Advertisement
ಕಳೆದ 10 ವರ್ಷಗಳಿಂದ ಗುತ್ತಿಗೆ ಆಧಾರದ ಮೇಲೆ ದಿನಗೂಲಿ ಪೌರ ಕಾರ್ಮಿಕರಾಗಿ ಸೇವೆ ಸಲ್ಲಿಸುತ್ತಿದ್ದು, ಎನ್‌ಜಿಒ ಮೂಲಕ ವೇತನ ಪಾವತಿಸುತ್ತಾ ಬರಲಾಗಿದೆ. ಈ ಮೊದಲು ಸರಿಯಾಗಿ ವೇತನ ಪಾವತಿಯಾಗುತ್ತಿತ್ತು. ಆದರೆ ಕಳೆದೊಂದು ವರ್ಷದಿಂದ ಸರಿಯಾಗಿ ವೇತನ ಪಾವತಿಯಾಗುತ್ತಿಲ್ಲ. ಈ ಕುರಿತು ಕಳೆದ ನಾಲ್ಕು ತಿಂಗಳ ಹಿಂದೆ ವೇತನಕ್ಕಾಗಿ ಧರಣಿ ನಡೆಸಿದ ಸಂದರ್ಭದಲ್ಲಿ ಎರಡು ತಿಂಗಳ ವೇತನ ಪಾವತಿಸಲಾಗಿತ್ತು. ಆದರೆ ಮತ್ತೆ ವೇತನ ಪಾವತಿಸುವಲ್ಲಿ ವಿಳಂಬ ನೀತಿ ಅನುಸರಿಸಲಾಗುತ್ತಿದೆ. ಈ ಕುರಿತು ಕೇಳಿದಲ್ಲಿ 11 ಜನ ಪೌರಕಾರ್ಮಿಕರನ್ನು ಸೇವೆಯಿಂದ ವಜಾಗೊಳಿಸಲಾಗಿದೆ ಎನ್ನುತ್ತಿದ್ದಾರೆ. ಆದ್ದರಿಂದ ಕೂಡಲೇ ನಮಗೆ ಪಾವತಿಯಾಗಬೇಕಾದ ಬಾಕಿ ಇರುವ ವೇತನವನ್ನು ಕೂಡಲೇ ಪಾವತಿಸಬೇಕು. ಅಲ್ಲದೇ ನಮ್ಮನ್ನು ಮತ್ತೆ ಸೇವೆಗೆ ಸೇರ್ಪಡೆಗೊಳಿಸಬೇಕು. ಕಳೆದ 10 ವರ್ಷದಿಂದ ನಗರ ಸ್ವಚ್ಛತೆಗಾಗಿಯೇ ನಮ್ಮ ಜೀವ ಮುಡುಪಾಗಿಟ್ಟು ದುಡಿದಿದ್ದೇವೆ. ಈಗ ಏಕಾಏಕಿ ಸೇವೆಯಿಂದ ವಜಾಗೊಳಿಸಿದಲ್ಲಿ ನಾವೇನು ಮಾಡಬೇಕು ಎಂದು ದಿನಗೂಲಿ ಪೌರ ಕಾರ್ಮಿಕರಾದ ಗಂಗವ್ವ ಹಲಗಿ, ಮಂಜವ್ವ ಪೂಜಾರ, ಜಯವ್ವ ಹಾದಿಮನಿ, ಹನಮಂತಪ್ಪ ತೆಗ್ಗಿಮನಿ ಅಳಲು ತೋಡಿಕೊಂಡರು.
Advertisement
ವೇತನ ಪಾವತಿ ವಿಳಂಬಕ್ಕೆ ಆಕ್ರೋಶ
04:47 PM Oct 30, 2018 | |
Advertisement
Udayavani is now on Telegram. Click here to join our channel and stay updated with the latest news.