Advertisement

ಮಾರುಕಟ್ಟೆ ಶುಲ್ಕ ಹೆಚ್ಚಳಕ್ಕೆ ಆಕ್ರೋಶ

06:40 PM Dec 22, 2020 | Suhan S |

ಸಾಗರ: ಕೃಷಿ ಉತ್ಪನ್ನ ಮಾರುಕಟ್ಟೆ ಶುಲ್ಕವನ್ನು ಶೇ.1ಕ್ಕೆ  ಹೆಚ್ಚಿಸಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ಸೋಮವಾರ ಅಡಕೆ ವರ್ತಕರ ಸಂಘದ ವತಿಯಿಂದ ವ್ಯಾಪಾರ ಬಂದ್‌ ಮಾಡಿ ಎಪಿಎಂಸಿ ಪ್ರಾಂಗಣದಲ್ಲಿ ಪ್ರತಿಭಟನೆ ನಡೆಸಲಾಯಿತು.

Advertisement

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ರಾಜ್ಯ ಅಡಕೆ ಛೇಂಬರ್‌ ಉಪಾಧ್ಯಕ್ಷ ಅಶ್ವಿ‌ನಿಕುಮಾರ್‌, ಕೇಂದ್ರ ಸರ್ಕಾರದ ಒಂದು ದೇಶ-ಒಂದು ತೆರಿಗೆ ಎಂಬ ನೀತಿಗೆ ಅನುಗುಣವಾಗಿ ಅಡಕೆ ವರ್ತಕರು ಕಾರ್ಯನಿರ್ವಹಿಸುತ್ತಿದ್ದು, ಕೇಂದ್ರದ ಈ ನೀತಿ ವಿರುದ್ಧ ಯಾವುದೇ ಅಪಸ್ವರ ಎತ್ತಿರಲಿಲ್ಲ. ಜಿ.ಎಸ್‌.ಟಿ. ಜಾರಿಗೆ ಬರುವ ಪೂರ್ವದಲ್ಲಿ ಅಡಕೆ ಮೇಲೆ ವ್ಯಾಟ್‌ ಹೆಸರಿನಲ್ಲಿ ಶೇ. 2 ತೆರಿಗೆ ವಧಿಸಲಾಗುತಿತ್ತು. 2017ರಲ್ಲಿ ಜಿ.ಎಸ್‌.ಟಿ. ಜಾರಿಗೆ ಬಂದ ಮೇಲೆ ತೆರಿಗೆಯನ್ನು ಶೇ. 5ಕ್ಕೆ ಏರಿಸಲಾಗಿದೆ. ಹಿಂದಿನ ವ್ಯಾಟ್‌ಗಿಂತ ಹಾಲಿ ಜಿ.ಎಸ್‌.ಟಿ.ಯಡಿ ಶೇ. 3ರಷ್ಟು ತೆರಿಗೆಯನ್ನು ಅಡಕೆ ವರ್ತಕರು ಹೆಚ್ಚು ಪಾವತಿ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ರಾಜ್ಯ ಸರ್ಕಾರ ಮಾರುಕಟ್ಟೆ ಒಳಗಿನ ಶುಲ್ಕವನ್ನು ಶೇ. 0.35ನಿಂದ 1ಕ್ಕೆ ಏರಿಸಿದೆ. ಆದರೆ ಎಪಿಎಂಸಿ ಪ್ರಾಂಗಣದಹೊರಗೆ ವಹಿವಾಟು ಮಾಡುವ ಅಡಕೆಗೆ ಯಾವುದೇ ತೆರಿಗೆ ಇರುವುದಿಲ್ಲ. ಸರ್ಕಾರದ ಈ ಅವೈಜ್ಞಾನಿಕನೀತಿಯಿಂದಾಗಿ ಮಾರುಕಟ್ಟೆಗೆ ಅಡಕೆ ಬರುವ ಪ್ರಮಾಣ ತೀರಾ ಕಡಿಮೆಯಾಗಿದೆ. ರಾಜ್ಯ ಸರ್ಕಾರದ ಈ ತೆರಿಗೆ ವ್ಯವಸ್ಥೆಯಿಂದ ಎಪಿಎಂಸಿ ಅಸ್ತಿತ್ವವೇ ಬುಡಮೇಲಾಗುವಸಾಧ್ಯತೆ ಇದೆ. ಸರ್ಕಾರದ ಅವೈಜ್ಞಾನಿಕ ತೆರಿಗೆ ನೀತಿಯಿಂದ ಅಡಕೆ ಅವಲಂಬಿತರು ತೀವ್ರ ಸಂಕಷ್ಟಕ್ಕೆ ಒಳಗಾಗುತ್ತಾರೆ. ತಕ್ಷಣ ರಾಜ್ಯ ಸರ್ಕಾರ ಕೇಂದ್ರದ ನೀತಿಯಂತೆ ಒಂದು ದೇಶ ಒಂದು ತೆರಿಗೆ ತತ್ವಕ್ಕೆ ಪೂರಕವಾಗಿ ಮಾರುಕಟ್ಟೆ ಶುಲ್ಕವನ್ನು ಸಂಪೂರ್ಣ ರದ್ದುಪಡಿಸಬೇಕು ಎಂದು ಒತ್ತಾಯಿಸಿದರು.

