶದ ಪ್ರಕಾರ 1,938 ಸಾವು ಸಂಭವಿಸಿದೆ ಎಂದು ಹೇಳಿತ್ತು. ಅಂದರೆ 1,158 ಮಂದಿ ಸಾವಿನ ಲೆಕ್ಕ ಮುಚ್ಚಿಡಲಾಗಿದೆ ಎಂದು ವರದಿ ದೂರಿದೆ.

ಆಸ್ಪತ್ರೆಗಳಿಂದ ತರಲಾದ ಶವಗಳನ್ನು ಮಾತ್ರ ಎಂಸಿಡಿ ಕೋವಿಡ್ ಸಾವು ಎಂದು ಪರಿಗಣಿಸುತ್ತದೆ. ಆದರೆ ಅಧಿಕೃತ ಸಾವಿನ ಪ್ರಮಾಣದ ಅಂಕಿಅಂಶ ಹೊಂದಾಣಿಕೆಯಾಗದ ಕಾರಣ ಇನ್ನೂ ತಿಳಿದು ಬಂದಿಲ್ಲ ಎಂದು ವರದಿ ಹೇಳಿದೆ.

Advertisement

ದೆಹಲಿ ಹೊರವಲಯದ ಘಾಜಿಪುರ್ ಶವಾಗಾರದಲ್ಲಿ ಕೋವಿಡ್ ಮೃತ ಕುಟುಂಬಸ್ಥರ ಸಂತ್ರಸ್ತರು ದಾಖಲೆಯನ್ನು ಭರ್ತಿ ಮಾಡಲು ಸಾಲುಗಟ್ಟಿ ನಿಂತಿರುವುದು ಕಂಡು ಬಂದಿದ್ದು, ಕೋವಿಡ್ ಸೋಂಕಿನಿಂದ ಮನೆಯಲ್ಲಿ ಸಾವನ್ನಪ್ಪಿರುವವರ ಅಂಕಿಅಂಶವನ್ನು ಕೋವಿಡ್ ಶವಸಂಸ್ಕಾರದಲ್ಲಿ ದಾಖಲಿಸಿಕೊಂಡಿಲ್ಲ ಎಂದು ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next