Advertisement

ಬಿಜೆಪಿ ಸರ್ಕಾರ ವಿರುದ್ಧ ಆಕ್ರೋಶ

09:32 PM Jul 08, 2021 | Team Udayavani |

ರಾಣಿಬೆನ್ನೂರ: ಕೇಂದ್ರದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ದೈನಂದಿನ ಅಗತ್ಯ ವಸ್ತುಗಳು ಸೇರಿ ಡೀಸೆಲ್‌, ಪೆಟ್ರೋಲ್‌ ಮತ್ತು ಅಡುಗೆ ಅನಿಲ ಸೇರಿದಂತೆ ಇತರ ವಸ್ತುಗಳ ಬೆಲೆ ಗಣನೀಯವಾಗಿ ಹೆಚ್ಚಿಸಿರುವುದನ್ನು ಖಂಡಿಸಿ ಬುಧವಾರ ಕಾಂಗ್ರೆಸ್‌ ಕಾರ್ಯಕರ್ತರು ಮತ್ತು ಮುಖಂಡರು ಸೈಕಲ್‌ ಜಾಥಾ ಮೂಲಕ ನಗರದಲ್ಲಿ ಪ್ರತಿಭಟನೆ ನಡೆಸಿದರು.

Advertisement

ಪ್ರತಿಭಟನೆಯು ಇಲ್ಲಿನ ಕೆಇಬಿ ಗಣೇಶ ದೇವಸ್ಥಾನದಿಂದು ಹೊರಟು ಬಸ್‌ ನಿಲ್ದಾಣ, ಅಂಚೆ ವೃತ್ತ, ಎಂಜಿ ರಸ್ತೆ, ಪಿಬಿ ರಸ್ತೆ ಮೂಲಕ ಸಂಚರಿಸಿ ಮಿನಿ ವಿಧಾನ ಸೌಧಕ್ಕೆ ತೆರಳಿ ತಹಶೀಲ್ದಾರರಿಗೆ ಮನವಿ ಅರ್ಪಿಸಿದರು. ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರಕಾರದ ವಿರುದ್ಧ  ಧಿಕ್ಕಾರ ಕೂಗಿ ತುರ್ತಾಗಿ ಬೆಲೆ ಇಳಿಸಬೇಕು. ಇಲ್ಲವಾದರೆ ಉಗ್ರ ಪ್ರತಿಭಟನೆ ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದರು.

ಕೆಪಿಸಿಸಿ ಕಾರ್ಯದರ್ಶಿ ಪ್ರಕಾಶ್‌ ಕೋಳಿವಾಡ, ಕೆಪಿಸಿಸಿ ಜಿಲ್ಲಾ ವೀಕ್ಷಕ ವೆಂಕಟೇಶ ಮಾತನಾಡಿದರು. ಜಿಪಂ ಮಾಜಿ ಅಧ್ಯಕ್ಷ ಏಕನಾಥ ಬಾನುವಳ್ಳಿ, ಮಂಜನಗೌಡ ಪಾಟೀಲ, ಶೇಖಪ್ಪ ಹೊಸಗೌಡ್ರ, ಡಾ| ಆರ್‌.ಎಂ. ಕುಬೇರಪ್ಪ, ವೀರನಗೌಡ ಪೊಲೀಸಗೌಡ್ರ, ಕೃಷ್ಣಪ್ಪ ಕಂಬಳಿ, ಬಸಣ್ಣ ಮರದ, ರವೀಂದ್ರಗೌಡ ಪಾಟೀಲ, ನಿಂಗರಾಜ ಕೋಡಿಹಳ್ಳಿ, ಗಂಗಾಧರ ಬಣಕಾರ, ಬಸವರಾಜ ಸವಣೂರ, ಚಂದ್ರಮ್ಮ ಬಿಷಣ್ಣನವರ, ಸಿರಿನ್‌ತಾಜ್‌ ಶೇಖ್‌, ಶೇರು ಕಾಬೂಲಿ, ಸುರೇಶ ಜಾಡಮಾಲಿ, ಬಸವರಾಜ ಹುಚ್ಚಗೊಂಡರ, ಪುಟ್ಟಪ್ಪ ಮರಿಯಮ್ಮನವರ, ಈಕ್ಬಾಲಸಾಬ ರಾಣೆಬೆನ್ನೂರ, ಡಿಳ್ಳೆಪ್ಪ ಅಣ್ಣೆರ, ಮಲ್ಲೇಶ ಮದೆÉàರ, ಯಲ್ಲಪ್ಪ ರಡ್ಡೇರ, ರಮೇಶ ಬಿಸಲಳ್ಳಿ ಸೇರಿದಂತೆ ಮತ್ತಿತರರು ಜಾಥಾದಲ್ಲಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next