ವರ್ತಕರ ಸಂಘದ ಅಧ್ಯಕ್ಷ ಕೆ.ಬಸವರಾಜಪ್ಪ ಮಾತನಾಡಿ, ಸರ್ಕಾರದ ತೆರಿಗೆ ನೀತಿ ಒಂದೊಂದು ಗಂಟೆಗೂ ಬದಲಾಗುತ್ತಿದೆಯಾ ಎನ್ನುವ ಅನುಮಾನ ಕಾಡುತ್ತಿದೆ. ಸರ್ಕಾರ ಹಿಂದೆ ಶೇ. 1 ತೆರಿಗೆ ವಿ ಧಿಸಿತ್ತು. ಅಡಕೆಅವಲಂಬಿತರ ಒತ್ತಾಯದಿಂದ ತೆರಿಗೆಯನ್ನು ಶೇ. 0.35ಗೆ ಇಳಿಸಿತ್ತು. ಆದರೆ ಏಕಾಏಕಿ ಮಾರುಕಟ್ಟೆ ಶುಲ್ಕವನ್ನು ಶೇ. 1ಕ್ಕೆ ಹೆಚ್ಚಿಸಿದೆ. ಸರ್ಕಾರ ಅಡಕೆ ಆಶ್ರಿತರ ಹಿತಕಾಯುವ ಕೆಲಸ ಮಾಡದೆ ಇರುವುದು ದುರದೃಷ್ಟಕರ ಸಂಗತಿಯಾಗಿದೆ. ರಾಜ್ಯ ಸರ್ಕಾರದ ಈ ನೀತಿಯಿಂದ ಕೇಂದ್ರದ ಒಂದು ದೇಶ ಒಂದು ನೀತಿ ತತ್ವಕ್ಕೆ ಧಕ್ಕೆ ಉಂಟಾಗುವುದಿಲ್ಲವೇ ಎಂದು ಪ್ರಶ್ನಿಸಿದ ಅವರು, ಸರ್ಕಾರದ ಈ ಅವೈಜ್ಞಾನಿಕ ನೀತಿ ಖಂಡಿಸಿ ಪ್ರಮುಖ ಅಡಕೆ ಮಾರುಕಟ್ಟೆಗಳ ವಹಿವಾಟು ಬಂದ್‌ ಮಾಡಿ, ಪ್ರತಿಭಟನೆ ನಡೆಸಲಾಗುತ್ತಿದೆ. ಸರ್ಕಾರ ತಕ್ಷಣ ಶೂನ್ಯ ಮಾರುಕಟ್ಟೆ ಶುಲ್ಕ ವ್ಯವಸ್ಥೆ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.

