Advertisement

ವೆಂಕಯ್ಯನಾಯ್ಡು ವಿರುದ್ಧ ಆಕ್ರೋಶ

11:40 AM Jun 28, 2017 | |

ಬೆಂಗಳೂರು: ನಮ್ಮ ಮೆಟ್ರೋದಲ್ಲಿ ಹಿಂದಿ ಹೇರಿಕೆ ಮತ್ತು ಅದನ್ನು ಸಮರ್ಥಿಸಿಕೊಂಡಿರುವ ಕೇಂದ್ರ ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ಅವರ ಕ್ರಮವನ್ನು ಕನ್ನಡ ಗೆಳೆಯರ ಬಳಗ ಖಂಡಿಸಿದೆ. 

Advertisement

ಕರ್ನಾಟಕದಿಂದ ಮೂರು ಬಾರಿ ರಾಜ್ಯಸಭೆಗೆ ಆಯ್ಕೆಯಾಗಿ ಹೋದ ವೆಂಕಯ್ಯ ನಾಯ್ಡು ಅವರು ಬೆಂಗಳೂರು ಮೆಟ್ರೋದಲ್ಲಿ ಹಿಂದಿ ಹೇರಿಕೆಯನ್ನು ಸಮರ್ಥಿಸಿಕೊಳ್ಳುವ ಭರದಲ್ಲಿ ಹಿಂದಿ ರಾಷ್ಟ್ರ ಭಾಷೆ, ಅದನ್ನು ಕಲಿಯುವುದಿಲ್ಲ, ಬಳಸುವುದಿಲ್ಲ ಅನ್ನಲಾಗದು ಎಂದು ಹೇಳುವ ಮೂಲಕ  ಸಂವಿಧಾನ ಮತ್ತು ಪ್ರಜಾಪ್ರಭುತ್ವಕ್ಕೆ ಎಸಗಿದ್ದಾರೆ ಎಂದು ಕನ್ನಡ ಗೆಳೆಯರ ಬಳಗದ ಸಂಚಾಲಕ ರಾ.ನಂ. ಚಂದ್ರಶೇಖರ್‌ ಆರೋಪಿಸಿದ್ದಾರೆ.

ಅಲ್ಲದೆ, ವೆಂಕಯ್ಯ ನಾಯ್ಡು ಅವರು ತಮ್ಮ ಈ ಹೇಳಿಕೆಗೆ ಬಹಿರಂಗ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ. ಎಲ್ಲ ದೇಶೀಯ ಬಾಷೆಗಳನ್ನು ಸಮಾನವಾಗಿ ಕಾಣುವ ಭಾಷಾ ನೀತಿಯನ್ನು ರೂಪಿಸುವಂತೆ ಕೇಂದ್ರ ಸರಕಾರವನ್ನು ಒತ್ತಾಯಿಸ ಬೇಕಿದೆ ಎಂದು ಕನ್ನಡ ಗೆಳೆಯರ ಬಳಗ ಭಾವಿಸಿದೆ.  

ಹಿಂದಿಯನ್ನು ಸಂವಿಧಾನದಲ್ಲಿ ಎಲ್ಲೂ ರಾಷ್ಟ್ರಭಾಷೆ ಎಂದು ಹೇಳದಿದ್ದರೂ, ಅದನ್ನು ರಾಷ್ಟ್ರಭಾಷೆ ಎಂದು ಜನಸಾಮಾನ್ಯರ ಮನಸ್ಸಿನಲ್ಲಿ ಬಿತ್ತುವ ಕೆಲಸ ಮಾಡಲಾಗುತ್ತಿದೆ. ಸ್ವಾತಂತ್ರ ಬಂದ ದಿನದಿಂದಲೂ ತಮಿಳುನಾಡು ಬಿಟ್ಟು ಇತರೆ ರಾಜ್ಯಗಳಲ್ಲಿ ಹಿಂದಿ ಹೇರುವ ಪ್ರಯತ್ನ ನಡೆಯುತ್ತಲೇ ಇದೆ. ವೆಂಕಯ್ಯ ನಾಯ್ಡು ಕೂಡ ಇದೇ ಕೆಲಸ ಮಾಡಿದ್ದಾರೆ ಎಂದು ದೂರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next