Advertisement

ಸರ್ಕಾರದ ರೈತ ವಿರೋಧಿ ನೀತಿಗೆ ಆಕ್ರೋಶ

03:59 PM Aug 09, 2020 | Suhan S |

ಮಾಯಕೊಂಡ: ಸರ್ಕಾರ ರೈತ ವಿರೋಧಿ  ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ರೈತ ಸಂಘ ಹಾಗೂ ಹಸಿರುಸೇನೆ ವತಿಯಿಂದ ಶನಿವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಲಾಯಿತು.

Advertisement

ರೈತ ಸಂಘದ ರಾಜ್ಯ ಕಾರ್ಯದರ್ಶಿ ಬಲ್ಲೂರು ರವಿಕುಮಾರ್‌ ಮಾತನಾಡಿ, ಎಪಿಎಂಸಿ ಕಾಯ್ದೆ, ಭೂಸುಧಾರಣಾ ಕಾಯ್ದೆ, ವಿದ್ಯುತ್‌ ಖಾಸಗೀಕರಣ ಬೀಜ ಕಾಯ್ದೆಗಳನ್ನು ತಿದ್ದುಪಡಿ ಮಾಡಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮುಂದಾಗಿವೆ. ಕೋವಿಡ್ ನೆಪವೊಡ್ಡಿ ದೇಶದಲ್ಲಿ 144ನೇ ಸೆಕ್ಷನ್‌ ಜಾರಿ ಮಾಡಲು ಹುನ್ನಾರ ನಡೆಸಿವೆ ಎಂದು ಆರೋಪಿಸಿದರು. ಅಗತ್ಯ ವಸ್ತುಗಳ ಕಾಯ್ದೆಯಡಿ ಖರೀದಿ ದಾಸ್ತಾನು ಮಾರಾಟ ದರಗಳ ಮೇಲಿನ ಸರ್ಕಾರದ ನಿಯಂತ್ರಣವನ್ನು ತೆಗೆದು ಹಾಕುವುದರಿಂದ ಡಿಮಾರ್ಟ್‌, ರಿಲಯನ್ಸ್‌, ಮೋರ್‌, ಬಿಗ್‌ ಬಾಸ್ಕೆಟ್‌ ಮುಂತಾದ ದೈತ್ಯ ಕಂಪನಿಗಳ ಹಿಡಿತಕ್ಕೆ ಅನೂಕೂಲ ಮಾಡಿಕೊಟ್ಟಂತಾಗುತ್ತದೆ. ಆದ್ದರಿಂದ ತಿದ್ದುಪಡಿಯನ್ನು ರದ್ದು ಮಾಡಬೇಕು ಹಾಗೂ ಕೃಷಿ ಸೇವೆಗಳ ರೈತರ ಒಪ್ಪಂದದ ಸುಗ್ರೀವಾಜ್ಞೆ ರದ್ದು ಮಾಡಿ ಸ್ವಾಮಿನಾಥನ್‌ ವರದಿ ಜಾರಿಗೊಳಿಸಬೇಕು ಎಂಬಿತ್ಯಾದಿ ಬೇಡಿಕೆ ಈಡೇರಿಸಬೇಕೆಂದು ಒತ್ತಾಯಿಸಿದರು.

ಮಾಯಕೊಂಡ ಠಾಣೆ ಪಿಎಸ್‌ಐ ಮೂಲಕ ಸರ್ಕಾರಕ್ಕೆ

ಮನವಿ ಸಲ್ಲಿಸಲಾಯಿತು. ರೈತ ಮುಖಂಡರಾದ ಚಿಕ್ಕನಹಳ್ಳಿ ರೇವಣ್ಣ, ಪ್ರಸಾದ್‌, ಪಾಮೇನಹಳ್ಳಿ ಲಿಂಗರಾಜು, ಅಣಬೇರು ಕುಮಾರಸ್ವಾಮಿ, ಆನಗೋಡು ಭೀಮಣ್ಣ, ಸಿ.ಟಿ. ನಿಂಗಪ್ಪ, ಪ್ರತಾಪ, ಗೌಡ್ರ ಅಶೋಕ, ರೇವಣ್ಣ, ಮುಂಡರಗಿ ರಾಮಣ್ಣ, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪೂಜಾರ್‌ ಮೋಹನ್‌, ಮಾಜಿ ಅಧ್ಯಕ್ಷ ಪ್ರಕಾಶ್‌, ಮುಖಂಡರಾದ ಒಳಗಡ್ಡಿ ಲಕ್ಷ್ಮಣ್ಣ, ಪುಟ್ಟರಂಗಸ್ವಾಮಿ, ಗಂಗಾಧರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next