ಬಸವನಬಾಗೇವಾಡಿ: ತಾಲೂಕಿನ ಮನಗೂಳಿ ಹತ್ತಿರದ ರಾಷ್ಟ್ರೀಯ ಹೆದ್ದಾರಿ 50ರ ಅಂಡರ್ ಪಾಸ್ (ಮೇಲ್ಸೇತುವೆ) ಕಾಮಗಾರಿ ಕಳಪೆ ಮಟ್ಟದಿಂದ ನಡೆದಿದೆ ಎಂದು ಆರೋಪಿಸಿ ಮನಗೂಳಿ ಪಪಂ ಅಧ್ಯಕ್ಷ ಹಾಗೂ ಸದಸ್ಯರು ಕಾಮಗಾರಿ ಸ್ಥಗಿತಗೊಳಿಸುವಂತೆ ಆಗ್ರಹಿಸಿ ಒಂದು ಗಂಟೆ ಕಾಲಧರಣಿ ನಡೆಸಿದರು.
ಶುಕ್ರವಾರ ಮಧ್ಯಾಹ್ನ ಪ್ರತಿಭಟನಾಕಾರರು ಕಾಮಗಾರಿ ನಡೆಯುವ ಸ್ಥಳಕ್ಕೆ ಆಗಮಿಸಿ, 36 ಕೋಟಿ ರೂ. ವೆಚ್ಚದಲ್ಲಿ ನಡೆಯುತ್ತಿರುವ ಕಾಮಗಾರಿ ಕಳಪೆಯಾಗಿದ್ದು ತಕ್ಷಣ ನಿಲ್ಲಿಸಬೇಕೆಂದು ಒತ್ತಾಯಿಸಿದಾಗ ಕಾರ್ಮಿಕರು ಕೆಲಸ ಬಿಟ್ಟು ತೆರಳಿದರು.
ನಂತರ ಸ್ಥಳಕ್ಕೆ ಪರಿಶೀಲನೆಗೆ ಆಗಮಿಸಿದ್ದ ಪ್ರೊಜೆಕ್ಟ್ಡೈ ರೆಕ್ಟರ ಹಾಗೂ ಜನರಲ್ ಮ್ಯಾನೇಜರ್ (ಸದ್ಬವ ಕಂಪನಿ) ಆಗಮಿಸಿದ ಸಂದರ್ಭದಲ್ಲಿ ಮನಗೂಳಿ ಪಪಂ ಅಧ್ಯಕ್ಷ ಸದಾಶಿವ ಕಾಂಬಳೆ ಹಾಗೂ ಗ್ರಾಮದ ಮುಖಂಡ ಭೀಮಗೊಂಡ ಹತ್ತರಕಿ ಅವರು ಇವರಿಬ್ಬರ ಬಳಿ ಸಮಸ್ಯೆ ಕುರಿತು ಹೇಳಲು ಮುಂದಾದಾಗ ಅದಕ್ಕೆ ಅವರು ಪ್ರತಿಕ್ರಿಯೆ ಮಾಡದೆ ಹಾಗೆ ಅಲ್ಲಿಂದ ತೆರಳಿದರು.
ಆಗ ಆಕ್ರೋಶಗೊಂಡ ಭೀಮಗೊಂಡ ಹತ್ತರಕಿ ಸುದ್ದಿಗಾರರೊಂದಿಗೆ ಮಾತನಾಡಿ, ಕಾಮಗಾರಿ ಕಳಪೆಯಾಗಿ ನಡೆಯುತ್ತಿದೆ ಎಂದು ಹೇಳಲು ಮುಂದಾದರೆ ಪರಿಶೀಲನೆ ಆಗಮಿಸಿದ ಅಧಿಕಾರಿಗಳು ನಾಮಕಾ ವಾಸ್ತೆ ಪರಿಶೀಲನೆ ಮಾಡುತ್ತಿದ್ದಾರೆ.
ಕಾಮಗಾರಿ ಬಗ್ಗೆ ಸಮಗ್ರ ತನಿಖೆ ಮಾಡಲು ಜಿಲ್ಲಾಧಿಕಾರಿಗಳು ಮುಂದಾಗಬೇಕೆಂದು ಒತ್ತಾಯಿಸಿದರು. ಒಂದು ವೇಳೆ ಕಾಮಗಾರಿ ಆರಂಭಿಸಿದರೆ ಜಿಲ್ಲಾ ಧಿಕಾರಿಗಳ ಕಚೇರಿ ಮುಂದೆ ಮನಗೂಳಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಪ್ರತಿಭಟನೆ ನಡೆಸುತ್ತೇವೆ ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ಮನಗೂಳಿ ಪಪಂ ಸದಸ್ಯರಾದ ಶರಣು ಬೀರಕಬ್ಬಿ, ಶಿವಯ್ಯ ನಂದಿಕೋಲಮಠ, ಮುಖಂಡರಾದ ರಮೇಶ ಗಚ್ಚಿನವರ, ಶಿವು ಸಿಂದಗಿ, ಅಭಿಷೇಕ ಹೇಳವರ, ಮಂಜುನಾಥ ಮಡಿವಾಳರ, ಅಪ್ಪು ಬಿರಾದಾರ, ಮಲ್ಲಯ್ಯ ಚೌಕಿಮಠ, ವಿಠuಪ್ಪ ದಿಂಡವಾರ, ಮುದಕು ಮನಹಳ್ಳಿ, ಶಿವು ಹೊನ್ನುಟಗಿ, ಸಿದ್ದು ಕವಲಗಿ, ನಾಗರಾಜ ಗುಂದಗಿ ಸೇರಿದಂತೆ ಮುಂತಾದವರು ಇದ್ದರು.