ನ್ಯೂಜೆರ್ಸಿ: ಅಮೆರಿಕದ ನಗರ ನ್ಯೂಜೆರ್ಸಿಯ ವುಡ್‌ಬ್ರಿಡ್ಜ್ ಪ್ರಾಂತ್ಯದಲ್ಲಿರುವ ಕೊಲೊನಿಯಾ ಹೈಸ್ಕೂಲ್‌ನಲ್ಲಿ ಓದಿದ್ದ ವಿದ್ಯಾರ್ಥಿಗಳಲ್ಲಿ ಸುಮಾರು 100 ಜನರಿಗೆ ಗ್ಲಿಬೋಬ್ಲಾಸ್ಟೋಮಾ ಎಂಬ ಮೆದುಳಿನ ಕ್ಯಾನ್ಸರ್ ಕಾಣಿಸಿಕೊಂಡಿದ್ದು, ಈ ಕುರಿತಂತೆ ಸ್ಥಳೀಯ ಸರ್ಕಾರ ತನಿಖೆಗೆ ಆದೇಶಿಸಿದೆ.
ಗಮನಾರ್ಹ ವಿಚಾರವೆಂದರೆ, ಈ ಶಾಲೆಯಲ್ಲಿ ವ್ಯಾಸಂಗ ಮಾಡಿ ಈಗ ನಾನಾ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಹಲವರಲ್ಲಿ ಈ ರೋಗ ಕಾಣಿಸಿಕೊಂಡಿದೆ.
ಅಮೆರಿಕದ ನರವಿಜ್ಞಾನ ಶಸ್ತ್ರಚಿಕಿತ್ಸಕರ ಸಂಘದ ಅಭಿಪ್ರಾಯದ ಪ್ರಕಾರ, ಪ್ರತಿ ಒಂದು ಲಕ್ಷ ಜನರಲ್ಲಿ ಗ್ಲಿಬೋಬ್ಲಾಸ್ಟೋಮಾ ಕೇವಲ ಶೇ. 3.21ರಷ್ಟು ಜನರಲ್ಲಿ ಮಾತ್ರ ಬರುತ್ತದೆ. ಆದರೆ, ಕೊಲೊನಿಯಾ ಹೈಸ್ಕೂಲ್‌ನಲ್ಲಿ 1975ರಿಂದ 2000 ಅವಧಿಯಲ್ಲಿ ಓದಿದ ಸುಮಾರು 102 ಜನರಲ್ಲಿ ಈ ರೋಗ ಕಾಣಿಸಿಕೊಂಡಿರುವುದು ವಿಚಿತ್ರವೆನಿಸಿದೆ ಎಂದು ಸಂಸ್ಥೆ ಹೇಳಿದೆ.
ಇದನ್ನೂ ಓದಿ:ಮಳೆ ಅವಾಂತರಕ್ಕೆ 10ಕ್ಕೂ ಮನೆಗಳಿಗೆ ಹಾನಿ, ಸಿಡಿಲಿಗೆ ತೆಂಗಿನ ಮರ ಭಸ್ಮ
ಈಗಾಗಲೇ ಈ ಕುರಿತಂತೆ ತನಿಖೆಗೆ ಆದೇಶಿಸಲಾಗಿದ್ದು, ಶಾಲೆಯಿರುವ 28 ಎಕರೆಯಲ್ಲಿ ರೇಡಿಯೋಲಾಜಿಕಲ್ ಅಸೆಸ್ಮೆಂಟ್ ಆರಂಭಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.