ಸರ್ಕಾರದ ಜೊತೆ ಚರ್ಚೆಯ ಭರವಸೆ: ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಎಂಎಸ್‌ಐಎಲ್‌ ಅಧ್ಯಕ್ಷ, ಶಾಸಕ ಎಚ್‌.ಹಾಲಪ್ಪ ಹರತಾಳು, ಮಾರುಕಟ್ಟೆ ಶುಲ್ಕ ಏಕಾಏಕಿ ಹೆಚ್ಚಿಸಿರುವ ಬಗ್ಗೆ ಮುಖ್ಯಮಂತ್ರಿಗಳಿಗೆ, ಸಂಸದರಿಗೆ ಮಾಹಿತಿ ಇಲ್ಲ. ಏಕಾಏಕಿ ಮಾರುಕಟ್ಟೆ ಶುಲ್ಕ ಹೆಚ್ಚಿಸಿರುವುದು ಏಕೆ ಎನ್ನುವುದು ಯಾರ ಗಮನದಲ್ಲೂ ಇಲ್ಲ. ಇದೀಗ ಮುಖ್ಯಮಂತ್ರಿಗಳ ಗಮನಕ್ಕೆ ಪ್ರತಿಭಟನೆ ಮೂಲಕ ವಿಷಯ ಹೋಗಿದೆ. ಈ ಬಗ್ಗೆ ಮುಖ್ಯಮಂತ್ರಿಗಳ ಜೊತೆಚರ್ಚೆ ನಡೆಸಿ, ನಿಮ್ಮ ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿಗಮನ ಸೆಳೆಯುತ್ತೇನೆ. ಅಲ್ಲಿಯವರೆಗೆ ಪ್ರತಿಭಟನೆ ಹಿಂದಕ್ಕೆ ಪಡೆಯುವಂತೆ ಮನವಿ ಮಾಡಿದರು.

Advertisement

ಶಾಸಕರ ಮನವಿಗೆ ಸ್ಪಂದಿಸಿದ ಅಡಕೆ ವರ್ತಕರ ಸಂಘವು ಪ್ರಾಂಗಣದಲ್ಲಿ ನಡೆಸುತ್ತಿದ್ದ ಪ್ರತಿಭಟನೆಯನ್ನು ಹಿಂದಕ್ಕೆ ಪಡೆಯಲು ಒಪ್ಪಿಗೆ ಸೂಚಿಸಿದರೂ, ಅಡಕೆ ಚೇಂಬರ್‌ ನಿರ್ದೇಶನದ ನಂತರ ಅಡಕೆ ವಹಿವಾಟು ಪುನರಾರಂಭಿಸುವ ಕುರಿತು ಗಮನ ಹರಿಸುವುದಾಗಿ ತಿಳಿಸಿದರು.

ಅಡಕೆ ದಲಾಲರ ಸಂಘದ ಅಧ್ಯಕ್ಷ ಮೋಹನ್‌ ಗೌಡ, ಎಪಿಎಂಸಿ ಅಧ್ಯಕ್ಷ ಚೇತನರಾಜ್‌ ಕಣ್ಣೂರು, ಅಡಕೆ ವರ್ತಕರ ಸಂಘದ ಪ್ರಮುಖರಾದ ಕೆ.ಎಸ್‌. ವೆಂಕಟೇಶ್‌,ಸುರೇಶ್‌ ಕೆ.ಸಿ., ಯೋಜನಾ ಮಂಡಳಿ ಸದಸ್ಯ ಪ್ರಸನ್ನಕೆರೆಕೈ, ಅಮಿತ್‌ ಹೆಗಡೆ, ಆರೀಫ್‌ ಆಲಿಖಾನ್‌, ನಿರಂಜನ ಕೋರಿ, ಶಶಿಧರ ಎಂ.ಎಸ್‌., ಲಿಂಗರಾಜ್‌ ಬಿ.ಎಚ್‌.,  ಶಂಕರ ಅಳ್ವಿಕೋಡಿ, ಮಂಜುನಾಥ ಮೊಗೇರ, ಮುರಳಿ ಮಂಚಾಲೆ ಇನ್ನಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next