Advertisement

ಅಧಿಕಾರಿಗಳ ವಿರುದ್ಧ ತಾಲೂಕು ಪಂಚಾಯಿತಿ ಸದಸ್ಯರ ಆಕ್ರೋಶ

06:28 AM Jul 05, 2020 | Lakshmi GovindaRaj |

ಚನ್ನರಾಯಪಟ್ಟಣ: ಕೃಷಿ, ತೋಟಗಾರಿಕೆ, ಆರೋಗ್ಯ ಇಲಾಖೆ, ಗ್ರಾಮೀಣ ಕುಡಿವ ನೀರು ಹಾಗೂ ನೈರ್ಮಲ್ಯ ಇಲಾಖೆ ಅಧಿ ಕಾರಿಗಳು ತಾಲೂಕು ಪಂಚಾಯಿತಿ ಸದಸ್ಯ ರನ್ನು ಕಡೆಗಣಿಸುತ್ತಿದ್ದಾರೆ ಎಂದು ತಾಪಂ ಸದಸ್ಯರು ಆಕ್ರೋಶ  ವ್ಯಕ್ತ ಪಡಿಸಿದರು. ತಾಪಂ ಅಧ್ಯಕ್ಷೆ ಶ್ಯಾಮಲಾ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು.

Advertisement

ಸದಸ್ಯರಾದ ರಾಮಕೃಷ್ಣ, ಜಯರಾಮ್‌, ಮಂಜುನಾಥ, ಭೈರೇಗೌಡ ಮಾತನಾಡಿ, ಕೃಷಿ ಇಲಾಖೆಯಲ್ಲಿ ರೈತರಿಗೆ ನೀಡುವ ಟಾರ್ಪಲ್‌ಗ‌ಳನ್ನು ಸದಸ್ಯರ  ಗಮನಕ್ಕೆ ತರದೇ ಶಾಸಕರ ಹಿಂಬಾಲಕರಿಗೆ ನೀಡಿದ್ದಾರೆ, ಕೃಷಿ ಹೊಂಡದಲ್ಲಿ ಭಾರೀ ಅವ್ಯ ವಹಾರ ನಡೆದಿದೆ ಎಂದು ಆರೋಪಿಸಿದರು. ಮುಂಬೈನಿಂದ ತಾಲೂಕಿಗೆ ಆಗಮಿಸುತ್ತಿ ರುವವರ ಬಗ್ಗೆ  ಟಿಎಚ್‌ಒ ಗಮನಕ್ಕೆ ತಂದರೂ ಯಾವುದೇ ಪ್ರಯೋಜವಾಗಿಲ್ಲ ಎಂದು ಸದಸ್ಯ ರಾಮಕೃಷ್ಣೇಗೌಡ ಆರೋಪಿಸಿದರು.

ಪರಿಷತ್‌ ಸದಸ್ಯ ಎಂ.ಎ. ಗೋಪಾಲಸ್ವಾಮಿ ಮಾತನಾಡಿ, ಕೋವಿಡ್‌ 19 ನಿಯಂತ್ರಿಸುವಲ್ಲಿ ಅಧಿಕಾರಿ ಗಳೊಂದಿಗೆ ತಾಪಂ ಸದಸ್ಯರ  ಸಹಕಾರ ಅಗತ್ಯ ಎಂದರು. ಕೋವಿಡ್‌ 19 ನಿಯಂತ್ರಣಕ್ಕೆ ಸ್ವಯಂ ಪ್ರೇರಿತವಾಗಿ ಮಧ್ಯಾಹ್ನ 3 ಗಂಟೆಯ ನಂತರ ವ್ಯಾಪಾರ ವಹಿವಾಟು ಬಂದ್‌ ಮಾಡಲು ನಿರ್ಧರಿಸಿರುವ ವರ್ತಕರಿಗೆ ಶಾಸಕರು ನಿಂದಿಸಿದ್ದಾರೆಂದು ಸದಸ್ಯ ಮಂಜುನಾಥ್‌ ಸಭೆ  ಗಮನಕ್ಕೆ ತಂದರು.

ಈ ವೇಳೆ ಪರಿಷತ್‌ ಸದಸ್ಯ ಗೋಪಾಲ ಸ್ವಾಮಿ ಮಾತನಾಡಿ, ಜನರ ಹಿತದೃಷ್ಟಿಯಿಂದ ವರ್ತಕರು ಕೈಗೊಂಡ ತೀರ್ಮಾನವನ್ನು ಶಾಸಕರು ಲಘುವಾಗಿ ಪರಿಗಣಿಸಿರುವುದ ಸರಿಯಲ್ಲ ಎಂದರು.  ತಾಲೂಕು  ಪಂಚಾಯಿತಿ ಉಪಾಧ್ಯಕ್ಷ ಗಿರೀಶ್‌, ಸ್ಥಾಯಿ ಸಮಿತಿ ಅಧ್ಯಕ್ಷ ಶಿವಸ್ವಾಮಿ, ಪ್ರಭಾರ ಕಾರ್ಯ ನಿರ್ವಹಣಾಧಿಕಾರಿ ಆನಂದ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next