Advertisement

Pub ನಲ್ಲಿ ಅಶ್ಲೀ*ಲ ನೃತ್ಯ; 42 ಮಹಿಳೆಯರು ಸೇರಿದಂತೆ 100 ಕ್ಕೂ ಹೆಚ್ಚು ಜನರ ಬಂಧನ

09:06 PM Oct 19, 2024 | Team Udayavani |

ಹೈದರಾಬಾದ್: ನಗರದ ಐಷಾರಾಮಿ ಬಂಜಾರಾ ಹಿಲ್ಸ್ ಪ್ರದೇಶದಲ್ಲಿನ ಪಬ್ ಒಂದರ ಮೇಲೆ ದಾಳಿ ನಡೆಸಿದ ಪೊಲೀಸರು 42 ಮಹಿಳೆಯರು ಸೇರಿದಂತೆ 100 ಕ್ಕೂ ಹೆಚ್ಚು ಜನರನ್ನು ಬಂಧಿಸಿದ್ದಾರೆ.

Advertisement

ಅಕ್ರಮ ಚಟುವಟಿಕೆಗಳ ಬಗ್ಗೆ, ನಿರ್ದಿಷ್ಟವಾಗಿ ಅನುಚಿತ ನೃತ್ಯ ಪ್ರದರ್ಶನಗಳ ಬಗ್ಗೆ ಮಾಹಿತಿ ಬಂದ ನಂತರ ಪೊಲೀಸ್ ತಂಡ ಶುಕ್ರವಾರ ರಾತ್ರಿ (ಅ18) ದಾಳಿ ನಡೆಸಿ ಅಶ್ಲೀಲ ನೃತ್ಯ ಪ್ರದರ್ಶನಗಳಲ್ಲಿ ಭಾಗಿಯಾಗಿದ್ದವರನ್ನು ಬಂಧಿಸಿದೆ ಎಂದು ಹೈದರಾಬಾದ್ ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಬಂಧಿತರಲ್ಲಿ ಪಬ್‌ನ ಮ್ಯಾನೇಜರ್, ಕ್ಯಾಷಿಯರ್ ಮತ್ತು ಡಿಜೆ ಆಪರೇಟರ್ ಸೇರಿದ್ದಾರೆ. ಪುರುಷರನ್ನು ಆಕರ್ಷಿಸಲು ಮತ್ತು ಲಾಭವನ್ನು ಹೆಚ್ಚಿಸಲು ಪಬ್ ನಲ್ಲಿ ವಿವಿಧ ರಾಜ್ಯಗಳ ಮಹಿಳೆಯರನ್ನು ಅಶ್ಲೀಲ ನೃತ್ಯಗಳನ್ನು ಮಾಡಲು ನೇಮಿಸಿಕೊಳ್ಳಲಾಗಿತ್ತು ಎಂದು ಆರೋಪಿಸಲಾಗಿದೆ.

ನಗರದಲ್ಲಿ ಅಕ್ರಮ ಚಟುವಟಿಕೆಗಳ ವಿರುದ್ಧದ ಕಾರ್ಯಾಚರಣೆಯ ಭಾಗವಾಗಿ ಸಹಾಯಕ ಪೊಲೀಸ್ ಆಯುಕ್ತ ವೆಂಕಟ್ ರಮಣ ನೇತೃತ್ವದ ಪೊಲೀಸ್ ತಂಡವು ಪಬ್ ಮೇಲೆ ದಾಳಿ ನಡೆಸಿದೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next