Advertisement

ಮರಗಳ ಮಾರಣಹೋಮಕ್ಕೆ ವ್ಯಾಪಕ ಆಕ್ರೋಶ

01:43 PM Oct 21, 2020 | Suhan S |

ನೆಲಮಂಗಲ: ಪಟ್ಟಣದ ಪಂಪ್‌ಹೌಸ್‌ನಲ್ಲಿ ನಡೆದ ಮರಗಳ ಮಾರಣ ಹೋಮದ ಕುರಿತಾಗಿ ಅ.20ರಂದು ಮಂಗಳವಾರ “ಉದಯವಾಣಿ’ಯಲ್ಲಿ ನಗರಸಭೆ ಮರಗಳ ಹನನ ಆಕ್ರೋಶ ಎಂಬ ಶೀರ್ಷಿಕೆ ಅಡಿಯಲ್ಲಿ ವಿಸ್ತೃತವಾಗಿ ವರದಿ ಪ್ರಕಟವಾದ ಬೆನ್ನಲ್ಲೆ ವರದಿಗೆ ಎಚ್ಚೆತ್ತ ಬಿಜೆಪಿ ಮುಖಂಡರು ನಗರಸಭೆ ಪೌರಾಯುಕ್ತರ ಕಚೇರಿಗೆ ಮುತ್ತಿಗೆ ಹಾಕಿದರು.

Advertisement

ಬಿಜೆಪಿ ತಾಲೂಕು ಅಧ್ಯಕ್ಷ ಹೇಮಂತ್‌ ಕುಮಾರ್‌ ಹಾಗೂ ಒಬಿಸಿ ಅಧ್ಯಕ್ಷ, ಪುರಸಭೆಮಾಜಿ ಸದಸ್ಯ ಕೇಶವಮೂರ್ತಿ ನೇತೃತ್ವದಲ್ಲಿ ನಗರಸಭೆ ಆವರಣಕ್ಕೆ ಧಾವಿಸಿ ಬಂದ ಬಿಜೆಪಿ ಮುಖಂಡರು ನೇರವಾಗಿ ಪೌರಾಯುಕ್ತರಕಚೇರಿಗೆ ಮುತ್ತಿಗೆ ಹಾಕಿ ಮರಗಳ ಮಾರಣ ಹೋಮದ ಕುರಿತಾಗಿ ಪ್ರಶ್ನಿಸಿದರು.

ಬಿಜೆಪಿ ಮುಖಂಡರ ಪ್ರಶ್ನೆಗೆ ಮರಗಳನ್ನು ಯಾರು ಕತ್ತರಿಸಿದ್ದಾರೆ, ಯಾರು ಕಡೆದಿದ್ದಾರೆ, ಎಂಬ ಮಾಹಿತಿ ನನಗೆ ಗೊತ್ತಿಲ್ಲ. ಈ ಕುರಿತಾಗಿ ಪರಿಶೀಲಿಸುತ್ತೇನೆಂದು ಪೌರಾಯುಕ್ತ ಮಂಜುನಾಥ ಸ್ವಾಮಿ ಉತ್ತರ ನೀಡಿದಾಗಆಕ್ರೋಶಗೊಂಡ ಪುರಸಭೆ ಮಾಜಿ ಸದಸ್ಯ ಕೇಶವಮೂರ್ತಿ ಪೌರಾಯುಕ್ತರ ವಿರುದ್ಧ ಹರಿಹಾಯ್ದರು.

ಆಕ್ರೋಶ: ಯಾರೋ ಮರಗಳನ್ನು ಕಡೆದು ಕೊಂಡು ಹೋಗಿದ್ದರೂ,ಸಂಬಂಧಪಟ್ಟ ಅಧಿಕಾರಿಗಳು ಕಂಡೂ ಕಾಣದಂತೆ ಜಾಣ ಕುರುಡತನ ತೋರಿರುವುದು ಅಕ್ಷಮ್ಯಅಪರಾಧ ತಪ್ಪಿತಸ್ಥರ ವಿರುದ್ಧ ಸೂಕ್ತ ರೀತಿಯ ಕಾನೂನುಕ್ರಮ ಜರುಗಿಸಬೇಕೆಂದು ಪುರಸಭೆ ಮಾಜಿ ಸದಸ್ಯ ಕೇಶವಮೂರ್ತಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪೌರಾಯುಕ್ತ ಮಂಜುನಾಥ್‌ ಸ್ವಾಮಿ.ಎಲ್‌ .ಮಾತನಾಡಿ, ಮರ ಗಳುಕಡೆದಿರುವಕುರಿತಾಗಿ ನನ್ನ ಗಮನಕ್ಕೆ ಬಂದತಕ್ಷಣ ಅರಣ್ಯ ಇಲಾಖೆ ಮತ್ತು ಪೊಲೀಸ್‌ಇಲಾಖೆಗೆ ದೂರು ನೀಡಿದ್ದು, ಸೂಕ್ತರೀತಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.

Advertisement

ಬಿಜೆಪಿ ಟೌನ್‌ ಅಧ್ಯಕ್ಷ ರವಿ, ಯುವ ಮೋರ್ಚಾ ಉಪಾಧ್ಯಕ್ಷ ರಾಹುಲ್‌ಗೌಡ,ಸುಬ್ರಹ್ಮಣಿ, ರಾಜಮ್ಮ, ಸೌಮ್ಯ, ಸಿದ್ದರಾಜು ಪುನೀತ್‌ರಾಜ್‌ ಉಪಸ್ಥಿತರಿದ್ದರು.

