ಹೊಸದಿಲ್ಲಿ : 135 ಕೋಟಿ ಜನಸಂಖ್ಯೆ –ಇರುವ ಭಾರತದಲ್ಲಿ 100 ಕೋಟಿಗೂ ಅಧಿಕ ಜನರಿಗೆ ಆರೋಗ್ಯ ವಿಮೆ ಇಲ್ಲ. ದ ಲ್ಯಾನ್‌ಸೆಟ್ ಪ್ರಕಟಿಸಿರುವ ಜಾಗತಿಕ ಅಧ್ಯಯನ ವರದಿಯಲ್ಲಿ ಆರೋಗ್ಯ ವಿಮೆ ವಿಷಯದಲ್ಲಿ ಪಟ್ಟಿ ಮಾಡಲ್ಪಟ್ಟಿರುವ 100 ದೇಶಗಳ ಪೈಕಿ ಭಾರತ 56ನೇ ಸ್ಥಾನದಲ್ಲಿರುವ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.
“ದಿ ಗ್ಲೋಬಲ್ ಮಾನಿಟರಿಂಗ್ ರಿಪೋರ್ಟ್ 2017 (ಜಿಎಂಆರ್ 2017) ನ ವರದಿಯನ್ನು ಡಿ.13ರಂದು ಟೋಕಿಯೋದ ಯುನಿವರ್ಸಲ್ ಹೆಲ್ತ್ ಕವರೇಜ್ ಫೋರಮ್ ನಲ್ಲಿ ಅನಾವರಣಗೊಳಿಸಲಾಯಿತು.
ಈ ವರದಿಯ ಪ್ರಕಾರ ವಿಶ್ವ ಜನಂಖ್ಯೆಯ ಅರ್ಧಾಂಶದಷ್ಟು ಜನರಿಗೆ, ಎಂದರೆ 7.3 ಶತಕೋಟಿ ಜನರಿಗೆ ಆರೋಗ್ಯ ವಿಮೆ ಇಲ್ಲದಿರುವುದು ಕಂಡು ಬಂದಿದೆ. ಇದೇ ರೀತಿ ಈ 7.3 ಶತಕೋಟಿ ಜನರಿಗೆ ಆವಶ್ಯಕ ಆರೋಗ್ಯ ಸೇವೆಗಳು ಕೂಡ ಲಭಿಸದಿರುವುದು ಬಹಿರಂಗವಾಗಿದೆ.
ವರದಿಯ ಪ್ರಕಾರ ವಿಶ್ವ ಜನಸಂಖ್ಯೆಯ ಕೇವಲ ಶೇ.27 ಮಂದಿಗೆ ಮಾತ್ರವೇ ಆರೋಗ್ಯ ರಕ್ಷಣೆ ಸೇವೆಗಳು ಸಿಗುತ್ತಿವೆ; ಅಥವಾ ಅದನ್ನು ಪಡೆಯುವ ಆರ್ಥಿಕ ತಾಕತ್ತು ಅವರಿಗಿದೆ.
ಈ ವರದಿಯು ಬಹಿರಂಗಪಡಿಸಿರುವ ಜನಾರೋಗ್ಯಕ್ಕೆ ಸಂಬಂಧಿಸಿದ ಕೆಲವು ಗಂಭೀರ ಕಳವಳಕಾರಿ ವಿಷಯಗಳು ಇಂತಿವೆ:
*ವಿಶ್ವದ ನೂರು ಕೋಟಿ ಜನರು ಅನಿಯಂತ್ರಿತ ಹೈಪರ್‌ಟೆನ್‌ಶನ್ ಜತೆಗೆ ಬದುಕುತ್ತಿದ್ದಾರೆ. 20 ಕೋಟಿ ಮಹಿಳೆಯರು ಪರ್ಯಾಪ್ತ ಕುಟುಂಬ ಕಲ್ಯಾಣ ಯೋಜನೆಗಳಿಗೆ ಒಳಪಡುತ್ತಿಲ್ಲ ;
*ಸುಮಾರು 2 ಕೋಟಿ ಮಕ್ಕಳಿಗೆ ಡಿಪ್‌ತೀರಿಯಾ, ಟಿಟಾನಸ್ ಮತ್ತು ಪೆರ್ಟುಸಿಸ್ ಕಾಯಿಲೆಯಿಂದ ಯಾವುದೇ ವೈದ್ಯಕೀಯ ರಕ್ಷಣೆ ಸಿಗುತ್ತಿಲ್ಲ.