ಜೋಳ,ರಾಗಿ ಖರೀದಿ ಕೇಂದ್ರ ತೆರೆಯಲು ಆಗ್ರಹ :

ದೊಡ್ಡಬಳ್ಳಾಪುರ: ಸರ್ಕಾರ ಜೋಳ, ರಾಗಿ ಖರೀದಿ ಕೇಂದ್ರಗಳನ್ನು ಶೀಘ್ರವಾಗಿ ತೆರೆದು ರೈತರ ನೆರವಿಗೆ ಬರಬೇಕಿದೆಎಂದು ಆಗ್ರಹಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ತಾಲೂಕು ಘಟಕದ ನೇತೃತ್ವದಲ್ಲಿ ರೈತರು ತಾಲೂಕು ಕಚೇರಿ ಆವರಣದಲ್ಲಿ ನಿರಂತರ ಸತ್ಯಾಗ್ರಹ ಆರಂಭಿಸಿದ್ದಾರೆ.

ತಾಲೂಕು ಕಚೇರಿ ಆವರಣದಲ್ಲಿ ಜೋಳ ಸುರಿದು ಗಮನ ಸೆಳೆದ ರೈತರು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗುವ ಮೂಲಕ ಬೆಂಬಲ ಬೆಲೆ ಘೋಷಣೆ ಬಗ್ಗೆ ಸಮರ್ಪಕ ಉತ್ತರ ನೀಡುವವರೆಗೂ ಧರಣಿ ಮುಂದುವರಿಸಲಾಗುವುದು ಎಂದು ಪಟ್ಟು ಹಿಡಿದಿದ್ದಾರೆ.

ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಪ್ರಸನ್ನ, ತಾಲೂಕು ಅಧ್ಯಕ್ಷ ಹನುಮೇಗೌಡ ಮಾತನಾಡಿ, ರಾಜ್ಯದ ವಿವಿಧ ಭಾಗಗಳಲ್ಲಿ ಈಬಾರಿ ಉತ್ತಮ ಮಳೆಯಾಗಿ, ರೈತರುಬೆಳೆದ ಜೋಳ ಹಾಗೂ ರಾಗಿ ಉತ್ತಮ ಫಸಲು ಬಂದಿದೆ. ಆದರೆ, ಮಾರುಕಟ್ಟೆಯಲ್ಲಿ ರೈತ ಬೆಳೆದ ಬೆಳೆಗಳಿಗೆ ಸೂಕ್ತಬೆಲೆ ಇಲ್ಲದಂತಾಗಿದೆ.ಈ ಹಂಗಾಮಿನಲ್ಲಿಕಟಾವು ಆರಂಭವಾಗಿದ್ದು, ಸರ್ಕಾರ ಘೋಷಿಸಿರುವ ರಾಗಿ ಕ್ವಿಂಟಲ್‌ಗೆ 3,295 ರೂ. ಹಾಗೂ ಜೋಳ ಕ್ವಿಂಟಲ್‌ಗೆ 1,850 ರೂ. ಬೆಂಬಲ ಬೆಲೆ ಪ್ರಕಾರಖರೀದಿ ಕೇಂದ್ರವನ್ನು ತೆರೆಯಬೇಕು ಎಂದರು.

ಕೇಂದ್ರ ಸರ್ಕಾರ 14 ಪ್ರಮುಖ ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಘೋಷಣೆ ಮಾಡಿ ರೈತರ ನೆರವಿಗೆ ಧಾವಿಸಿಸುತ್ತೇವೆ ಎಂದು ಹೇಳಿರುವುದು ಆದೇಶಗಳಿಗಷ್ಟೇ ಸೀಮಿತವಾಗಿದೆ.ಕಾರ್ಯರೂಪಕ್ಕೆ ಬಂದಿಲ್ಲ. ರೈತರು ತೀವ್ರ ಸಂಕಷ್ಟಕ್ಕೆ ಸಿಲುಕುವ ಮುನ್ನ ಸರ್ಕಾರ ಖರೀದಿ ಕೇಂದ್ರ ತೆರೆದು ರೈತರ ನೆರವಿಗೆ ಧಾವಿಸಬೇಕಿದೆ. ಇಲ್ಲವಾದಲ್ಲಿ ತೀವ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು. ರೈತ ಸಂಘದ ಜಿಲ್ಲಾ ಕಾರ್ಯದರ್ಶಿ

ಸತೀಶ್‌, ತಾಲೂಕು ಉಪಾಧ್ಯಕ್ಷ ರವಿ ಶಿರವಾರ, ತಾಲೂಕು ಪ್ರಧಾನ ಕಾರ್ಯದರ್ಶಿ ಸತೀಶ್‌, ರೈತ ಮುಖಂಡರಾದ ವಸಂತ್‌ ಕುಮಾರ್‌, ಶಿವರಾಜ್‌, ಹರೀಶ್‌, ಬೈರೇಗೌಡ, ಸೀಗೆಹಳ್ಳಿ ರವಿ ಸಿರಿವಾರ ಮುನಿನಾರಾಯಣಪ್ಪ, ಮಹಾದೇವ್‌ ಮತ್ತಿತರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next